- ಚಿಕ್ಕರಸಿನಕೆರೆಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಪ್ರಸನ್ನನಂದನಾಥ ಸ್ವಾಮೀಜಿಯಿಂದ ಚಾಲನೆ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿಸಮೀಪದ ಚಿಕ್ಕರಸಿನಕೆರೆಯ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಕಾಲಭೈರವೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.ನಂತರ ಶ್ರೀ ಕಾಲಭೈರವೇಶ್ವರ ಸ್ವಾಮಿ ಉತ್ಸವ ಮೂರ್ತಿ ಇದ್ದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಂದನಾಥ ಸ್ವಾಮೀಜಿ ಚಾಲನೆ ನೀಡಿದರೆ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತನಾನಂದನಾಥ ಸ್ವಾಮೀಜಿ ಸಾಥ್ ನೀಡಿದರು.ಶ್ರೀ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಂದನಾಥ ಸ್ವಾಮೀಜಿ ಮಾತನಾಡಿ, ಆದಿಚುಂಚನಗಿರಿ ಮಠವು ಜಾತಿ, ಮತಗಳ ಎಲ್ಲೇಯನ್ನು ಮೀರಿದ್ದಾಗಿದೆ. ಮಠದಲ್ಲಿ ಎಲ್ಲಾ ಜಾತಿಯ ಜನರು ಕುಲಬಾಂಧವರಾಗಿದ್ದಾರೆ. ಎಲ್ಲರೂ ಕಾಲಭೈರವನ ಆರಾಧಕರಾಗಿದ್ದು, ಕಾಲಭೈರವೇಶ್ವರ ಸ್ವಾಮಿ ಸ್ತೋತ್ರವನ್ನು ಪಠಿಸಿದಲ್ಲಿ ಜನರಿಗೆ ಶಾಂತಿ ಲಭಿಸಲಿದೆ ಎಂದು ಹೇಳಿದರು.ಶತ ಶತಮಾನಗಳಿಂದಲೂ ಜನರು ಯಾತ್ರೆ ಜಾತ್ರೆಗಳನ್ನು ನಡೆಸುತ್ತಾ ಬಂದಿದ್ದುಸ ಎಲ್ಲರೂ ಒಗ್ಗಟ್ಟಾಗಿ ಇರಬೇಕೆನ್ನುವುದೇ ಈ ಜಾತ್ರೆ ಯಾತ್ರೆಯ ಸಂದೇಶವಾಗಿದೆ ಎಂದು ತಿಳಿಸಿದರು.
ಪೂರ್ವಿಕರು ಯಾತ್ರೆ ಸಂದರ್ಭದಲ್ಲಿ ತಮ್ಮಲ್ಲಿರುವ ದುಶ್ಚಟಗಳನ್ನು ಧಾರ್ಮಿಕ ಕ್ಷೇತ್ರಗಳಲ್ಲಿ ಹರಕೆ ಕಟ್ಟಿ ದುಶ್ಚಟಗಳನ್ನು ಅಲ್ಲಿಯೇ ಬಿಟ್ಟು ಮನಸ್ಸಿನಿಂದ ಹಿಂದಿರುಗುತ್ತಿದ್ದರು. ನಂತರ ದುಶ್ಚಟಗಳತ್ತ ಮುಖವನ್ನು ಮಾಡುತ್ತಿರಲಿಲ್ಲ ಇಲ್ಲೂ ಹಾಗೆಯೇ ಶ್ರೀ ಕಾಲಭೈರವನ ಧರ್ಮಕ್ಷೇತ್ರದಲ್ಲಿ ಜನರು ದುಶ್ಚಟಗಳಿಂದ ಮುಕ್ತಿ ಹೊಂದುತ್ತೇನೆಂದು ದೇವರಿಗೆ ತಿಳಿಸಿ ಉತ್ತಮ ಮನುಷರಾಗಿ ಬದುಕು ಸಾಗಿಸುವಂತೆ ಕಿವಿಮಾತು ಹೇಳಿದರು.ರಥದಲ್ಲಿ ಇರಿಸಲು ತರಲಾಗಿದ್ದ ಕರಗ ಹಾಗೂ ಕಾಲಭೈರವೇಶ್ವರ ಸ್ವಾಮಿ ಉತ್ಸವ ಮೂರ್ತಿ, ಕಾಲಭೈರವೇಶ್ವರ ಸ್ವಾಮಿ ಬಸವಪ್ಪ ಹಾಗೂ ಕಾರ್ಕಳ್ಳಿ ಬಸವೇಶ್ವರ ಸ್ವಾಮಿ ದೇವಾಲಯದ ಬಸವಪ್ಪನಿಗೆ ಪೂಜೆ ಸಲ್ಲಿಸಿದರು. ಶ್ರೀ ಕಾಲಭೈರವನಿಗೆ ವಿಶೇ? ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿದರು.ಅರೆಕಲ್ಲುದೊಡ್ಡಿ, ಬನ್ನಹಳ್ಳಿ ಹಾಗೂ ಹೊನ್ನಾಯಕನಹಳ್ಳಿ ಕುಲದವರಿಂದ ಅನ್ನಸಂತರ್ಪಣೆ ಕಾರ್ಯ ಸಮರೋಪ ಹಾದಿಯಲ್ಲಿ ಸಾಗಿತು. ರಥೋತ್ಸವದ ವೇಳೆ ಚರ್ಮ ವಾದ್ಯ ಮೇಳ ಕಾಲಭೈರವೇಶ್ವರ ಸ್ವಾಮಿ ದೇವರ ಪೂಜೆ, ನಂದಿ ಕಂಬ, ವಿವಿಧ ಜನಪದ ಕಲಾಪ್ರಕಾರಗಳೊಂದಿಗೆ ರಥೋತ್ಸವ ರಥಭೇದಿಯಲ್ಲಿ ಸಾಗಿತು. ಈ ವೇಳೆ ರಥ ಸಾಗುವ ಬೀದಿಯಲ್ಲಿ ವಿವಿಧ ಗ್ರಾಮಗಳ ಕುಲದವರು ಪಾನಕ ಮಜ್ಜಿಗೆ ವಿತರಿಸಿದರು. ಗ್ರಾಮಸ್ಥರು ರಥಕ್ಕೆ ಮಂಗಳಾರತಿ ಸಮರ್ಪಿಸಿ ಧನ್ಯತೆ ಮೆರದರು.ರಥೋತ್ಸವದ ಮೆರವಣಿಗೆಯಲ್ಲಿ ಶ್ರೀ ಕಾಲಭೈರವೇಶ್ವರ ಬಸವಪ್ಪನ ಜತೆ ಕಾರ್ಕಹಳ್ಳಿಯ ಶ್ರೀ ಬಸವೇಶ್ವರ ಸ್ವಾಮಿಯ ಬಸವಪ್ಪ ಆಗಮಿಸಿ ದೇವಾಲಯದಲ್ಲಿ ನಡೆದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಿತ್ತು. ಭಾವ ಭಾಮೈದ್ಯರಾಗಿರುವ ಎರಡು ಬಸವಪ್ಪಗಳನ್ನು ನೋಡಿ ಭಕ್ತರು ಕಣ್ತುಂಬಿ ಕೊಂಡರು.-------------------16ಕೆಎಂಎನ್ ಡಿ17
ಚಿಕ್ಕರಸಿನಕೆರೆಯ ಐತಿಹಾಸಿಕ ಶ್ರೀ ಕಾಲಭೈರವೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.