ಮುತ್ಕೂರು ವಿಎಸ್‌ಎಸ್‌ಎನ್ ನಿರ್ದೇಶಕರಾಗಿ ಶ್ರೀನಿವಾಸ್ ಆಯ್ಕೆ

KannadaprabhaNewsNetwork |  
Published : Aug 18, 2025, 12:00 AM IST
ಫೋಟೋ: 17 ಹೆಚ್‌ಎಸ್‌ಕೆ 1 ಹೊಸಕೋಟೆ ತಾಲೂಕಿನ ಮುತ್ತೂರು ವಿಎಸ್‌ಎಸ್‌ನ ನೂತನ ನಿರ್ದೇಶಕರಾಗಿ ಮುತ್ಕೂರು ಶ್ರೀನಿವಾಸ್.ಎ ಆಯ್ಕೆಯಾಗಿದ್ದು ಸಂಘದ ಅಧ್ಯಕ್ಷ ಪ್ರಕಾಶ್ ಸೇರಿದಂತೆ ಎಲ್ಲಾ ನಿರ್ದೇಶಕರು ಮುಖಂಡರುಗಳು ಅಭಿನಂದಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ತಾಲೂಕಿನ ಮುತ್ಕೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕರಾಗಿ ಮುತ್ಕೂರು ಆಯ್ಕೆಯಾಗಿದ್ದಾರೆ.

ಹೊಸಕೋಟೆ: ತಾಲೂಕಿನ ಮುತ್ಕೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನಿರ್ದೇಶಕರಾಗಿ ಮುತ್ಕೂರು ಆಯ್ಕೆಯಾಗಿದ್ದಾರೆ.

ಈ ಹಿಂದೆ ನಿರ್ದೇಶಕರಾಗಿದ್ದ ಯಡಗೊಂಡನಹಳ್ಳಿ ಮೋಟಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುತ್ಕೂರು ಎ.ಶ್ರೀನಿವಾಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೃಷ್ಣಪ್ಪ ಎಚ್.ವಿ ನಾಮಪತ್ರ ಸಲ್ಲಿಸಿದ್ದರು.

ವಿಎಸ್‌ಎಸ್‌ಎನ್ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಉಭಯ ಬಣಗಳ ನಡುವೆ ಸಾಕಷ್ಟು ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು.. ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀನಿವಾಸ್ ಜಯಗಳಿಸಿದ್ದು ಮುಂದಿನ ದಿನಗಳಲ್ಲಿ ಸಂಘದ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸಲಿದ್ದೇವೆ. ಶಾಸಕ ಶರತ್ ಬಚ್ಚೇಗೌಡರ ಸಹಕಾರ ಪಡೆದು ವಿಎಸ್‌ಎಸ್‌ಎನ್ ಸೇವೆ ಮತ್ತಷ್ಟು ವಿಸ್ತರಿಸಲಿದ್ದೇವೆ ಎಂದರು.

ನೂತನ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ೯೩ ಮತಗಳನ್ನು ಹೆಚ್ಚಾಗಿ ಪಡೆದು ಪ್ರತಿಸ್ಪರ್ಧಿ ಕೃಷ್ಣಪ್ಪ ವಿರುದ್ಧ ಜಯ ಗಳಿಸಿದ್ದೇನೆ. ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಮತಗಳನ್ನು ನೀಡಿದ್ದು ಸದಸ್ಯರ ಹಿತ ಕಾಪಾಡುವಲ್ಲಿ ಬದ್ಧನಾಗಿರುತ್ತೇನೆ ಎಂದರು.

ಅನುಗೊಂಡಹಳ್ಳಿ ಮುಖಂಡ ಬಿಎಂ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಟಿಕೆ.ಕೃಷ್ಣಾರೆಡ್ಡಿ, ಅನುಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಮುತ್ಕೂರು ಸಂತೋಷ್, ಮುತ್ಕೂರು ವಿಎಸ್‌ಎಸ್‌ಎನ್ ಅಧ್ಯಕ್ಷ ಪ್ರಕಾಶ್, ಉಪಾದ್ಯಕ್ಷ ರಾಜ್‌ಕುಮಾರ್, ಮುಖಂಡರಾದ ತತ್ತನೂರು ಮಂಜುನಾಥ್, ಮುತ್ಸಂದ್ರ ಮುರಳಿ, ಅಜಗೊಂಡನಹಳ್ಳಿ ನಾಗೇಶ್, ಮುತ್ಕೂರು ಶೇಖರ್, ಶಿವರಾಜ್, ಅಬ್ದುಲ್ಲಾ, ಹಾರೋಹಳ್ಳಿ ದೇವರಾಜ್, ದೇವನಗೊಂದಿ ಗ್ರಾಪಂ ಮಾಜಿ ಅಧ್ಯಕ್ಷ ಮಾರೇಗೌಡ, ಬಾಣಾರಹಳ್ಳಿ ಅಶೋಕ್, ಕಮಲಾಪತಿ, ಪ್ರದೀಪ್, ಸಿಇಒ ರವಿಚಂದ್ರ.ಡಿಸಿ ಸೇರಿದಂತೆ ವಿಎಸ್‌ಎಸ್‌ಎನ್ ನಿರ್ದೇಶಕರಾದ ದೇವನಗೊಂದಿ ಮಂಜುನಾಥ್ ಅಭಿನಂದಿಸಿದರು.

ಫೋಟೋ: 17 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಮುತ್ತೂರು ವಿಎಸ್‌ಎಸ್‌ನ ನಿರ್ದೇಶಕರಾಗಿ ಆಯ್ಕಯಾಗಿರುವ ಮುತ್ಕೂರು ಶ್ರೀನಿವಾಸರನ್ನು ಸಂಘದ ಅಧ್ಯಕ್ಷ ಪ್ರಕಾಶ್, ನಿರ್ದೇಶಕರು, ಮುಖಂಡರು ಅಭಿನಂದಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌