ಹುಬ್ಬಳ್ಳಿ:
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ವೈರಸ್‌ನಂತೆ ಎಲ್ಲ ಕ್ಷೇತ್ರಗಳಲ್ಲೂ ಹರಡಿದ್ದು ತಂದೆ-ತಾಯಿ, ಸಮಾಜ ಜಾಗೃತವಾಗಬೇಕು. ಹಿಂದೂ ಸಂಘಟಕರು ನಿತ್ಯ ಹೋರಾಟ ಮಾಡುತ್ತಾ ಜಾಗೃತಿ ಮೂಡಿಸುತ್ತಿದೆ ಎಂದರು.
ಜಿಮ್, ಬಾರ್, ಪಾರ್ಲರ್, ಸ್ಪಾಗಳ ಮೇಲೆ ಪೊಲೀಸರು, ಸರ್ಕಾರದ ಕಣ್ಣು ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಶ್ರೀರಾಮಸೇನೆ ಕಣ್ಣಿಟ್ಟು ಇಂತಹ ಚಟುವಟಿಕೆಗಳ ತಡೆಗೆ ಕ್ರಮಕೈಗೊಳ್ಳಲಿದೆ ಎಂದ ಮುತಾಲಿಕ್, ಲವ್ ಜಿಹಾದ್ ಸೇರಿದಂತೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಾಗಿ ಶ್ರೀರಾಮಸೇನೆಯು ಹೆಲ್ಪ್‌ಲೈನ್ ಪ್ರಾರಂಭಿಸಿದೆ. 2 ವರ್ಷಗಳಲ್ಲಿ 8 ಸಾವಿರ ಕರೆ ಬಂದಿವೆ ಎಂದರೆ ಇದರ ಜಾಲ ಎಷ್ಟಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದೇಶದ ಹಲವು ಕಂಪನಿಗಳಲ್ಲಿ ಲವ್ ಜಿಹಾದ್‌ನಂತಹ ಚಟುವಟಿಕೆ ನಡೆಯುತ್ತಿದೆ. ಈ ಕುರಿತು ಸರ್ಕಾರ, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮಾತ್ರ ನಿಯಂತ್ರಣ ಸಾಧ್ಯವಾಗಲಿದೆ ಎಂದು ಹೇಳಿದರು.ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದರೂ ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟೀಕರಣ, ವೋಟ್ ಬ್ಯಾಂಕ್‌ಗಾಗಿ ಅವರ ಬಗ್ಗೆ ಏನೂ ಮಾತನಾಡುತ್ತಿಲ್ಲ. ಅವರ ಮನೆಯ ಹೆಣ್ಮಕ್ಕಳನ್ನು ಹೊತ್ತುಕೊಂಡು ಹೋದರೂ ಅವರು ಬಾಯಿ ಬಿಡುವುದಿಲ್ಲ. ಅವರಿಗೆ ಅಧಿಕಾರವೇ ಮುಖ್ಯ, ಸಂಸ್ಕೃತಿ, ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕು ಎಂಬ ಮನೋಭಾವ ಇಲ್ಲ. ಕಾಂಗ್ರೆಸ್ ಸರ್ಕಾರ ಇರುವುದರಿಂದ ಇಂಥವರ ಮೇಲೆ ಯಾವುದೇ ಕ್ರಮ ಆಗುತ್ತಿಲ್ಲ. ಇಂತಹ ಚಟುವಟಿಕೆ ನಡೆಸುವವರ ಮೇಲೆ ದೇಶದಲ್ಲೇ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.