ಪ್ರಧಾನಿ ದೀರ್ಘಾಯುಷ್ಯಕ್ಕಾಗಿ ಶ್ರೀವಿಷ್ಣು ಸಹಸ್ರನಾಮ ಯಾಗ

KannadaprabhaNewsNetwork |  
Published : Jun 17, 2026, 01:30 AM IST
16ಎಚ್.ಎಲ್.ಐ1 ಪ್ರಧಾನಿ ನರೇಂದ್ರಮೋದಿ ಅವರ ಧೀರ್ಘಾಯುಷ್ಯ ಹಾಗೂ ಲೋಕಕಲ್ಯಾಣಕ್ಕಾಗಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂಗಳವಾರ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಶ್ರೀ ವಿಷ್ಟು ಸಹಸ್ರ ನಾಮ ಯಾಗ ಪೂಜೆಯನ್ನು ನಡೆಸಲಾಯಿತು.    | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಸುದೀರ್ಘ ಅವಧಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿಂದಿನ ಎಲ್ಲ ಪ್ರಧಾನಿಗಳ ಆಡಳಿತ ಅವಧಿ ದಾಖಲೆ ಮುರಿದಿದ್ದಾರೆ. ದೇಶಕ್ಕೆ ಮಹತ್ತರ ಸೇವೆ ಸಲ್ಲಿಸಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯ ಹಾಗೂ ಲೋಕಕಲ್ಯಾಣಕ್ಕಾಗಿ ತಾಲೂಕು ಬಿಜೆಪಿ ವತಿಯಿಂದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡರ ನೇತೃತ್ವದಲ್ಲಿ ಪಟ್ಟಣದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಶ್ರೀ ವಿಷ್ಣು ಸಹಸ್ರನಾಮ ಯಾಗ ನಡೆಸಿ ಪ್ರಾರ್ಥನೆ ಸಲ್ಲಿಸಲಾಯಿತು.

- ಹೊನ್ನಾಳಿ ರಾಯರ ಮಠದಲ್ಲಿ ರೇಣುಕಾಚಾರ್ಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರಧಾನಿ ನರೇಂದ್ರ ಮೋದಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಸುದೀರ್ಘ ಅವಧಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿಂದಿನ ಎಲ್ಲ ಪ್ರಧಾನಿಗಳ ಆಡಳಿತ ಅವಧಿ ದಾಖಲೆ ಮುರಿದಿದ್ದಾರೆ. ದೇಶಕ್ಕೆ ಮಹತ್ತರ ಸೇವೆ ಸಲ್ಲಿಸಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯುಷ್ಯ ಹಾಗೂ ಲೋಕಕಲ್ಯಾಣಕ್ಕಾಗಿ ತಾಲೂಕು ಬಿಜೆಪಿ ವತಿಯಿಂದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡರ ನೇತೃತ್ವದಲ್ಲಿ ಪಟ್ಟಣದ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ಶ್ರೀ ವಿಷ್ಣು ಸಹಸ್ರನಾಮ ಯಾಗ ನಡೆಸಿ ಪ್ರಾರ್ಥನೆ ಸಲ್ಲಿಸಲಾಯಿತು.

ಮಾಜಿ ಸಚಿವ ಎಂಪಿ.ರೇಣುಕಾಚಾರ್ಯ ಈ ವೇಳೆ ಮಾತನಾಡಿ, 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಒಂದು ದಿನವನ್ನೂ ವ್ಯರ್ಥಗೊಳಿಸದೇ ದೇಶಕ್ಕೆ ಪ್ರಾಮಾಣಿಕ ಹಾಗೂ ಸಾಮಾನ್ಯ ಜನತೆಗಾಗಿ ಕೆಲಸ ಮಾದ್ಡುತ್ತಿದ್ದಾರೆ. ದೇಶ ಮೊದಲು ನಂತರ ಎಲ್ಲವೂ ಎನ್ನುವ ತತ್ವದಡಿಯಲ್ಲಿ ಮುನ್ನಡೆದಿರುವ ಕರ್ಮಯೋಗಿ ಮೋದಿ ಅವರು ವಿಕಸಿತ ಭಾರತ ಹಾಗೂ ಆತ್ಮನಿರ್ಭರ ಭಾರತಕ್ಕಾಗಿ ಕೆಲಸ ಮಾಡಿ ವಿಶ್ವದಲ್ಲೇ ಭಾರತವನ್ನು ವಿಶ್ವಗುರುವಾಗಿ ನೋಡುವಂತೆ ಮಾಡಿದರು. ಪಾಕಿಸ್ತಾನ ಭಾರತದ ಮೇಲೆ ಆಕ್ರಮಣ ಮಾಡಿದಾಗ ನಮ್ಮ ಪರಾಕ್ರಮ ವಿಶ್ವಕ್ಕೆ ಪರಿಚಯ ಮಾಡಿಕೊಟ್ಟರು. 2029 ರಲ್ಲೂ ಮೋದಿ ಅವರನ್ನು ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ನೋಡುವುದಕ್ಕೂ ದೇಶದ ಜನತೆ ಕಾತುರದಿಂದ ಕಾಯುತ್ತಿದ್ದಾರೆ ಎಂದ ಅವರು, ಉತ್ತಮ ಮಳೆ, ಬೆಳೆ ಸಮೃದ್ದಿಯಾಗಿ, ಜನ, ರೈತರು ಸುಖಜೀವನ ನಡಸಲಿ ಎಂದು ವರುಣ ದೇವನಲ್ಲೂ ಪ್ರಾರ್ಥಿಸಿದ್ದೇವೆ ಎಂದರು.

ಗುರು ರಾಘವೇಂದ್ರ ಸ್ವಾಮಿಗಳ ಮಠದ ಕಾರ್ಯದರ್ಶಿ ವಾದಿರಾಜ್ ಕಮರೂರು ಮಾತನಾಡಿದರು. ಪ್ರಧಾನ ಅರ್ಚಕ ಗಿರಿಧರ್ ಆಚಾರ್ಯ, ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ಕುಬೇರಪ್ಪ, ನಿಕಟ ಪೂರ್ವ ಅಧ್ಯಕ್ಷ ಜೆ.ಕೆ.ಸುರೇಶ್, ಎಸ್.ಎಸ್.ಬೀರಪ್ಪ, ನೆಲಹೊನ್ನೆ ಮಂಜುನಾಥ್, ಸುರೇಶ್‌ ಬಿಸಾಟಿ, ರಂಗನಾಥ್, ತರಗನಹಳ್ಳಿ ರಮೇಶ್, ಬಾಬು ಹೋಬಳದಾರ್, ಮಂಜುನಾಥ್ ಕೋನಾಯಕನಹಳ್ಳಿ, ರಾಕೇಶ್, ಮಾರುತಿ ನಾಯ್ಕ್ ಇತರರು ಇದ್ದರು.

- - -

-16ಎಚ್.ಎಲ್.ಐ1:

ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ ರೇಣುಕಾಚಾರ್ಯ ನೇತೃತ್ವದಲ್ಲಿ ಶ್ರೀ ವಿಷ್ಟು ಸಹಸ್ರನಾಮ ಯಾಗ ಪೂಜೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ ಮರು ಪರೀಕ್ಷೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ: ಡಾ.ಕುಮಾರ
ಮತದಾರರ ಪಟ್ಟಿ ನಿಖರವಾಗಿ ಪರಿಷ್ಕರಿಸಿ: ಪಿ.ರವಿಕುಮಾರ್