ಲವ್‌ ಜಿಹಾದ್‌ ತಡೆಗೆ ಶ್ರೀರಾಮಸೇನೆ ಸಹಾಯವಾಣಿ

KannadaprabhaNewsNetwork | Updated : May 30 2024, 12:04 PM IST

ಸಾರಾಂಶ

 ಬಾಗಲಕೋಟೆ ರಾಜ್ಯದಲ್ಲಿ ಲವ್ ಜಿಹಾದ್‌ಗೆ ಬಲಿಯಾಗುತ್ತಿರುವ ಹಿಂದು ಯುವತಿಯರ ರಕ್ಷಣೆಗೆ ಶ್ರೀರಾಮಸೇನೆ ಸಹಾಯವಾಣಿ ಆರಂಭಿಸಲಾಗಿದೆ ಎಂದು ಶ್ರೀರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಣ್ಣ ಗುಂಜಿಗಾವಿ ತಿಳಿಸಿದರು.

 ಬಾಗಲಕೋಟೆ :  ರಾಜ್ಯದಲ್ಲಿ ಲವ್ ಜಿಹಾದ್‌ಗೆ ಬಲಿಯಾಗುತ್ತಿರುವ ಹಿಂದು ಯುವತಿಯರ ರಕ್ಷಣೆಗೆ ಶ್ರೀರಾಮಸೇನೆ ಸಹಾಯವಾಣಿ ಆರಂಭಿಸಲಾಗಿದೆ ಎಂದು ಶ್ರೀರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಣ್ಣ ಗುಂಜಿಗಾವಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್ ಜಿಹಾದಿ ಹೆಸರಿನಲ್ಲಿ ಹಿಂದು ಯುವತಿಯರಿಗೆ ಮೋಸ ಮಾಡಿ, ಹತ್ಯೆ ಮಾಡುತ್ತಿರುವುದು ಖಂಡನೀಯ. ಇದನ್ನು ತಡೆಗಟ್ಟಿವ ಹಿನ್ನೆಲೆಯಲ್ಲಿ ಶ್ರೀರಾಮ ಸೇನಾದಿಂದ 9090443444 ಸಹಾಯವಾಣಿ ಆರಂಭಿಸಲಾಗಿದೆ. ರಾಜ್ಯದಲ್ಲಿರುವ ಹಿಂದು ಯುವತಿಯರಿಗೆ ಏನಾದರೂ ತೊಂದರೆಯಾದಲ್ಲಿ ತಕ್ಷಣ ಈ ನಂಬರ್‌ಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರೆ ಶ್ರೀ ರಾಮಸೇನಾ ರಕ್ಷಣೆಗೆ ಮುಂದಾಗಲಿದೆ ಎಂದು ಮಾಹಿತಿ ನೀಡಿದರು.

24*7 ಕಾರ್ಯನಿರ್ವಹಣೆ:

ಕರೆ ಮಾಡಿದವರ ಮಾಹಿತಿಗಳನ್ನು ಗುಪ್ತವಾಗಿಡಲಾಗುವುದು. ಶ್ರೀರಾಮ ಸೇನೆ ಆರಂಭಿಸಿರುವ ಸಹಾಯವಾಣಿಯಲ್ಲಿ ಲವ್-ಜಿಹಾದ್‌ಗೆ ಸಂಬಂಧಿಸಿದ ಕರೆಗಳನ್ನು ಮಾತ್ರ ಸ್ವೀಕರಿಸಲಾಗುವುದು. ಈ ಸಹಾಯವಾಣಿಗೆ ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದಾಗಿದೆ. ಇದು ದಿನದ 24*7 ಕಾರ್ಯನಿರ್ವಹಣೆ ಮಾಡಲಿದ್ದು, ಕರೆ ಮಾಡಿದವರಿಗೆ ಮುಂದಿನ ಕಾನೂನು ಸಲಹೆ ಕೂಡ ನೀಡಲಾಗುತ್ತದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಸಹಾಯವಾಣಿಯ ಕೇಂದ್ರ ಕಚೇರಿಯನ್ನು ಸ್ಥಾಪನೆ ಮಾಡಲಾಗಿದೆ. ರಾಜ್ಯದಲ್ಲಿ ಈ ಸಹಾಯವಾಣಿಯೂ ಪ್ರತಿ ಗ್ರಾಮ ಮಟ್ಟದಲ್ಲಿಯೂ ಮುಟ್ಟುವಂತೆ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪೊಲೀಸರಿಂದ ಅರಿವು:

ಮತಾಂತರ ಕಾಯ್ದೆ ತಡೆ ಕಾನೂನಿನಂತೆ ಲವ್ ಜಿಹಾದ್‌ಗೆ ಕೂಡ ಪ್ರತ್ಯೇಕವಾದ ಕಾನೂನು ರೂಪಿಸಿ ಜಾರಿಗೆ ತರಬೇಕು ಎಂದು ಇದೇ ವೇಳೆ ಸರ್ಕಾರಕ್ಕೆ ಆಗ್ರಹ ಮಾಡಿದರು. ಇದಕ್ಕಾಗಿ ಪ್ರತ್ಯೇಕವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಪೊಲೀಸ್ ಇಲಾಖೆಯು ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಲವ್ ಜಿಹಾದ್ ತಡೆಗಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಮತ್ತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಮುಸ್ಲಿಮರ ಓಲೈಕೆ:

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಲವ್ ಜಿಹಾದ್‌ನಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ ಬ್ಯಾಂಕ್‌ಗಾಗಿ ಮುಸ್ಲಿಂ ಸಮುದಾಯವನ್ನು ಓಲೈಸುವ ಕೆಲಸ ಮಾಡುತ್ತಿದೆ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ರಾಜು ಕಾನಪ್ಪನವರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಮುಡೆಗನೂರ ಮಾತಾಜಿ, ವೀರಾಪೂರದ ಮಲ್ಲಿಕಾರ್ಜುನ ಶ್ರೀ ಗಳು, ಶಹಾಜಿ ಪವಾರ್, ಸಿದ್ದಪ್ಪ ಬಾಲರಡ್ಡಿ, ಭೀಮಣ್ಣ ದಾಸನ್ನವರ ಸೇರಿದಂತೆ ಮತ್ತಿತರರು ಹಾಜರಿದ್ದರು.(ಫೋಟೊ 29ಬಿಕೆಟಿ8, ಎಂದು ಶ್ರೀರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಣ್ಣ ಗುಂಜಿಗಾವಿ ಬುಧವಾರ ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು)

ಶ್ರೀರಾಮ ಸೇನೆ ಆರಂಭಿಸಿರುವ ಸಹಾಯವಾಣಿಯಲ್ಲಿ ಲವ್-ಜಿಹಾದ್‌ಗೆ ಸಂಬಂಧಿಸಿದ ಕರೆಗಳನ್ನು ಮಾತ್ರ ಸ್ವೀಕರಿಸಲಾಗುವುದು. ಈ ಸಹಾಯವಾಣಿಗೆ ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದಾಗಿದೆ. ಇದು ದಿನದ 24*7 ಕಾರ್ಯನಿರ್ವಹಣೆ ಮಾಡಲಿದ್ದು, ಕರೆ ಮಾಡಿದವರಿಗೆ ಮುಂದಿನ ಕಾನೂನು ಸಲಹೆ ಕೂಡ ನೀಡಲಾಗುತ್ತದೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಸಹಾಯವಾಣಿಯ ಕೇಂದ್ರ ಕಚೇರಿಯನ್ನು ಸ್ಥಾಪನೆ ಮಾಡಲಾಗಿದೆ.

- ಮಹಾಲಿಂಗಣ್ಣ ಗುಂಜಿಗಾವಿ,ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ.

Share this article