ಹುಬ್ಬಳ್ಳಿ: ಶ್ರೀ ಸಿದ್ಧಾರೂಢರ ಕಥಾಮೃತಕ್ಕೆ ಶತಮಾನೋತ್ಸವ ಹಾಗೂ ಜಾತ್ರಾ ಮಹೋತ್ಸವ ಏಕಕಾಲಕ್ಕೆ ಬಂದಿರುವುದು ಈ ಸಲದ ಅಜ್ಜನ ಜಾತ್ರೆ ಹಲವು ವಿಶೇಷತೆಗಳಿಂದ ಕೂಡಿದೆ. ಇದರೊಂದಿಗೆ ಪ್ರತಿ ಸೋಮವಾರ ನಡೆಯುವ ಪಲ್ಲಕ್ಕಿ ಉತ್ಸವದ ಆನೆ ಅಂಬಾರಿಗೆ ಈಗ ಬೆಳ್ಳಿಯ ಕವಚ.
105 ಕೆಜಿ ತೂಕದ ಬೆಳ್ಳಿಯಿಂದ ಆನೆ, ಅದರ ಮೇಲಿನ ಅಂಬಾರಿ, ಪೀಠ ಎಲ್ಲವುಗಳಿಗೆ ಇದೀಗ ಬೆಳ್ಳಿ ಕವಚ ಸಿದ್ಧಪಡಿಸಲಾಗುತ್ತಿದೆ. ಸರಿಸುಮಾರು 1 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ ಈ ಯೋಜನೆ.
ಅಶೋಕ ಬೆಳ್ಳಿಗಟ್ಟಿ ಮತ್ತು ಅವರ ತಂಡದವರು ಬೆಳ್ಳಿ ಕವಚ ಸಿದ್ಧಪಡಿಸುವ ಕೆಲಸದಲ್ಲಿ ಆರು ತಿಂಗಳಿಂದ ನಿರತರಾಗಿದ್ದಾರೆ. ಮಠದ ಹಿಂದೆಯೇ ಒಂದು ಕೊಠಡಿಯಲ್ಲಿ ಇದನ್ನು ಸಿದ್ಧಪಡಿಸಲಾಗುತ್ತಿದೆ. ವಿವಿಧ ದಾನಿಗಳು ನೀಡಿದ ದೇಣಿಗೆಯಿಂದ ಬೆಳ್ಳಿ ಖರೀದಿಸಿ ಅದನ್ನು ಮಹಾರಾಷ್ಟ್ರದಲ್ಲಿ ಕರಗಿಸಿ ತಗಡಿನಂತೆ ರೂಪಕೊಡಲಾಗಿದೆ. ಇಲ್ಲಿ ಅದನ್ನು ಆನೆಯ ಆಕಾರಕ್ಕೆ ತಕ್ಕಂತೆ ಸುಂದರವಾದ ಕವಚ ಸಿದ್ಧಪಡಿಸಲಾಗುತ್ತಿದೆ. ಬೆಳ್ಳಿ ಮೊಳೆಗಳನ್ನೇ ಬಳಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪೂರ್ಣವಾಗಲಿದ್ದು, ಜಾತ್ರೆಯ ದಿನ ಇದನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಅಜ್ಜನ ಪಲ್ಲಕ್ಕಿ ಉತ್ಸವದ ಆನೆ ಅಂಬಾರಿಗೆ ಇನ್ಮೇಲೆ ಬೆಳ್ಳಿಯ ಕವಚ ಸಿದ್ಧವಾಗುತ್ತಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ.ಕಥಾಮೃತದಂತೆ ಅಲಂಕಾರ!ಆರೂಢರ ಕಥಾಮೃತಕ್ಕೆ ಶತಮಾನೋತ್ಸವ ಹಿನ್ನೆಲೆಯಲ್ಲಿ ಕೈಲಾಸ ಮಂಟಪದಲ್ಲಿ ಕಥಾಮೃತದಂತೆ ಅಲಂಕರಿಸಲಾಗುತ್ತಿದೆ. ಇದು ಜಾತ್ರೆಯಲ್ಲಿ ಬರುವ ಭಕ್ತರನ್ನು ಸೆಳೆಯಲಿದೆ.2ದಿನಗಳಲ್ಲಿ ಪೂರ್ಣಕಳೆದ 6 ತಿಂಗಳಿಂದ ಮಠದಲ್ಲೇ ಉಳಿದುಕೊಂಡು ಆನೆ ಅಂಬಾರಿಯ ಕವಚ ಸಿದ್ಧಪಡಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ.- ಅಶೋಕ, ಅಕ್ಕಸಾಲಿಗ