ಹಂಪಿ ವಿರೂಪಾಕ್ಷೇಶ್ವರ ದೇವರಿಗೆ ಶೃಂಗೇರಿ ಶ್ರೀಗಳಿಂದ ಪೂಜೆ

KannadaprabhaNewsNetwork |  
Published : Jan 24, 2025, 12:49 AM IST
23ಎಚ್‌ಪಿಟಿ3- ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರು ಗುರುವಾರ ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಾಲಯದಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಮೊದಲಿಗೆ ತುಂಗಭದ್ರಾ ನದಿಯಲ್ಲಿ ತುಂಗಾಸ್ನಾನ ಮಾಡಿದ ಶ್ರೀಗಳು

ಹೊಸಪೇಟೆ: ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ವಿಧುಶೇಖರ ಭಾರತಿ ಸ್ವಾಮೀಜಿ ಗುರುವಾರ ಹಂಪಿ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ವಿರೂಪಾಕ್ಷೇಶ್ವರ ಮತ್ತು ಪಂಪಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಮೊದಲಿಗೆ ತುಂಗಭದ್ರಾ ನದಿಯಲ್ಲಿ ತುಂಗಾಸ್ನಾನ ಮಾಡಿದ ಶ್ರೀಗಳು, ಶ್ರೀ ವಿರೂಪಾಕ್ಷನ ಸನ್ನಿಧಿಯಲ್ಲಿ ರುದ್ರ, ಚಮಕ, ಚಮಕ ಸಹಿತ ಶಿವನಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಂಪಾಂಬಿಕೆ, ನಾಡತಾಯಿ ಭುವನೇಶ್ವರಿದೇವಿಗೂ ಪೂಜೆ ಸಲ್ಲಿಸಿ ಆರತಿ ಬೆಳಗಿದರು.

ಶ್ರೀಗಳು ಬಳಿಕ ಬರಿಗಾಲಲ್ಲೇ ಚಕ್ರತೀರ್ಥ, ಕೋದಂಡರಾಮ, ಯಂತ್ರೋದ್ಧಾರಕ ಪ್ರಾಣ ದೇವರ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಉಗ್ರ ನರಸಿಂಹ, ಬಡವಿಲಿಂಗ, ವಿಜಯ ವಿಠ್ಠಲ ದೇವಸ್ಥಾನ ಸಹಿತ ಹಲವು ಸ್ಮಾರಕಗಳಿಗೆ ತೆರಳಿದ ಶ್ರೀಗಳು, ಸನಾತನ ಧರ್ಮ ಸಂರಕ್ಷಣೆಗೆ ನೀಡುವಲ್ಲಿ ವಿದ್ಯಾರಣ್ಯ ಪ್ರೇರಣೆಯಿಂದ ರಚಿತವಾದ ವಿಜಯನಗರ ಸಾಮ್ರಾಜ್ಯ ನೀಡಿದ ಕೊಡುಗೆಯನ್ನು ಕಂಡು ಭಾವಪರವಶರಾದರು.

ತಮ್ಮ ಭಕ್ತವೃಂದದೊಂದಿಗೆ ಅವಿಸ್ಮರಣೀಯ ಹಂಪಿ ಭೇಟಿ ಎಂದು ಬಣ್ಣಿಸಿದರು. ಕಳೆದ ಸಾರಿಯ ಭೇಟಿಯಲ್ಲಿ ಬಯಲು ಗ್ರಂಥಾಲಯವಾಗಿರುವ ಹಂಪಿ ನೋಡಲು ಆಗಿರಲಿಲ್ಲ ಎಂದರು.

ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ವಿಧುಶೇಖರ ಭಾರತಿ ಸ್ವಾಮೀಜಿ ಗುರುವಾರ ಹಂಪಿ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ವಿರೂಪಾಕ್ಷೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.

ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಅವರು ಗುರುವಾರ ಹಂಪಿ ವಿಜಯ ವಿಠ್ಠಲ ದೇವಾಲಯದ ಆವರಣದ ಕಲ್ಲಿನತೇರು ಸ್ಮಾರಕಕ್ಕೆ ಭೇಟಿ ನೀಡಿ, ವೀಕ್ಷಿಸಿದರು.

ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ವಿಧುಶೇಖರ ಭಾರತಿ ಸ್ವಾಮೀಜಿ ಗುರುವಾರ ಹಂಪಿಗೆ ಭೇಟಿ ನೀಡಿದರು.

ಶೃಂಗೇರಿ ಶಾರದಾ ಪೀಠದ ಪೀಠಾಧಿಪತಿ ವಿಧುಶೇಖರ ಭಾರತಿ ಸ್ವಾಮೀಜಿ ಗುರುವಾರ ಹಂಪಿಗೆ ಭೇಟಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಪ್ತ ಶಾಸಕರ ಜತೆ ಸದನದ ಕೊನೆ ಸಾಲಲ್ಲಿ ಡಿಕೆಶಿ ಚರ್ಚೆ
ಅಹಂಕಾರ, ದರ್ಪ ತೋರದೇ ಎಲ್ಲ ಜನರನ್ನೂ ಗೌರವಿಸಿದ ಶಾಮನೂರು: ಅಣಬೇರು ರಾಜಣ್ಣ