ಶ್ರೀ ಕುಮಾರವ್ಯಾಸ ಪದ್ಯ ವ್ಯಾಖ್ಯಾನಿಸುವುದು ಸುಯೋಗ: ವೈ.ಎಸ್.ವಿ.ದತ್ತ

KannadaprabhaNewsNetwork |  
Published : Jan 15, 2024, 01:47 AM IST
ತರೀಕೆರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಗಾಟನೆ | Kannada Prabha

ಸಾರಾಂಶ

ಬ್ರಾಹ್ಮಣ ಸೇವಾ ಸಮಿತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ 131ನೇ ರಥೋತ್ಸವ ಅಂಗವಾಗಿ ಪಟ್ಟಣದ ಅನ್ನಪೂರ್ಣ ಭವನದಲ್ಲಿ ಏರ್ಪಡಿಸಿದ್ದ ಸಾಂಸ್ಕತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ವೈಎಸ್ವಿ ದತ್ತ ಶ್ರೀ ಕುಮಾರವ್ಯಾಸರ ಪದ್ಯಗಳಿಗೆ ವ್ಯಾಖ್ಯಾನಿಸುವಂತಹ ಸುಯೋಗ ನನಗೆ ದೊರೆತಿರುವುದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ಕುಮಾರವ್ಯಾಸರ ಪದ್ಯಗಳಿಗೆ ವ್ಯಾಖ್ಯಾನಿಸುವಂತಹ ಸುಯೋಗ ನನಗೆ ದೊರೆತಿರುವುದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ ಎಂದು ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದ್ದಾರೆ.

ಶನಿವಾರ ಬ್ರಾಪ್ಮಣ ಸೇವಾ ಸಮಿತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ 131ನೇ ರಥೋತ್ಸವ ಅಂಗವಾಗಿ ಪಟ್ಟಣದ ಅನ್ನಪೂರ್ಣ ಭವನದಲ್ಲಿ ಏರ್ಪಡಿಸಿದ್ದ ಸಾಂಸ್ಕತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಬಹಳ ಪೂರ್ವಜರ ಕಾಲದಿಂದಲೂ ಗಮಕ ವಾಚನಕ್ಕೆ ನನ್ನಿಂದ ವ್ಯಾಖ್ಯಾನಿಸುವ ಸೌಭಾಗ್ಯ ದೊರೆತಿರುವ ನಿಟ್ಟಿನಲ್ಲಿ ಇಂದು ಮತ್ತೂರು ಗ್ರಾಮದ ಗಮಕ ವಿದ್ವಾನ್ ಅಚ್ಯುತ ಅವಧಾನಿ ಅವರೊಂದಿಗೆ ಶ್ರೀ ಕುಮಾರವ್ಯಾಸರ ಪದ್ಯಗಳಿಗೆ ವ್ಯಾಖ್ಯಾನಿಸುವ ಸುಯೋಗ ದೊರೆತಿರುವುದು ಸಂತೋಷ ತಂದಿದೆ. ಅರಣ್ಯ ಪರ್ವದ ಘೋಷಯಾತ್ರೆ ಪರ್ವದಲ್ಲಿನ ಸ್ವಾರಸ್ಯಕರವಾಗಿರುವ ಪ್ರಸಂಗಗಳು ಶ್ರೀ ಕುಮಾರವ್ಯಾಸರು ಇಂದಿನ ಸಾಮಾಜಿಕ, ರಾಜಕೀಯ, ಅರ್ಥಿಕವಾಗಿ ಪ್ರಸ್ತುತವಾದ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಲಾಗುತ್ತಿದೆ ಎಂದು ಹೇಳಿದರು.

ಬ್ರಾಹ್ಮಣ ಸೇವಾ ಸಮಿತಿ ಉಪಾಧ್ಯಕ್ಷ ಟಿ.ಎಲ್. ರಘು ಭಾರದ್ವಾಜ್ ಮಾತನಾಡಿ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ 131ನೇ ರಥೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಮತ್ತೂರು ಗ್ರಾಮ ಗಮಕ ವಿದ್ವಾನ್ ಅಚ್ಯುತ ಅವಧಾನಿ ಅವರಿಂದ ವಾಚನ ಮತ್ತು ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರಿಂದ ವ್ಯಾಖ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ವೇ.ಬ್ರ.ಶ್ರೀ ವಾಚಸ್ಪತಿ ಅವರಿಂದ ವೇದಘೋಷ ಏರ್ಪಡಿಸಲಾಗಿತ್ತು. ಸುಬ್ಬುಕೃಷ್ಣ ಪ್ರಾರ್ಥಿಸಿದರು. ಕಾವೇರಿ ನಿರೂಪಿಸಿದರು.

ಸಮಿತಿ ನಿರ್ದೇಶಕ ಸೂರ್ಯನಾರಾಯಣ ಶರ್ಮ,ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಎ.ಓ ಶಶಿಧರ್, ಸಮಿತಿ ಕಾರ್ಯದರ್ಶಿ ಆರ್.ಎನ್.ಶ್ರೀಧರ್, ಸಮಿತಿ ನಿರ್ದೇಶಕರು, ಶ್ರೀವತ್ಸ ಭಜನಾ ಮಂಡಳಿ ಉಪಾಧ್ಯಕ್ಷೆ ಭಾಮಾ ಸುಬ್ರಹ್ಮಣ್ಯ ಭಾಗವಹಿಸಿದ್ದರು. 14ಕೆಟಿಆರ್.ಕೆ.02ಃ

ತರೀಕೆರೆಯಲ್ಲಿ ಬ್ರಾಹ್ಮಣ ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟನೆಯನ್ನು ಮಾಜಿ ಶಾಸಕ ವೈ.ಎಸ್.ವಿ.ದತ್ತ ನೆರವೇರಿಸಿದರು. ಗಮಕ ವಿದ್ಯಾನ್ ಅಚ್ಚುತ ಅವಧಾನಿ, ಸಮಿತಿ ಉಪಾಧ್ಯಕ್ಷರು ಟಿ.ಎಲ್. ರಘು ಭಾರದ್ವಾಜ್, ಕಾರ್ಯದರ್ಶಿ ಆರ್.ಎನ್.ಶ್ರೀಧರ್, ಶ್ರೀವತ್ಸ ಭಜನಾ ಮಂಡಳಿ ಉಪಾಧ್ಯಕ್ಷೆ ಭಾಮಾ ಸುಬ್ರಹ್ಮಣ್ಯ, ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಎ.ಓ.ಶಶಿಧರ್ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ