-ಮರಳು ದಕ್ಕಾದಲ್ಲಿ ಮೃತಪಟ್ಟ ಯುವಕನ ಸಾವಿಗೆ ಕಾರಣನಾದ ಆರೋಪಿ ಬಂಧನ
ಕನ್ನಡಪ್ರಭವಾರ್ತೆ ಕಲಬುರಗಿ
ರಾಜಕೀಯವಾಗಿ ಬಿರುಗಾಳಿ ಎಬ್ಬಿಸಿದ್ದ ಹಾಗೂ ಹಲವಾರು ಸಘಟನೆಗಳವರ ಆಕ್ರೋಶಕ್ಕೆ ಕಾರಣವಾಗಿದ್ದಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗುಂಪಾ ಸೀಮಾಂತರದ ಹಫೀಸ್ ರಂಜೋಳ ಅವರಿಗೆ ಸೇರಿದ್ದ ಕಾಗಿಣಾ ನದಿ ಮರಳು ದಕ್ಕಾದಲ್ಲಿ (ತಗ್ಗು) ಮೃತಪಟ್ಟ ಬೆಳಗುಂಪಾ ಗ್ರಾಮದ ಶ್ರೀಧರ್ ತಂದೆ ಅಮೃತ ನವಲಾಕ್ ಸಾವಿಗೆ ಅಸಲಿ ಕಾರಣ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಗ್ಗಂಟಾದ ಈ ಪ್ರಕರಣವನ್ನು ಭೇದಿಸಲು ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ್, ಶಹಾಬಾದ್ ಡಿಎಸ್‍ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಮಾಡಬೂಳ ಪಿಎಸ್‍ಐ ಶೀಲಾದೇವಿ, ಎಎಸ್‍ಐ ಗುಂಡಪ್ಪ, ಆರ್‌ಎಸ್‍ಐ ಉಪಳಪ್ಪ, ಎಪಿಸಿ ಮಂಜುನಾಥ, ಸಿಬ್ಬಂದಿ ವೀರಶೆಟ್ಟಿ, ನಂದಕುಮಾರ, ಕಮಲಾಕರ್, ಮಾಳಗೊಂಡ, ಪ್ರಶಾಂತ, ಅರುಣ, ಕೃಷ್ಣಾ, ಸಂಗಣ್ಣ, ಚಂದ್ರಶೇಖರ, ರಮೇಶ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
....ಬಾಕ್ಸ್....
ಶಂಕೆಯ ಹಿನ್ನೆಲೆಯಲ್ಲಿ ಬೆಳಗುಂಪಾ ಗ್ರಾಮದ ಈಶಪ್ಪ ಅಲಿಯಾಸ್ ವಿಶ್ವನಾಥ ಅಲಿಯಾಸ್ ವಿಶ್ವರಾಧ್ಯ ತಂದೆ ರುದ್ರಪ್ಪ ವಿಶ್ವಕರ್ಮ (32) ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈಶಪ್ಪ ಅಲಿಯಾಸ್ ವಿಶ್ವನಾಥ ಮದ್ಯ ಸೇವಿಸಲು ಬೈಕ್ ಮೇಲೆ ಬೆಳಗುಂಪಾ ಗ್ರಾಮದಿಂದ ಇವಣಿ ಗ್ರಾಮಕ್ಕೆ ತೆರಳಿ ಮದ್ಯ ಸೇವಿಸಿದ್ದು, ಶ್ರೀಧರ್ ಸಹ ಮದ್ಯ ಸೇವಿಸಿದ್ದ. ನಂತರ ವಿಶ್ವನಾಥ ಬೈಕ್ ಮೇಲೆ ಬೆಳಗುಂಪಾ ಗ್ರಾಮಕ್ಕೆ ಹೋಗಬೇಕೆಂದಾಗ, ಗ್ರಾಮಸ್ಥರು ಶ್ರೀಧರ್‌ನನ್ನು ನೋಡಿ ಈತನು ನಿಮ್ಮೂರಿನವನೇ ಆಗಿದ್ದಾನೆ, ಆತನಿಗೆ ನಶೆಯಾಗಿದ್ದು ಕರೆದೊಯ್ಯುವಂತೆ ಹೇಳಿದಾಗ, ಶ್ರೀಧರ್‌ನನ್ನು ಬೈಕ್ ಹಿಂದೆ ಕೂರಿಸಿಕೊಂಡು ಬೆಳಗುಂಪಾ ಕಡೆಗೆ ಹೋಗುತ್ತಿದ್ದಾಗ, ಶ್ರೀಧರ್ ಮತ್ತೆ ಮದ್ಯ ಸೇವಿಸಲು ಇಚ್ಛಿಸಿದ್ದ.
ಹೊಂಡದ ಬಳಿ ಜಗಳ: ಮರಳು ದಕ್ಕಾದ ತಗ್ಗಿನಲ್ಲಿ ನೀರು ಕುಡಿಯಲು ಹೋಗಿ ಮತ್ತೆ ಮದ್ಯ ಸೇವಿಸಿದ್ದಾರೆ. ವಿಶ್ವನಾಥ ಮದ್ಯದ ಅಮಲಿನಲ್ಲಿ ಹಿಂದೆ ಮಹಿಳೆಯೊಬ್ಬರ ವಿಷಯದಲ್ಲಿ ಜಗಳ ತೆಗೆದು ಶ್ರೀಧರ್‌ಗೆ ಬೈಯ್ದಿದ್ದಾನೆ. ಶ್ರೀಧರ್ ಸಹ ಮರಳಿ ಬೈಯ್ದಿದಕ್ಕೆ ವಿಶ್ವನಾಥ ಶ್ರೀಧರ್ ಎಡ ಮೆಲಕಿಗೆ ಜೋರಾಗಿ ಹೊಡೆದಿದ್ದರಿಂದ ಶ್ರೀಧರ್ ಮೃತಪಟ್ಟಿದ್ದಾನೆ.