ಬಲಿಪಾಡ್ಯಮಿಗೆ ಬಸ್ತಿಮಠದಲ್ಲಿ ಶ್ರೀಗಳಿಂದ ಗೋವಿಗೆ ಪೂಜೆ

KannadaprabhaNewsNetwork |  
Published : Oct 24, 2025, 01:00 AM IST
 ನರಸಿಂಹರಾಜಪುರದ ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಶ್ರೀ ಲಕ್ಷ್ಮಿಸೇನಭಟ್ಟಾರಕ ಸ್ವಾಮೀಜಿಗಳು ಹಸುವಿಗೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಬಲಿಪಾಡ್ಯಮಿಯ ಬುಧವಾರ ಎಲ್ಲಾ ಕಡೆ ದೀಪಾವಳಿ ಸಂಭ್ರಮ, ಪಟಾಕಿ ಸಿಡಿತ ಹಾಗೂ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.

ದೀಪಾವಳಿ ಸಂಬ್ರಮಕ್ಕೂ ಅಡ್ಡಿಯಾದ ಮಳೆ

ಕನ್ನಡಪ್ರಭ ವಾರ್ತೆ,ನರಸಿಂಹರಾಜಪುರ

ಬಲಿಪಾಡ್ಯಮಿಯ ಬುಧವಾರ ಎಲ್ಲಾ ಕಡೆ ದೀಪಾವಳಿ ಸಂಭ್ರಮ, ಪಟಾಕಿ ಸಿಡಿತ ಹಾಗೂ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.

ಬುಧವಾರ ಬೆಳಿಗ್ಗೆ 11 ಗಂಟೆವರೆಗೂ ಮಳೆ ಬರುತ್ತಿದ್ದು ದೀಪಾವಳಿ ಸಂಬ್ರಮಕ್ಕೆ ಅಡ್ಡಿಯಾಯಿತು. ನಂತರ ಮಳೆ ಕಡಿಮೆಯಾಗಿ ದೀಪಾವಳಿ ಸಡಗರಕ್ಕೆ ಮತ್ತಷು ರಂಗು ತಂದಿತು. ಗ್ರಾಮೀಣ ಪ್ರದೇಶದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸ ಲಾಯಿತು. ದನದ ಕೊಟ್ಟಿಗೆ ಸ್ವಚ್ಛಗೊಳಿಸಿ ಹಸುಗಳನ್ನು ತೊಳೆದು ಕೊಟ್ಟಿಗೆಗೆ ಮಾವಿನ ತೋರಣ ಕಟ್ಟಿ, ರಂಗೋಲಿ ಬರೆದು ಸಿಂಗರಿಸಲಾಯಿತು. ದನಗಳಿಗೆ ಸಿಂಗಾರ, ಚೆಂಡು ಹೂ, ಉಗುಣೆ ಕಾಯಿ, ಪಚ್ಚೆ ಸರಗಳನ್ನು ಹಾಕಲಾಯಿತು.ಅನೇಕ ಗ್ರಾಮಗಳಲ್ಲಿ ದನಗಳಿಗೆ ಕೆಂಪು ಹಾಗೂ ಬಿಳಿ ಬಣ್ಣಗಳಿಂದ ಸಿಂಗಾರ ಮಾಡಲಾಗಿತ್ತು. ಬೆಳಿಗ್ಗೆ ಗೋಪೂಜೆ ಸಮಯದಲ್ಲಿ ಹಸು ಗಳಿಗೆ ದೋಸೆ, ಸಿಹಿ ತಿನ್ನಿಸಲಾಯಿತು. ವರ್ಷವಿಡೀ ಹಾಲು ನೀಡುವ ಹಸುಗಳಿಗೆ ಧನ್ಯತಾ ಭಾವದಿಂದ ಪೂಜೆ ಸಲ್ಲಿಸಲಾಯಿತು.

ಹಳ್ಳಿಗಳಲ್ಲಿ ಗದ್ದೆ, ತೋಟಗಳಿಗೆ ಕೆಲಸ ಮಾಡುವ ಕೃಷಿ ಪರಿಕರಗಳನ್ನು ತೊಳೆದು ಪೂಜೆ ಸಲ್ಲಿಸಲಾಯಿತು. ಸಂಜೆ ಬಲೀಂದ್ರ ಪೂಜೆ ನಡೆಯಿತು. ಕತ್ತಲು ಆವರಿಸುವ ಸಮಯದಲ್ಲಿ ರೈತರು ದೀಪದ ಕೋಲುಗಳನ್ನು ಗದ್ದೆ, ತೋಟಗಳಿಗೆ ನೆಟ್ಟು ಪಟಾಕಿ ಗಳನ್ನು ಸಿಡಿಸಿ ದೀಪ್, ದೀಪ್ ಹೋಳಿಗೆ ಎಂದು ಕೂಗುತ್ತಾ ಮನೆಗಳಿಗೆ ವಾಪಾಸಾಗುವ ದೃಶ್ಯ ಎಲ್ಲಾ ಕಡೆ ಸಾಮಾನ್ಯ ವಾಗಿತ್ತು.

ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಠದ ಗೋಶಾಲೆಯಲ್ಲಿ ಗೋವುಗಳಿಗೆ ಸಿಹಿ ತಿನಿಸಿ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ