ಕೃಷಿ ಪತ್ತಿನ ಸಂಘಕ್ಕೆ ಪಿ.ಕೆ.ರಮೇಶ್, ಕೃಷ್ಣಚಾರಿ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆ

KannadaprabhaNewsNetwork | Published : Apr 30, 2025 12:31 AM

ಸಾರಾಂಶ

10 ಮಂದಿ ಚುನಾಯಿತ ನಿರ್ದೇಶಕ ಹಾಗೂ ಬ್ಯಾಂಕ್ ಪ್ರತಿನಿಧಿ ಸೇರಿ ಒಟ್ಟು 12 ಸದಸ್ಯರ ಸಂಖ್ಯಾಬಲ ಹೊಂದಿರುವ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು ಮೈತ್ರಿ ಅಭ್ಯರ್ಥಿ ಪಿ.ಕೆ.ರಮೇಶ್ ಹಾಗೂ ರೈತಸಂಘ- ಕಾಂಗ್ರೆಸ್ ಬೆಂಬಲಿತ ತಿಮ್ಮರಾಜು ನಾಮಪತ್ರ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಪಟ್ಟಸೋಮನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ - ಬಿಜೆಪಿ ಮೈತ್ರಿಕೂಟದ ಪಿ.ಕೆ.ರಮೇಶ್ ಹಾಗೂ ಕೃಷ್ಣಾಚಾರಿ ಆಯ್ಕೆಯಾದರು.

10 ಮಂದಿ ಚುನಾಯಿತ ನಿರ್ದೇಶಕ ಹಾಗೂ ಬ್ಯಾಂಕ್ ಪ್ರತಿನಿಧಿ ಸೇರಿ ಒಟ್ಟು 12 ಸದಸ್ಯರ ಸಂಖ್ಯಾಬಲ ಹೊಂದಿರುವ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು ಮೈತ್ರಿ ಅಭ್ಯರ್ಥಿ ಪಿ.ಕೆ.ರಮೇಶ್ ಹಾಗೂ ರೈತಸಂಘ- ಕಾಂಗ್ರೆಸ್ ಬೆಂಬಲಿತ ತಿಮ್ಮರಾಜು ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾಚಾರಿ ಹಾಗೂ ರಜಿನಿ ನಾಮಪತ್ರ ಸಲ್ಲಿಸಿದರು. ನಂತರ ಚುನಾವಣಾಧಿಕಾರಿ ಆರ್.ನಿರ್ಮಲ ಮತದಾನ ಪ್ರಕ್ರಿಯೆ ನಡೆಸಿದರು.

ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ ಮೈತ್ರಿ ಅಭ್ಯರ್ಥಿ ಪಿ.ಕೆ.ರಮೇಶ್ ಅವರಿಗೆ -7 ಮತ ಹಾಗೂ ರೈತಸಂಘ-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ತಿಮ್ಮರಾಜು-5 ಮತಗಳ ಬಂದವು. ಪಿ.ಕೆ.ರಮೇಶ್ ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾಚಾರಿ-7 ಹಾಗೂ ರಜಿನಿ-5 ಮತಗಳ ಬಂದವು. ಕೃಷ್ಣಾಚಾರಿ ಗೆಲುವು ಸಾಧಿಸಿಸಿದರು.

ಪಿ.ಕೆ.ರಮೇಶ್ ಅಧ್ಯಕ್ಷರಾಗಿ, ಕೃಷ್ಣಾಚಾರಿ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಹೊರಗೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಎಲ್ಲಾ ಮುಖಂಡರು, ಬೆಂಬಲಿಗರು ಅಭಿನಂದಿಸಿದರು.

ಈ ವೇಳೆ ನಿರ್ದೇಶಕರಾದ ಪಿ.ಬಿ.ಅನಿಲ್ ಕುಮಾರ್, ರವಿಕುಮಾರ್, ಧಮೇಂದ್ರ, ಪ್ರಕಾಶ್, ಸೋಮ್ ಪ್ರಭಾವತಿ, ಕೆ.ಪಿ.ಚಂದ್ರಶೇಖರ್, ಅಶೋಕ, ಮುಖಂಡರಾದ ಪಿಎಲ್‌ಡಿ ನಿರ್ದೇಶಕ ಎನ್.ಮುರುಳಿ, ಪಾಂಡುರಂಗಸ್ವಾಮಿ, ತಾಪಂ ಮಾಜಿ ಸದಸ್ಯ ಪಿ.ಎಂ.ರಾಮಲಿಂಗೇಗೌಡ, ಕರೀಗೌಡ, ರಾಮೇಗೌಡ, ಬಿಜೆಪಿ ಅಧ್ಯಕ್ಷ ಧನಂಜಯ್, ಕೆ.ಎಲ್.ಆನಂದ್, ರಾಮಸ್ವಾಮಿ, ಮಾಕಾಂಡಯ್ಯ, ದಿನೇಶ್, ಡೇರಿ ರಾಮು, ಕೆ.ಎಲ್.ಆನಂದ್, ಶಂಭೂನಹಳ್ಳಿ ಮಂಜುನಾಥ್, ಚನ್ನೇಗೌಡ, ಈರೇಗೌಡ, ವಿನಯ್, ಸುರೇಶ್, ಎಲ್.ಆನಂದ, ಅಶೋಕ್, ಚಂದ್ರು, ಕಾರ್‍ಯದರ್ಶಿ ಸುರೇಶ್ ಸೇರಿದಂತೆ ಹಲವರು ಇದ್ದರು.

Share this article