ಕನಕಾಚಲಪತಿ ದೇವಸ್ಥಾನದಲ್ಲಿ ಶ್ರೀರಾಮ ಕಲ್ಯಾಣ

KannadaprabhaNewsNetwork |  
Published : Jan 23, 2024, 01:46 AM IST
೨೨ಕೆಎನ್‌ಕೆ-೧                                                              ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ಶ್ರೀರಾಮ ಕಲ್ಯಾಣ ನಡೆಯಿತು. | Kannada Prabha

ಸಾರಾಂಶ

ಉತ್ಸವ ಮೂರ್ತಿಗಳಾದ ಶ್ರೀದೇವಿ, ಭೂದೇವಿ ಹಾಗೂ ಕನಕಾಚಲಪತಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಪ್ರಾತಃಕಾಲದಲ್ಲಿ ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿದವು.

ಕನಕಗಿರಿ: ಶ್ರೀರಾಮಜನ್ಮಭೂಮಿಯಲ್ಲಿ ರಾಮನ ಪ್ರತಿಷ್ಠಾಪನೆ ದಿನವಾದ ಸೋಮವಾರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ವಿವಿಧ ದೇವಸ್ಥಾನಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ವಿಶೇಷ ಪೂಜೆ ನಡೆಯಿತು.ಇಲ್ಲಿನ ಕನಕಾಚಲಪತಿ ದೇವಸ್ಥಾನದಲ್ಲಿ ದೇವಸ್ಥಾನ ಸಮಿತಿ ಹಾಗೂ ಭಕ್ತರಿಂದ ಹಮ್ಮಿಕೊಂಡಿದ್ದ ಶ್ರೀರಾಮ ಕಲ್ಯಾಣ ಹಾಗೂ ಹನುಮೋತ್ಸವವು ವಿಜೃಂಭಣೆಯಿಂದ ನೆರವೇರಿತು.ಉತ್ಸವ ಮೂರ್ತಿಗಳಾದ ಶ್ರೀದೇವಿ, ಭೂದೇವಿ ಹಾಗೂ ಕನಕಾಚಲಪತಿಗೆ ಪುಷ್ಪಾಲಂಕಾರ ಮಾಡಲಾಗಿತ್ತು. ಪ್ರಾತಃಕಾಲದಲ್ಲಿ ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿದವು.ಇನ್ನು ದೇವಸ್ಥಾನದ ಪೌಳಿ, ಗೋಪುರಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ರಾಮನ ಭಕ್ತರಿಂದ ಜ.೨೧ರ ರಾತ್ರಿಯಿಡೀ ತಳಿರು-ತೋರಣ, ಕೇಸರಿ ಧ್ವಜ ಕಟ್ಟಿ ದೇಗುಲವನ್ನು ಅಲಂಕೃತಗೊಳಿಸಲಾಗಿತ್ತು. ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.ಕನಕಾಚಲ ಭಜನಾ ಸಂಘದವರಿಂದ ಭಜನೆ, ಶ್ರೀರಾಮ, ಹನುಮ ಜಪ ನಡೆಯಿತು. ರಾತ್ರಿ ವೇಳೆ ಮೂಲರಾಮ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ದೇವಸ್ಥಾನಕ್ಕೆ ಬರುವ ಭಕರು ತೀರ್ಥ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿ ಪುನೀತರಾದರು.ವಿವಿಧೆಡೆ ವಿಶೇಷ ಪೂಜೆ: ತೊಂಡಿತೇವರಪ್ಪ, ಕರಡಿಗುಡ್ಡದ ಆಂಜನೇಯ್ಯ, ತೇರಿನ ಹನುಮಂತರಾಯ ಹಾಗೂ ಅಗಸಿಯ ಪ್ರಾಣ ದೇವರಿಗೆ ವಿಶೇಷ ಪೂಜೆ, ಮಂತ್ರ ಪಠಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ಶ್ರೀರಾಮನ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ವೆಂಕಟೇಶ ಸೌದ್ರಿ, ವಿರೇಶ ಕಡಿ, ಕೀರ್ತಿ ಸೋನಿ, ನಾಗಪ್ಪ ಕೊರಡ್ಡಿ, ಶ್ರೀನಿವಾಸ ಅಯ್ಯರ್, ನೌಕರ ಸಂಘದ ಅಧ್ಯಕ್ಷ ವಿ.ಮಧುಸೂದನ, ಅರ್ಚಕ ದೇಶಿಕಾಚಾರ್ಯ, ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ ಸೇರಿದಂತೆ ಭಕ್ತರು ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ