ಶ್ರೀರಾಮ ರಾಷ್ಟ್ರೀಯತೆಯ ಸಂಕೇತ: ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್

KannadaprabhaNewsNetwork |  
Published : Jan 13, 2024, 01:33 AM ISTUpdated : Jan 13, 2024, 01:34 AM IST
೧೨ಕೆಎಂಎನ್‌ಡಿ-೫ಮಂಡ್ಯದ ಪೊಲೀಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಹಲವರಿಗೆ ವಿವೇಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ರಾಮಮಂದಿರ ಉದ್ಘಾಟನೆ ವೇಳೆ ಕಾಂಗ್ರೆಸ್‌ನಿಂದ ವಿಷ ಬೆರೆಸುವ ಕೆಲಸ, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಿಂತು ಭಾಷಣ ಮಾಡುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು. ಅದೇ ರೀತಿ ಈಗ ರಾಮಮಂದಿರ ಉದ್ಘಾಟನೆಯಾಗುವ ಮೂಲಕ ದೇಶದ ಜನರಲ್ಲಿ ರಾಮರಾಜ್ಯದ ಪರಿಕಲ್ಪನೆ ಬಿತ್ತಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ ಶ್ರೀರಾಮ ಕೂಡ ರಾಷ್ಟ್ರೀಯತೆಯ ಸಂಕೇತ. ಮಹಾತ್ಮಾ ಗಾಂಧಿಯವರೇ ರಾಮರಾಜ್ಯ ನಿರ್ಮಾಣವಾಗಬೇಕು ಎಂದು ಕನಸು ಕಂಡಿದ್ದರು. ಕಾಂಗ್ರೆಸ್ಸಿನ ಸುದೀರ್ಘ ಆಡಳಿತಾವಧಿಯಲ್ಲಿ ರಾಮರಾಜ್ಯದ ಕನಸು ನನಸಾಗಲಿಲ್ಲ ಎಂದು ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ವಿಷಾದಿಸಿದರು.

ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕದಿಂದ ನಗರದ ಪೊಲೀಸ್ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ವಿವೇಕಾನಂದರ ಕುರಿತು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ವಿವೇಕಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂತಹ ಜಯಂತಿ ದೇಶದೆಲ್ಲೆಡೆ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರವೂ ಉದ್ಘಾಟನೆಯಾಗುತ್ತಿದೆ. ಆದರೆ, ಇದರಲ್ಲಿ ಕಾಂಗ್ರೆಸ್ ವಿಷ ಬೆರೆಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಿಂತು ಭಾಷಣ ಮಾಡುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು. ಅದೇ ರೀತಿ ಈಗ ರಾಮಮಂದಿರ ಉದ್ಘಾಟನೆಯಾಗುವ ಮೂಲಕ ದೇಶದ ಜನರಲ್ಲಿ ರಾಮರಾಜ್ಯದ ಪರಿಕಲ್ಪನೆ ಬಿತ್ತಲಾಗುತ್ತಿದೆ. ಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

೧೬೧ ವರ್ಷಗಳಾದರೂ ಸ್ವಾಮಿ ವಿವೇಕಾನಂದರನ್ನು ನೆನೆಯುತ್ತಿದ್ದೇವೆ. ಅವರೊಬ್ಬ ಆದರ್ಶಪುರುಷರಾಗಿದ್ದು, ಯುವಕರ ಜೀವನಕ್ಕೆ ದಾರಿದೀಪವೂ ಆಗಿದ್ದಾರೆ ಎಂದರು.

ಹಿಂದಿ ಭವನದ ಸಂಸ್ಥಾಪಕ ಕಾರ್ಯದರ್ಶಿ ವಿನಯ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುಸೂಯರಾಣಿ, ವಕೀಲ ತಿರುಮಲ ಸ್ವಾಮಿ, ಶಿಕ್ಷಕಿ ಸುರೇಖಾ, ಗಾಯಕ ಪ್ರಾಣೇಶ್ ಅವರಿಗೆ ವಿವೇಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಮನುಜ, ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಅಧ್ಯಕ್ಷ ಪೋತೇರ ಮಹದೇವು, ಪತ್ರಕರ್ತ ಎಂ. ಶಿವಕುಮಾರ್, ಡಾ.ಹೆಚ್.ಸಿ.ಆನಂದ್, ಸುಜಾತಕೃಷ್ಣ , ಮುಖ್ಯ ಶಿಕ್ಷಕಿ ಜಯಲಕ್ಷ್ಮಮ್ಮ ಇತರರಿದ್ದರು.ಯುವ ಜನರಲ್ಲಿರುವ ಅದ್ಭುತ ಶಕ್ತಿಯಿಂದ ಮಾತ್ರ ದೇಶದ ಪ್ರಗತಿ: ಕೆ.ಎಲ್.ಸೋಮಶೇಖರ್ಮದ್ದೂರು: ಯುವ ಜನತೆಯಲ್ಲಿ ಅಡಗಿರುವ ಅದ್ಭುತ ಶಕ್ತಿಯಿಂದ ಮಾತ್ರವೇ ರಾಷ್ಟ್ರದ ರಕ್ಷಣೆ ಮತ್ತು ದೇಶ ಪ್ರಗತಿ ಉತ್ತುಂಗ ಮಟ್ಟಕ್ಕೆ ಏರಲು ಸಾಧ್ಯ ಎಂದು ತಹಸೀಲ್ದಾರ್ ಕೆ.ಎಲ್.ಸೋಮಶೇಖರ್ ಶುಕ್ರವಾರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದಿಂದ ನಡೆದ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಇಂದಿನ ಯುವ ಸಮೂಹ ಗುಣ, ಚಾರಿತ್ಯ, ಸಂಯಮ, ಶಿಸ್ತುಗಳನ್ನು ರೂಡಿಸಿಕೊಂಡಾಗ ಮಾತ್ರ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಎಂದರು.ಯುವಜನರು ನವ ಭಾರತದ ನಿರ್ಮಾಣ ಶಿಲ್ಪಿಗಳು. ಆದರೆ, ಅವರಿಗೆ ನಮ್ಮ ದೇಶದ ಸುವರ್ಣ ಇತಿಹಾಸ ಮತ್ತು ಭವ್ಯ ಪರಂಪರೆ ಬಗ್ಗೆ ಅರಿವಿಲ್ಲ. ರಾಷ್ಟ್ರದ ಹಾಗೂ ಹೋಗುಗಳ ಬಗ್ಗೆ ತೋರುತ್ತಿರುವ ನಿರಾಶಕ್ತಿ ಗಾಬರಿ ಹುಟ್ಟಿಸುವ ಪರಿಸ್ಥಿತಿಗೆ ಬಂದು ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಕಾಳೀರಯ್ಯ, ಸ್ವಾಮಿ ವಿವೇಕಾನಂದ ಕ್ರೀಡಾ ಸಂಘದ ಕಾರ್ಯದರ್ಶಿ ಎನ್.ಪ್ರಸನ್ನ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗೀತಾ, ಉಪ ಪ್ರಾಂಶುಪಾಲೆ ಸುಕನ್ಯಾ, ಶಿಕ್ಷಕರಾದ ಮೋಹನ್ ಕಿರಣ್ ಮತ್ತಿತರರು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ