ಕಣಕೂರು ಪಿಎಸಿಎಸ್ ಅಧ್ಯಕ್ಷರಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಅಂದಾನಿಗೌಡ

KannadaprabhaNewsNetwork |  
Published : Jun 13, 2025, 02:06 AM IST
11 ಟಿವಿಕೆ 3 – ತುರುವೇಕೆರೆ ತಾಲೂಕು ಕಣಕೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಶ್ರೀನಿವಾಸ್, ಉಪಾಧ್ಯಕ್ಷರಾಗಿ ಅಂದಾನಿಗೌಡ ಅವಿರೋಧವಾಗಿ ಆಯ್ಕೆಯಾದರು. | Kannada Prabha

ಸಾರಾಂಶ

ತಾಲೂಕಿನ ಕಣಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಶ್ರೀನಿವಾಸ್, ಉಪಾಧ್ಯಕ್ಷರಾಗಿ ಅಂದಾನಿಗೌಡ ರವರು ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಕಣಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಶ್ರೀನಿವಾಸ್, ಉಪಾಧ್ಯಕ್ಷರಾಗಿ ಅಂದಾನಿಗೌಡ ರವರು ಅವಿರೋಧವಾಗಿ ಆಯ್ಕೆಯಾದರು.

ಕಣಕೂರಿನ ಸಹಕಾರ ಸಂಘದ 5 ವರ್ಷಗಳ ಅವಧಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ಅದರಲ್ಲಿ ಸಾಲಗಾರರ ಕ್ಷೇತ್ರದಿಂದ ಗುಡ್ಡೇನಹಳ್ಳಿಯ ಮುಕುಂದ, ಮರಳು ಕಾಂತಣ್ಣ, ಕೆಂಚಯ್ಯ, ಕಣಕೂರಿನ ಕೆ.ಶ್ರೀನಿವಾಸ್, ಕೆ.ಎನ್.ರಮೇಶ್, ಎಚ್. ಆರ್.ಮೇಘಾ, ದೊಡ್ಡಮಾರ್ಗೋನಹಳ್ಳಿಯ ಅಂದಾನಿಗೌಡ, ದೊಡ್ಡಮಲ್ಲಿಗೆರೆಯ ವನಜಾಕ್ಷಮ್ಮ, ದಾಸಿಹಳ್ಳಿಯ ಜಹೀರ್, ದುಮ್ಮನಹಳ್ಳಿಯ ನಂದೀಪ್, ಚಿಕ್ಕಮಲ್ಲಿಗೆರೆಯ ಕರಿಯಪ್ಪ ಆಯ್ಕೆಯಾದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಗುಡ್ಡೇನಹಳ್ಳಿಯ ಜಿ.ಎಸ್.ನಾಗರಾಜು ಆಯ್ಕೆಯಾಗಿದ್ದರು. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಶ್ರೀನಿವಾಸ್ ಮಾತನಾಡಿ ಸಂಘದಲ್ಲಿ ಸುಮಾರು 1103 ಮಂದಿ ಸದಸ್ಯರಿದ್ದಾರೆ. ಸಂಘ ಲಾಭದಲ್ಲಿಲ್ಲ. ಮುಂಬರುವ ದಿನಗಳಲ್ಲಿ ಸರ್ಕಾರದೊಂದಿಗೆ ಮಾತುಕತೆ ಮಾಡಿ ರೈತಾಪಿಗಳಿಗೆ ನೆರವಾಗುವ ಯೋಜನೆಗಳನ್ನು ತರಲು ತಾವು ಪ್ರಾಮಾಣಿಕವಾಗಿ ಮಾಡುವುದಾಗಿ ಅವರು ಹೇಳಿದರು. ತಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿದ ಸಂಘದ ಎಲ್ಲಾ ಸದಸ್ಯರು ಮತ್ತು ನಿರ್ದೇಶಕರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. ಸಹಕಾರ ಸಂಘಗಳ ಜಿಲ್ಲಾ ಕಚೇರಿಯ ಲತಾ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುರುಳೀಕುಪ್ಪೆ ಶ್ರೀನಿವಾಸ್, ಕೆಂಪಮ್ಮದೇವಿ ಟ್ರಸ್ಟ್ ಅಧ್ಯಕ್ಷ ಕೆ.ಎಲ್.ತಿಮ್ಮಪ್ಪ, ಮುಖಂಡರಾದ ದೊಡ್ಡೇರಿ ಜಯರಾಮ್, ಗಂಗಾಧರ್, ಕಣಕೂರಿನ ತಿಮ್ಮೇಗೌಡ, ರಾಮಲಿಂಗಯ್ಯ, ರಾಜಣ್ಣ, ನಾಗೇಗೌಡನ ಬ್ಯಾಲದ ರಮೇಶ್, ರಮೇಶ್, ಕೆ.ರಘು, ಮುದ್ದಯ್ಯ, ಲಕ್ಕೇಗೌಡ, ಯಶೋಧರ್, ಕೋಡಿಹಳ್ಳಿ ಜಯಕುಮಾರ್, ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎನ್.ಮಹೇಶ್ವರ್ ನೂತನ ಅಧ್ಯಕ್ಷ ಶ್ರೀನಿವಾಸ್ ಮತ್ತು ಉಪಾಧ್ಯಕ್ಷ ಅಂದಾನಿಗೌಡರನ್ನು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌