ಚೌಟರ ಅರಮನೆಯ ಆಡಳಿತಕ್ಕೆ ಒಳಪಟ್ಟ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.28ರಿಂದ ಮಾರ್ಚ್ 7ರ ವರೆಗೆ ನಡೆಸುವುದೆಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಲ್ಲಿನ ಚೌಟರ ಅರಮನೆಯ ಆಡಳಿತಕ್ಕೆ ಒಳಪಟ್ಟ ಪುತ್ತಿಗೆ ಮತಾತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ.28ರಿಂದ ಮಾರ್ಚ್ 7ರ ವರೆಗೆ ನಡೆಸುವುದೆಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಭಾನುವಾರ ಸಂಜೆ ದೇವಳದ ಆವರಣದಲ್ಲಿ ನಡೆದ ಸಭೆಯ ಮೊದಲು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನಾಂಕವನ್ನು ತಂತ್ರಿಗಳು, ಅರ್ಚಕ ವರ್ಗ, ಜೀರ್ಣೋದ್ಧಾರ ಸಮಿತಿ ಹಾಗೂ ದೇವಳದ ಸಿಬ್ಬಂದಿಗಳನ್ನೊಳಗೊಂಡು ಸಪರಿವಾರ ಶ್ರೀ ದೇವರಿಗೆ ಪ್ರಾರ್ಥನಾ ಪೂರ್ವಕವಾಗಿ ನಿವೇದಿಸಿಕೊಳ್ಳಲಾಯಿತು.
ಎಡಪದವು ವೆಂಕಟೇಶ ತಂತ್ರಿಯವರು ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ದಿನಾಂಕವನ್ನು ಘೋಷಿಸಿ ದೇವಳಕ್ಕೆ ಸಂಬಂಧಪಟ್ಟ ಊರ ಜನರು ಬ್ರಹ್ಮಕಲಶ ಪರ್ಯಂತ ಪಾಲಿಸಬೇಕಾದ ನಿಯಾಮಾವಳಿಗಳನ್ನು ತಿಳಿಸಿದರು.ದೇವಳದ ಅನುವಂಶಿಕ ಆಡಳಿತ ಮೊಕ್ತಸರ ಚೌಟರ ಅರಮನೆಯ ಕುಲದೀಪ್ ಎಂ. ಮಾತನಾಡಿ, ಭಕ್ತರ ಸಂಕಲ್ಪ, ದೇವರ, ಭಕ್ತರ ಕರಸೇವೆ, ದಾನಿಗಳ ಕೊಡುಗೆಯೊಂದಿಗೆ ವ್ಯವಸ್ಥಿತ ರೀತಿಯಲ್ಲಿ ದೇವಾಲಯ ಜೀರ್ಣೋದ್ಧಾರಗೊಳ್ಳುತ್ತಿದೆ. ಶೇ.75ರಷ್ಟು ಕೆಲಸಗಳು ಮುಗಿದಿದ್ದು, ಮುಂದಿನ ಎಲ್ಲ ಕೆಲಸಗಳಿಗೂ ಭಕ್ತರ ಸಹಕಾರ ಅತ್ಯಗತ್ಯ ಎಂದರು.
ದೇವಳದ ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಕೆ. ಶ್ರೀಪತಿ ಭಟ್, ವಿದ್ಯಾ ರಮೇಶ್ ಭಟ್, ನೀಲೇಶ್ ಶೆಟ್ಟಿ ಸಹಿತ ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.ಪ್ರಶಾಂತ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.