ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಶ್ರೀ ನಗರದ ಗಾಂಧಿ ಭವನದಲ್ಲಿ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾತಿ, ಮತ, ಭಾಷೆ, ಪ್ರದೇಶ ಎಂಬ ಸಂಕುಚಿತ ಸಂಕೋಲೆಗಳನ್ನು ಮೀರಿ ಮಾನವ ಧರ್ಮದ ಉನ್ನತಿಗೆ ರೇಣುಕಾಚಾರ್ಯರು ಶ್ರಮಿಸಿದ್ದಾರೆ ಎಂದು ಪ್ರತಿಪಾದಿಸಿದರು.ಯಾವುದೇ ಜಾತಿ ಜನಾಂಗದಲ್ಲಿ ಹುಟ್ಟಿದ ವ್ಯಕ್ತಿ ತನ್ನ ಸತ್ಯ, ಶುದ್ಧ ಆಚರಣೆಯಿಂದ ಸದ್ಗುರುವಿಗೆ ಶರಣಾತಿ ಗುರು ನೀಡಿದ ಬೋಧಾಮೃತವನ್ನು ಅಳವಡಿಸಿಕೊಂಡು ಜೀವನದಲ್ಲಿ ಉನ್ನತಕ್ಕೆ ಏರಲು ಸಾಧ್ಯ ಎಂದು ರೇಣುಕಾಚಾರ್ಯರು ತಿಳಿಸಿದ್ದಾರೆ ಎಂದರು.
ಶ್ರೀ ಜಗದ್ಗರು ರೇಣುಕಾಚಾರ್ಯರು ಹತ್ತಿರದ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಕೊಲ್ಲಿ ಪಾಕೀಯ ಸ್ವಯಂಭೂ ಸೋಮೇಶ್ವರ ಲಿಂಗದಿಂದ ಪಾಲ್ಗುಣ ಶುದ್ಧ ತ್ರಯೋದಶಿಯಂದು ಅವತರಿಸಿದ್ದಾರೆ. ಆ ದಿನವನ್ನೇ ಪ್ರತೀ ವರ್ಷ ಎಲ್ಲೆಡೆ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವಾಗಿ ಆಚರಿಸಲಾಗುತ್ತದೆ ಎಂದರು.
ನಿವೃತ್ತ ಶಿಕ್ಷಕರಾದ ಬಿ.ಸಿ.ಶಂಕರಯ್ಯ ಮಾತನಾಡಿ ಮಲಯಾಚಲದಲ್ಲಿದ್ದ ಅಗಸ್ತ್ಯಮುನಿಗೆ ಸಿದ್ಧಾಂತ ಉಪದೇಶಿಸಿ, ಭದ್ರಾನದಿ ತೀರದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ ಸಂಸ್ಥಾಪಿಸಿದ ಜಗದ್ಗುರು ರೇಣುಕಾಚಾರ್ಯರು ಭೂಗರ್ಭ ಸಂಜಾತ ಶ್ರೀರುದ್ರಮುನಿದೇವರಿಗೆ ಉತ್ತರಾಧಿಕಾರ ದಯಪಾಲಿಸಿದ ನಂತರ ಈವರೆಗೆ ಬಾಳೆಹೊನ್ನೂರಿನ ಶ್ರೀರಂಭಾಪುರಿ ಪೀಠದಲ್ಲಿ 120 ಜಗದ್ಗುರುಗಳು ವೀರ ಸಂಹಾಸನವನ್ನು ಆರೋಹಣ ಮಾಡಿದ್ದಾರೆ ಎಂದರು.