ಅದ್ಧೂರಿಯಾಗಿ ನಡೆದ ಶ್ರೀಗುರು ಆರೂಢರ ರಥೋತ್ಸವ

KannadaprabhaNewsNetwork |  
Published : Feb 28, 2024, 02:30 AM IST
೨೭ಬಿಎಸ್ವಿ೦೧- ಬಸವನಬಾಗೇವಾಡಿ ತಾಲೂಕಿನ ಆರೂಢನಂದಿಹಾಳ ಗ್ರಾಮದಲ್ಲಿ ಸೋಮವಾರ ಸಂಜೆ ಶ್ರೀಗುರು ಆರೂಢರ ರಥೋತ್ಸವ ಸಂಭ್ರಮದಿಂದ ಜರುಗಿತು.  | Kannada Prabha

ಸಾರಾಂಶ

ಬಸವನಬಾಗೇವಾಡಿ: ತಾಲೂಕಿನ ಆರೂಢನಂದಿಹಾಳ ಗ್ರಾಮದ ಶ್ರೀಗುರು ಆರೂಢರ 42ನೇ ಜಾತ್ರಾಮಹೋತ್ಸವ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಆರೂಢರ ಐಕ್ಯ ಮಂಟಪಕ್ಕೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಗಿತ್ತು.

ಬಸವನಬಾಗೇವಾಡಿ: ತಾಲೂಕಿನ ಆರೂಢನಂದಿಹಾಳ ಗ್ರಾಮದ ಶ್ರೀಗುರು ಆರೂಢರ 42ನೇ ಜಾತ್ರಾಮಹೋತ್ಸವ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಆರೂಢರ ಐಕ್ಯ ಮಂಟಪಕ್ಕೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಗಿತ್ತು. ಅಭಿಷೇಕದ ಬಳಿಕ ಕಳಸವನ್ನು ಗಂಗಸ್ಥಳಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ನಂತರ ಡೊಳ್ಳಿನ ಮೇಳದೊಂದಿಗೆ ಗ್ರಾಮದಲ್ಲಿ ಆರೂಢರ ಪಲ್ಲಕ್ಕಿ ಉತ್ಸವ ಕುಂಭಮೇಳದೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ. ಶ್ರೀಗುರು ಆರೂಢರು ಸಾಧನೆಗೈದ ಕೊಂಪಿಗೆ ತೆರಳಿ ನಂತರ ಶ್ರೀಮಠಕ್ಕೆ ಆಗಮಿಸುತ್ತದೆ. ಗ್ರಾಮದ ಗುರುನಗೌಡ ಪಾಟೀಲ, ಬಸಯ್ಯ ಹಿರೇಮಠ, ರಾಮನಗೌಡ ಹಳ್ಳಿ, ಕೆಂಚು ವಾಲೀಕಾರ, ನಿಂಗಣ್ಣ ಮದರಿ ಅವರ ಮನೆಗಳಿಂದ ಕಳಸ, ಹಗ್ಗ, ಛತ್ರಿ-ಛಾಮರಗಳನ್ನು ವಾದ್ಯ-ಮೇಳದೊಂದಿಗೆ ಮರಳಿತು. ಶ್ರೀಗುರು ಆರೂಢರ ರಥೋತ್ಸವಕ್ಕೆ ಕಡಕೋಳ ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮೀಜಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಭಕ್ತರ ಜಯಘೋಷದೊಂದಿಗೆ ಶ್ರೀಮಠದಿಂದ ಯಾಳವಾರ ರಸ್ತೆಯ ಪಾದಗಟ್ಟೆವರೆಗೆ ಆರೂಢರ ರಥೋತ್ಸವ ಸಂಭ್ರಮದಿಂದ ಜರುಗಿತು. ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!
ರಾಜ್ಯದ 15 ಜಿಲ್ಲೆಗಳಲ್ಲಿ ಅಕಾಲಿಕ ಮಳೆ : ಮಾರ್ಚ್ 25 ರವರೆಗೆ ಅಬ್ಬರಿಸಲಿದೆ