ನಾಡಹಬ್ಬ ದಸರಾಕ್ಕೆ ಕಳೆಕಟ್ಟಿದೆ ಶೃಂಗೇರಿ ಕ್ಷೇತ್ರ

KannadaprabhaNewsNetwork |  
Published : Oct 09, 2026, 02:00 AM IST
ೇ್ | Kannada Prabha

ಸಾರಾಂಶ

ಶೃಂಗೇರಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶೃಂಗೇರಿ ನಾಡಹಬ್ಬ ದಸರೆಗೆ ಸಜ್ಜಾಗುತ್ತಿದೆ. ಕಳೆದ ಕೆಲ ದಿನಗಳಿಂದ ಶೃಂಗೇರಿ ಪೀಠದಲ್ಲಿ ನವರಾತ್ರಿ ಉತ್ಸವಕ್ಕೆ ಭರದ ತಯಾರಿ ನಡೆದಿದೆ. ದೇವಾಲಯ ಆವರಣ ಸೇರಿ ಪ್ರಾಂಗಣದವ ವಿವಿಧ ದೇವಾಲಯಗಳ ಅಲಂಕಾರ ಸಾಂಗವಾಗಿ ನಡೆಯುತ್ತಿದೆ.

ನಾಳೆಯಿಂದ 22 ರವರೆಗೆ ಶರನ್ನವರಾತ್ರಿ ಉತ್ಸವ । ಪ್ರತಿದಿನ ಶಾರದೆಗೆ ವಿಶೇಷ ಪೂಜೆ। ರಾತ್ರಿ, ಹಗಲು ದಸರಾ ದರ್ಬಾರ್

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶೃಂಗೇರಿ ನಾಡಹಬ್ಬ ದಸರೆಗೆ ಸಜ್ಜಾಗುತ್ತಿದೆ. ಕಳೆದ ಕೆಲ ದಿನಗಳಿಂದ ಶೃಂಗೇರಿ ಪೀಠದಲ್ಲಿ ನವರಾತ್ರಿ ಉತ್ಸವಕ್ಕೆ ಭರದ ತಯಾರಿ ನಡೆದಿದೆ. ದೇವಾಲಯ ಆವರಣ ಸೇರಿ ಪ್ರಾಂಗಣದವ ವಿವಿಧ ದೇವಾಲಯಗಳ ಅಲಂಕಾರ ಸಾಂಗವಾಗಿ ನಡೆಯುತ್ತಿದೆ.

ಅ.10 ರಿಂದ 22 ರವರೆಗೆ ಶರನ್ನವವರಾತ್ರಿ ಉತ್ಸವ ಆರಂಬವಾಗಿ ಪ್ರತೀ ದಿನ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಹಿತ, ಪ್ರತಿದಿನ ವಿಶೇಷ ಅಲಂಕಾರ, ಆರಾಧನೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮ, ಸಂಜೆ ಶ್ರೀ ಮಠದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಬೀದಿ ಉತ್ಸವ, ಪ್ರತಿ ದಿನ ಹಗಲು, ರಾತ್ರಿ ಜಗದ್ಗುರುಗಳ ನವರಾತ್ರಿಯ ರಾತ್ರಿ ದರ್ಬಾರ್, ಕೊನೆಯ ದಿನ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.

ಮಹಾಲಯ ಅಮಾವಾಸ್ಯೆ ದಿನ ಶನಿವಾರ ಶಾರದೆಗೆ ಮಹಾಭಿಷೇಕದ ನಂತರ ಮೂಲಬಿಂಬದ ಹರಿದರ್ಶನ ನಿರಾಂಜನ, ಮಹಾವ್ಯಾಸಪೂರ್ವಕ ಶತರುದ್ರಾಭಿಷೇಕ. ಶಾರದೆಗೆ ಜಗತ್ ಪ್ರಸೂತಿಕ ಅಲಂಕಾರ ಮಾಡಿ ವಿವಿಧ ರೀತಿಯ ಪಂಚಾ ಮೃತಗಳಿಂದ ಸಂಪ್ರೀತಗೊಳಿಸಲಾಗುತ್ತದೆ. 108 ಆವರ್ತಿ ಶ್ರೀ ಸೂಕ್ತ ಪಠಣದಿಂದ ಅಭಿಷೇಕ, ಮಹಾಮಂಗಳಾರತಿ.ಸಂಜೆ ಶ್ರೀ ಶಕ್ತಿ ಗಣಪತಿ ಸನ್ನಿದಿಯಲ್ಲಿ ಶಾರದಾಂಬೆಗೆ ಪ್ರಧಾನ ಅರ್ಚಕರಿಂದ ವಿಶೇಷ ಪೂಜೆ, ಶಾರದಾ ಮೂರ್ತಿ ಸ್ವರ್ಣರಥದಲ್ಲಿ ಪ್ರತಿಷ್ಠಾಪಿಸಿ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾಡಲಾಗುವುದು.

ದೇವಿಗೆ ಅಷ್ಟದ್ರವ್ಯ ಗಣಹೋಮ, ಸಪ್ತಶತಿ ಪಾರಾಯಣ, ಶತಚಂಡೀ ಮಹಾಯಾಗ, ಗಜಪೂಜೆ, ಅಶ್ವಪೂಜೆ, ಆಯುಧ ಪೂಜೆ, ಚತುರ್ವೇದ ಪಾರಾಯಣ ನೆರವೇರಲಿದೆ. ದೇಶಿ ಭಾಗವತ ಪಠಣ, ಹರಿವಂಶ, ಲಲಿತೋಪಾಖ್ಯಾನ, ಲಕ್ಷ್ಮಿ ನಾರಾಯಣ ಹೃದಯಗಳ ಪಠಣ ನೆರವೇರುತ್ತದೆ.

10 ರಂದು ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಶಾರದೆಗೆ ಮಹಾಭಿಷೇಕ, ಜಗತ್ ಪ್ರಸೂತಿಕ ಅಲಂಕಾರ. 11 ರಂದು ಹಂಸವಾಹಿನಿಯಲಂಕಾರ,ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆಯ ಬೀದಿ ಉತ್ಸವದಲ್ಲಿ ಅಡ್ಡಗೆದ್ದೆ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.

12 ರಂದು ಶಾರದೆಗೆ ಬ್ರಾಹ್ಮಿಅಲಂಕಾರ, 13 ರಂದು ಮಾಹೇಶ್ವರಿಯಲಂಕಾರ,14 ರಂದು ಕೌಮಾರಿಅಲಂಕಾರ, 15 ರಂದು ಶಾರದೆಗೆ ಗರುಡವಾಹಿನಿ ಅಲಂಕಾರ,16 ರಂದು ಶಾರದೆಗೆ ವೀಣಾಶಾರಅಲಂಕಾರ.17 ರಂದು ಇಂದ್ರಾಣಿ ಅಲಂಕಾರ, ಸಂಜೆ ವಿದ್ವಾನ್ ಶ್ರೀಕಾಂತ್ ಕೌಂಡಿನ್ಯ ಭಾಗವತ್ತಾರ್ ತಂಡದ ನಾಮಸಂಕೀರ್ತನೆ.ಸಂಜೆ ಬೀದಿ ಉತ್ಸವದಲ್ಲಿ ಬೇಗಾರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. 18 ರಂದು ಮೋಹಿನಿ ಅಲಂಕಾರ,19 ರಂದು ರಾಜರಾಜೇಶ್ವರಿ ಅಲಂಕಾರ, , 20 ರಂದು ಸಿಂಹವಾಹಿನಿ ಅಲಂಕಾರ ಶತಚಂಡೀಯಾಗದ ಪೂರ್ಣಾಹುತಿಗಜಾಶ್ವಪೂಜೆ,ವಿಜಯದಶಮಿ,ಶಮೀ ಪೂಜೆ, 21 ರಂದು ಗಜಲಕ್ಷ್ಮಿ ಅಲಂಕಾರ, 22 ರಂದು ಶ್ರೀ ಶಾರದಾಂಬೆ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ಜಗದ್ಗುರುಗಳ ದಸರೆಯ ಹಗಲು ದರ್ಬಾರ್ ನಡೆಯುತ್ತದೆ.ಅ.26 ರಂದು ಶಾರದಾಂಬೆಗೆ ಮತ್ತೆ ಮಹಾಭಿಷೇಕ ನಡೆಯು ತ್ತದೆ.ರಾತ್ರಿ ತುಂಗಾ ನದಿಯಲ್ಲಿ ತೆಪ್ಪೋತ್ಸವ ಅಂದು ನವರಾತ್ರಿಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಸಮಾಪ್ತಿಗೊಳ್ಳುತ್ತದೆ.

7 ಶ್ರೀ ಚಿತ್ರ 1-ಶೃಂಗೇರಿ ಶಾರದಾ ಪೀಠ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರಿಗೆ ಎಸ್‌ಎಪಿ ನಿಗದಿಪಡಿಸುವಂತೆ ಆಗ್ರಹ
ಜಿಪಂ-ತಾಪಂ ಚುನಾವಣೆ ಮೀಸಲಾತಿ ಪ್ರಕಟ, ಆಕಾಂಕ್ಷಿಗಳಲ್ಲಿ ಹುರುಪು