ಶೃಂಗೇರಿ ತಗ್ಗಿದ ಪ್ರವಾಹ: ಮುಂದುವರಿದ ಮಳೆ

KannadaprabhaNewsNetwork |  
Published : Jul 06, 2024, 12:45 AM IST
್ಿಿ | Kannada Prabha

ಸಾರಾಂಶ

ಶೃಂಗೇರಿ: ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ತುಂಗಾ ನದಿಯಲ್ಲಿ ಪ್ರವಾಹ ತಗ್ಗಿದ್ದು, ತಗ್ಗು ಪ್ರದೇಶಗಳೆಲ್ಲ ಇನ್ನೂ ಮುಳುಗಡೆಯಾಗಿಯೇ ಇದೆ. ಗುರುವಾರ ಪ್ರವಾಹದಿಂದ ಜಲಾವೃತಗೊಂಡಿದ್ದ ಭಾರತೀ ಬೀದಿ ಹಾಗೂ ಕೆವಿಆರ್‌ ವೃತ್ತ ಸಂಪರ್ಕ ಬೈಪಾಸ್‌ ರಸ್ತೆಯಿಂದ ನೀರು ಇಳಿದಿದ್ದು ಶುಕ್ರವಾರ ರಸ್ತೆ ಸಂಪರ್ಕ ಪುನರ್ ಆರಂಭ ಗೊಂಡು ಸಹಜ ಸ್ಥಿತಿಯಲ್ಲಿತ್ತು.

ತುಂಗಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಿದ್ದು, ಪ್ರವಾಹದ ಭೀತಿಯಿಲ್ಲ. ಶ್ರೀ ಮಠದ ತುಂಗಾ ನದಿ ತೀರದಲ್ಲಿರುವ ಕಪ್ಪೆಶಂಕರ ದೇಗುಲ ಇನ್ನೂ ಮುಳುಗಡೆಯಾಗಿಯೇ ಇದೆ. ಕೆರೆಕಟ್ಟೆ ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಸಂಜೆ ಗಾಳಿ ಸಹಿತ ಮಳೆಯ ಅಬ್ಬರ ಮುಂದುವರಿದಿತ್ತು. ಗಾಳಿಯ ಆರ್ಭಟಕ್ಕೆ ಮರಗಳು ಧರೆಗುರುಳುತ್ತಿದ್ದು ರಸ್ತೆ ಸಂಚಾರ, ವಿದ್ಯುತ್‌ ಸಂಪರ್ಕಕ್ಕೆ ಅಡಚಣೆಯಾಗುತ್ತಿದೆ.ಮಳೆಯೂ ಮುಂದುವರಿದಿತ್ತು.

5 ಶ್ರೀ ಚಿತ್ರ 1-ಶೃಂಗೇರಿ ಸುತ್ತಮುತ್ತ ನಿರಂತರ ಮಳೆ ಸುರಿಯುತ್ತಿರುವುದರಿಂದ ತುಂಬಿ ಹರಿಯುತ್ತಿರುವ ತುಂಗಾ ನದಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ ಚಾಲಕರಿಗೆ 20000 ಪರಿಹಾರಕ್ಕೆ ಆಗ್ರಹ
ನಿರ್ಲಕ್ಷ್ಯ ಚಾಲನೆಯಿಂದ ಬೈಕ್‌ಗೆಡಿಕ್ಕಿ: ಟೆಕ್ಕಿಗೆ ಹೈಕೋರ್ಟ್‌ ತರಾಟೆ