ಕನ್ನಡಪ್ರಭ ವಾರ್ತೆ ಮಂಡ್ಯ
ಮುಖಂಡ ಹೊಸಹಳ್ಳಿ ಶಿವಲಿಂಗೇಗೌಡ, ನಮ್ಮ ಪೂರ್ವಿಕರ ಕಾಲದಿಂದಲೂ ಗ್ರಾಮದೇವತೆ ಶ್ರೀಮಾರಮ್ಮ ಮತ್ತು ಶ್ರೀಬಿಸಿಲು ಮಾರಮ್ಮ ಉತ್ಸವವನ್ನು ಎರಡು ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ನಡೆಸಲಾಗುತ್ತಿದೆ. 3 ವರ್ಷಗಳಿಗೊಮ್ಮೆ ಗ್ರಾಮದೇವತೆ ಶ್ರೀಮಾರಮ್ಮ ಹಬ್ಬವನ್ನು ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದರು.
ಮೇ 13ರಂದು ದೇವಾಲಯದ ಆವರಣದಲ್ಲಿ ತಂಬಿಟ್ಟಿನ ಬುಟ್ಟಿಯಲ್ಲಿ ಅಕ್ಕಿ ತಂದು ತೊಳೆದು ಒಣಹಾಕಿದ ನಂತರ ಅತ್ತಿಗೆ-ನಾದಿನಿ, ಅಕ್ಕ-ತಂಗಿಯರು, ಹೆಣ್ಣುಮಕ್ಕಳು ನೀರು ಎರಚುವ ಉತ್ಸವದಲ್ಲಿ ಸಂಭ್ರಮಿಸಿದರು. ಬಳಿಕ ಅಕ್ಕಿಯನ್ನು ಮನೆಗೆ ಕೊಂಡೊಯ್ಯುತ್ತಾರೆ. ಸಂಜೆ ಪೂಜಾ ಕುಣಿತ ನಡೆಯಿತು.ಬುಧವಾರ ಬೆಳಗ್ಗೆ ಎರಡು ಗ್ರಾಮಸ್ಥರು ಒಗ್ಗೂಡಿ ಭಾವೈಕ್ಯತೆಯಿಂದ ಶ್ರೀಮಾರಮ್ಮ ದೇವತೆಗೆ ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯಗಳು ನಡೆದು ಬಿದಿರು ಬುಟ್ಟಿಯಲ್ಲಿ ತಂಬಿಟ್ಟಿನ ಆರತಿಯ ಮೆರವಣಿಗೆ ಸಾಗಿ ತಂಪು ತೋರಿ ಪೂಜೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಗೆಳತಿಗುಡ್ಡ ಪರಿಸರಕೂಟ, ಕನ್ನಡ ಸಂಘ ಮತ್ತು ಸಾಹಿತ್ಯ ಚಾವಡಿಯ ಸಂಯುಕ್ತಾಶ್ರಯದಲ್ಲಿ ಕಾವ್ಯರಚನೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಹ್ವಾನಿತ ವಿದ್ವಾಂಸರಿಂದ ಉಪನ್ಯಾಸ ಮತ್ತು ಸಂವಾದ ಗೋಷ್ಠಿಗಳಿದ್ದು ಪೂರ್ವಭಾವಿಯಾಗಿ ಆಯ್ಕೆಯಾದ ಸುಮಾರು 40 ಕವಿಗಳಿಂದ ಕವಿಗೋಷ್ಠಿ ಮತ್ತು ಸಂವಾದವನ್ನು ಆಯೋಜಿಸಲಾಗಿದೆ. ಜೂ.22 ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿವೆ. ರಾಜ್ಯಮಟ್ಟದ ಕವಿ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾದ ಕವಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಮ್ಮೇಳನಕ್ಕೆ ಭಾಗವಹಿಸುವ ಕವಿಗಳು ಮತ್ತು ಸಾಹಿತ್ಯಾಸಕ್ತರಿಗೆ ಪ್ರವೇಶ ಉಚಿತವಾಗಿದೆ. ಕಾರ್ಯಕಮದ ದಿನದಂದು ಪಟ್ಟಣದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ವಾಹನ ಸೌಕರ್ಯ ಮತ್ತು ಮಧ್ಯಾಹ್ನದ ಭೋಜನ, ಚಹಾ ವ್ಯವಸ್ಥೆ ಮಾಡಲಾಗುವುದು. ಆದ್ದರಿಂದ ರಾಜ್ಯಾದಂತ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು, ಸಾಹಿತ್ಯ ಪ್ರೇಮಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.