14ರಿಂದ ಶ್ರೀ ಕುರುಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನ ವಾರ್ಷಿಕ ಜಾತ್ರೆ

KannadaprabhaNewsNetwork |  
Published : Apr 12, 2026, 02:45 AM IST
ಎಐಟಿ | Kannada Prabha

ಸಾರಾಂಶ

ನಗರದ ಕೋಡಿಕಲ್‌ನ ಶ್ರೀ ಕುರುಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಏ.14ರಿಂದ 26ರವರೆಗೆ ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ.

ಮಂಗಳೂರು: ನಗರದ ಕೋಡಿಕಲ್‌ನ ಶ್ರೀ ಕುರುಅಂಬಾ ರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಏ.14ರಿಂದ 26ರವರೆಗೆ ಬ್ರಹ್ಮಶ್ರೀ ದೇರೆಬೈಲು ವಿಠಲದಾಸ ತಂತ್ರಿ ನೇತೃತ್ವದಲ್ಲಿ ನಡೆಯಲಿದೆ.

ಏ.13ರಂದು ರಾತ್ರಿ 8ಕ್ಕೆ ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ವಾಸ್ತುಪೂಜೆ, ರಾಕ್ಷೋಘ್ನ ಹೋಮ, ದಿಕ್ಬಾಲ ಬಲಿ ನೆರವೇರಲಿದೆ. ಏ.14ರಂದು ಬೆಳಗ್ಗೆ 9ರಿಂದ ನವಕ ಕಲಶ, ಪ್ರಧಾನ ಹೋಮ, ಶ್ರೀದೇವಿಗೆ ಹಾಗೂ ಸುಬ್ರಹ್ಮಣ್ಯ ದೇವರಿಗೆ ಕಲಶಾಭಿಷೇಕ, ಸುಬ್ರಹ್ಮಣ್ಯ ದೇವರಿಗೆ ಹೂವಿನ ಪೂಜೆ, ಮಧ್ಯಾಹ್ನ 12ಕ್ಕೆ ಧ್ವಜಾರೋಹಣ, 1.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಶ್ರೀ ರಾಜರಾಜೇಶ್ವರೀ ದೇವರಿಗೆ ಹೂವಿನ ಪೂಜೆ, ಉತ್ಸವ ಬಲಿ, ರಾತ್ರಿ ಪೂಜೆ, ಭೂತಬಲಿ ನಡೆಯಲಿದೆ.

ಏ.15ರಂದು ಪ್ರಾತಃಕಾಲ 4.30ಕ್ಕೆ ಶ್ರೀ ರಾಜರಾಜೇಶ್ವರೀ ದೇವರಿಗೆ ದೀಪದ ಬಲಿ, ಬೆಳಗ್ಗೆ 9ಕ್ಕೆ ನವಕ ಪ್ರಧಾನ ಹೋಮ, ಕಲಶಾಭೀಷೇಕ, 10ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆಉತ್ಸವ ಬಲಿ, ಪೇಟೆ ಸವಾರಿ, ಕಟ್ಟೆಪೂಜೆ, ರಾತ್ರಿ ಪೂಜೆ, ಶ್ರೀಭೂತ ಬಲಿ, ಕವಾಟ ಬಂಧನ, ಶಯನೋತ್ಸವ, ಏ.16ರಂದು ಬೆಳಗ್ಗೆ 7ಕ್ಕೆ ಕವಾಟೋದ್ಘಾಟನೆ, ವಿವಿಧ ಅಭಿಷೇಕಗಳು, ನವಕ ಪ್ರಧಾನ ಹೋಮ, ಅಭಿಷೇಕ, 9ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಜಳಕದ ಬಲಿ, ಓಕುಳಿ ಬಲಿ, ಅವಭೃತ ಸ್ನಾನ, ಚಾಮುಂಡಿ ದೈವದ ಭೇಟಿ, ತೂಟೆದಾರ, ದರ್ಶನ ಬಲಿ, ಧ್ವಜಾವರೋಹಣ, ಬಟ್ಟಲು ಕಾಣಿಕೆ ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಮೋಹನ್‌ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಗಾದಿ ಹೊಸ ಚಿಂತನೆ, ಹೊಸ ಸಂಕಲ್ಪಗಳ ಆರಂಭ: ಡಾ. ಚಂದ್ರಕಾಂತ ಭಟ್
ಸಂಪಾಜೆ ಗ್ರಾಮ ಪಂಚಾಯಿತಿಗೆ 3ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ