ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಶ್ರೀನಿವಾಸ ಪ್ರಸಾದ್ ದಲಿತರ ಅಭ್ಯುದಯಕ್ಕಾಗಿ ಅವರಿಗೆ ಸಮಾನ ಹಕ್ಕು ಕಲ್ಪಿಸುವಲ್ಲಿ ಶ್ರಮಿಸಿದವರು. ಚಾಮರಾಜನಗರ ಭಾಗದ ಎರಡು ರತ್ನಗಳನ್ನು ನಾವು ಕಳೆದುಕೊಂಡಿದ್ದೆವೆ, ಅವರ ಸ್ಥಾನ ತುಂಬುವಲ್ಲಿ ಮುಂದಿನ ತಲೆಮಾರಿನ ಪೀಳಿಗೆ ಅವರ ಆದಶ೯ ರೂಡಿಸಿಕೊಳ್ಳಬೇಕೆಂದರು.ಚಾಮುಲ್ ನಿರ್ದೇಶಕ ನಂಜುಂಡಸ್ವಾಮಿ ಮಾತನಾಡಿ, ವಿ ಶ್ರೀನಿವಾಸ ಪ್ರಸಾದ್ ಅವರು ನೇರ, ನುಡಿಯ ನೇತಾರರಾಗಿದ್ದರು. ಅವರ ಆದರ್ಶವನ್ನು ಯುವ ಪೀಳಿಗೆ ರೂಡಿಸಿಕೊಳ್ಳಬೇಕು, ಅವರು ಸಾಗಿಬಂದ ಹಾದಿ ನಮ್ಮೆಲ್ಲರಿಗೂ ದಾರಿದೀಪವಾಗಬೇಕು ಎಂದರು . ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಮಾತನಾಡಿ, ವಿ ಶ್ರೀನಿವಾಸ ಪ್ರಸಾದ್ ಅವರಿಗೆ ದೀನ, ದಲಿತರು, ಹಿಂದುಳಿದ ವಗ೯ಗಳ ಅಭಿವೃದ್ಧಿ ಬಗ್ಗೆ ಅಪಾರ ಕಳಕಳಿ ಹೊಂದಿದ್ದರು. ಅವರು ಚಾಮರಾಜನಗರ ಜಿಲ್ಲೆಗೆ ನೀಡಿದ ಕೊಡುಗೆ ಅಪಾರ, ಇಂದು ಹೃದಯವಂತರ ಬಳಗ ಅಥಂಹ ಮಹಾನ್ ನಾಯಕರಿಗೆ ನುಡಿ, ನಮಗ ಅರ್ಪಿಸುವ ಜೊತೆಗೆ ಅವರನ್ನು ಸ್ಮರಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ಪ್ರಸಾದ್ ಅವರು ಸ್ವಾಭಿಮಾನಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅದನ್ನ ವಿರೋದಿಸಿದ ಕೆಚ್ಚೆದೆ ಅವರದ್ದಾಗಿತ್ತು ಎಂದರು. ಈ ವೇಳೆ ಕಾಂಗ್ರೆಸ್ ಮುಖಂಡ ಮಾಂಬಳ್ಳಿ ನಂಜುಂಡಸ್ವಾಮಿ, ಡಿಎಸ್ಎಸ್ ವಿಭಾಗೀಯ ಸಂಚಾಲಕ ಸಿದ್ದರಾಜು ದೊಡ್ಡಿಂದುವಾಡಿ, ಭೀಮನಗರ ಯಜಮಾನರಾದ ಡಿ.ನಟರಾಜು, ಶಿವಸ್ವಾಮಿ, ರೈತ ಮುಖಂಡ ಗೌಡೇಗೌಡ, ಹೃದಯವಂತರ ಬಳಗದ ನಿಂಪು ರಾಜೇಶ್, ಸಾಗರ್ ಮತ್ತಿತರರಿದ್ದರು.