ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪರಿಷತ್ ಪೋಷಕ ಅಧ್ಯಕ್ಷ ಎಂ.ಮಾಯಪ್ಪ ಚಾಲನೆ ನೀಡಿ, ಕಳೆದ ಹಲವು ವರ್ಷಗಳಿಂದ ಶ್ರೀರಾಮನವಮಿ ಆಚರಿಸಲಾಗುತ್ತಿದೆ. ಇತ್ತೀಚಿನ ತಲೆಮಾರಿನ ಜನರುಗಳಲ್ಲಿ ಧಾರ್ಮಿಕ ಶ್ರದ್ಧೆ, ದೇವರ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆ.ಎಂ.ದೊಡ್ಡಿ: ಭಾರತೀ ಕಾಲೇಜ್ ಗೇಟ್ ಸಮೀಪ ಮದ್ದೂರು- ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಭಾರತ್ ವಿಕಾಸ್ ಪರಿಷತ್‌ನಿಂದ ಶ್ರೀರಾಮನವಮಿ ಆಚರಿಸಲಾಯಿತು.
ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪರಿಷತ್ ಪೋಷಕ ಅಧ್ಯಕ್ಷ ಎಂ.ಮಾಯಪ್ಪ ಚಾಲನೆ ನೀಡಿ, ಕಳೆದ ಹಲವು ವರ್ಷಗಳಿಂದ ಶ್ರೀರಾಮನವಮಿ ಆಚರಿಸಲಾಗುತ್ತಿದೆ. ಇತ್ತೀಚಿನ ತಲೆಮಾರಿನ ಜನರುಗಳಲ್ಲಿ ಧಾರ್ಮಿಕ ಶ್ರದ್ಧೆ, ದೇವರ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜನತೆ ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ. ಇಂತಹ ದಿನಗಳನ್ನು ಆಚರಿಸುವ ಮೂಲಕ ಮುಂದಿನ ತಲೆಮಾರಿನ ಜನರಲ್ಲಿ ಧಾರ್ಮಿಕ ಭಾವನೆ ಬೆಳೆಸಬೇಕೆಂದು ಸಲಹೆ ನೀಡಿದರು. ಶ್ರೀರಾಮನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿಯುವ ಜತೆಗೆ ಆರಾಧಿಸಬೇಕೆಂದು ಹೇಳಿದರು.
ಶ್ರೀರಾಮ ಆದರ್ಶ ಪುರುಷ, ಶಾಂತಿದೂತ, ತಂದೆಯ ಮಾತನ್ನು ನಡೆಸಿಕೊಟ್ಟಂಥ ಮಹಾನ್ ವ್ಯಕ್ತಿ. ದುಷ್ಟರನ್ನು ಶಿಕ್ಷಿಸುವ, ಶಿಷ್ಟರನ್ನು ರಕ್ಷಿಸುವ, ನೇರ ವ್ಯಕ್ತಿತ್ವವುಳ್ಳ ದೇವರು ಎಂದು ಬಣ್ಣಿಸಿದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಸ್ನೇಹ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ.ದಾಸೇಗೌಡ, ಅಧ್ಯಕ್ಷ ಶಿವಮಾದೇಗೌಡ, ಕಾರ್ಯದರ್ಶಿ ಶಿವರಾಮು, ಗಾಯಿತ್ರಿ, ಕವಿತಾ ವೈಬಿಶ್ರೀ ಎ.ಬಿ.ಹಳ್ಳಿ ರಮೇಶ್, ಎಂ.ಜೆ.ರಾಮಯ್ಯ, ಕೆ. ಶೆಟ್ಟಹಳ್ಳಿ ಬೋರಯ್ಯ, ನಂಜುಂಡೇಗೌಡ, ಜಿ.ಕೃಷ್ಣ ಸಿಮೆಂಟ್ ಸಿದ್ದೇಗೌಡ ಸೇರಿದಂತೆ ಹಲವರಿದ್ದರು.
ಸಮೀಪದ ಕುರಿಕೆಂಪನದೊಡ್ಡಿಯಲ್ಲಿ ರಾಮನವಮಿ ಅಂಗವಾಗಿ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜಾ ಕೈಕಂರ್ಯಗಳನ್ನು ನೆರವೇರಿಸಿ ಪಾನಕ ಮಜ್ಜಿಗೆ ವಿತರಿಸಿದರು. ಈ ವೇಳೆ ಆತ್ಮಲಿಂಗೇಶ್ವರ ಧರ್ಮದರ್ಶಿ ಮಂಡಳಿ ಸದಸ್ಯ ಕೆ.ಎಸ್.ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಮುಖಂಡರಾದ ಕೆ.ಎಲ್. ಅರ್ಕೇಶ್, ಯೋಗೇಶ್, ಗುಂಡ ನಂದೀಶ್, ಕೆ.ಎಸ್. ನಾರಾಯಣ, ವಿಷಕಂಠೇಗೌಡ, ಶಿವಾನಂದ್, ಸೇರಿದಂತೆ ಮತ್ತಿತರಿದ್ದರು.
27ಕೆಎಂಎನ್ ಡಿ18
ಭಾರತೀನಗರದ ಭಾರತೀಕಾಲೇಜ್ ಗೇಟ್ ಬಳಿ ಭಾರತ್ ವಿಕಾಸ್ ಪರಿಷತ್ ವತಿಯಿಂದ ಶ್ರೀರಾಮನವಮಿ ಆಚರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.