ಶ್ರೀರಂಗಪಟ್ಟಣ ಪುರಸಭೆ: 58 ಲಕ್ಷ ರು.ಗಳ ಉಳಿತಾಯ ಬಜೆಟ್ ಮಂಡನೆ

KannadaprabhaNewsNetwork | Published : Mar 9, 2025 1:46 AM

ಸಾರಾಂಶ

ಶ್ರೀರಂಗಪಟ್ಟಣ ಪುರಸಭೆ ಅಧ್ಯಕ್ಷೆ ಯಶೋಧಮ್ಮ ನೇತೃತ್ವದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ 18 ಕೋಟಿ ರು. ಬಜೆಟ್ ಮಂಡನೆಯಾಗಿದ್ದು ಒಟ್ಟು 17,50,21,000 ರುಗಳ ಖರ್ಚಿನೊಂದಿಗೆ 58 ಲಕ್ಷ ರು. ಉಳಿತ ಬಜೆಟ್ ಮಂಡಿಸಲಾಗಿದೆ. ಬಜೆಟ್ ಗೆ ಸಂಬಂಧಿಸಿದಂತೆ ಸದಸ್ಯರಿಂದ ಕೆಲವು ಸಲಹೆ ಸೂಚನೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪುರಸಭೆಯ 2025-26ನೇ ಸಾಲಿನ ಆಯವ್ಯಯದಲ್ಲಿ ಒಟ್ಟು 58 ಲಕ್ಷ ರು. ಉಳಿತಾಯದ ನಿರೀಕ್ಷೆಯ ಬಜೆಟ್ ಮಂಡಿಸಲಾಯಿತು.

ಪುರಸಭೆ ಅಧ್ಯಕ್ಷೆ ಯಶೋಧಮ್ಮ ನೇತೃತ್ವದಲ್ಲಿ ಶುಕ್ರವಾರ ನಡೆದ ಸರ್ವಸದಸ್ಯರ ಸಭೆಯಲ್ಲಿ 18 ಕೋಟಿ ರು. ಬಜೆಟ್ ಮಂಡನೆಯಾಗಿದ್ದು ಒಟ್ಟು 17,50,21,000 ರುಗಳ ಖರ್ಚಿನೊಂದಿಗೆ 58 ಲಕ್ಷ ರು. ಉಳಿತ ಬಜೆಟ್ ಮಂಡಿಸಲಾಗಿದೆ.

3,60,16,962 ರು.ಗಳ ಆರಂಭಿಕ ಶಿಲ್ಕಿನೊಂದಿಗೆ ವೇತನ ಅನುದಾನ 2.72 ಕೋಟಿ ರು. ವಾಣಿಜ್ಯ ಮಳಿಗೆ ಬಾಡಿಗೆ ಹಾಗೂ ಇತರ ಕಟ್ಟೆಗಳ ಬಾಡಿಗೆ ಮತ್ತು ದಂಡ 16,53,500, ಜನಗಣತಿ ಅನುದಾನ 1 ಲಕ್ಷ ರು. ಅಭಿವೃದ್ಧಿ ಶುಲ್ಕ, ಪ್ರಾಧಿಕಾರ ಶುಲ್ಕ 40.50 ಲಕ್ಷರು., ಟ್ರೇಡ್ ಲೈಸೆನ್ಸ್, ಬಿಲ್ಡಿಂಗ್ ಲೈಸೆನ್ಸ್, ವಾಹನ ನಿಲುಗಡೆ, ಚಲನಚಿತ್ರ ಚಿತ್ರೀಕರಣ ಶುಲ್ಕ 55.20 ಲಕ್ಷ ರು, ವಿದ್ಯುತ್ ಚ್ಚಕ್ತಿ ಅನುದಾನ 1.88 ಕೋಟಿ ರು. ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಿದ ಸ್ವಚ್ಛತೆ ಶುಲ್ಕ, ಕಾವೇರಿ ನದಿ ತೀರದಲ್ಲಿ ಸ್ವಚ್ಚತೆ ಶುಲ್ಕ 63.75 ಲಕ್ಷ ರು., ವಾರದ ಸಂತೆ ನೆಲಬಾಡಿಗೆ, ಫುಟ್ ಬಾತ್ ಮತ್ತು ಇತರ ನೆಲಬಾಡಿಗೆ 13 ಲಕ್ಷ ರು., ನೀರಿನ ತೆರಿಗೆ, ಒಳಚರಂಡಿ ಮತ್ತು ನೀರು ಸರಬರಾಜು ಸಂಪರ್ಕ ಶುಲ್ಕ 80.65 ಲಕ್ಷ ರು., ಎಸ್.ಎಫ್.ಸಿ ಅನಿರ್ಬಂಧಿತ ಅನುದಾನ 75 ಲಕ್ಷ ರು., ಪ್ರಮಾಣ ಪತ್ರದ ಶುಲ್ಕಗಳು, ಬ್ಯಾಂಕ್ ಖಾತೆಯಿಂದ ಬರುವ ಬಡ್ಡಿ ಮತ್ತು ಇತರೆ ವಸೂಲಾತಿಗಳು 13.45 ಲಕ್ಷ ರು., ಆಸ್ತಿ ತೆರಿಗೆ, ದಂಡ, ಖಾತೆ ನಕಲು, ವರ್ಗಾವಣೆ ಶುಲ್ಕ ಮತ್ತು ಇತರೆ 1,94,25,000, 15 ನೇ ಹಣಕಾಸು ಯೋಜನೆ 1.50 ಕೋಟಿರು. , ಸ್ವಚ್ಛ ಭಾರತ್ 75 ಲಕ್ಷ ರು., ಎಸ್.ಎಫ್.ಸಿ ವಿಶೇಷ ಅನುದಾನ 1.70 ಕೋಟಿರು. ಸೇರಿದಂತೆ ಇತರ ಮೂಲಗಳಿಂದ ಒಟ್ಟು 18,08,40,463 ರು.ಗಳ ಜಮಾವಣೆಯ ನಿರೀಕ್ಷಣೆ ಮಾಡಲಾಗಿದೆ.

ಕಚೇರಿ ನೌಕರರ ವೇತನ ಅನುದಾನ 2.72 ಕೋಟಿ ರು. , ಕಚೇರಿ ವೆಚ್ಚಗಳು - ಆಡಳಿತ 74.55 ಲಕ್ಷ ರು., ಬೀದಿ ದೀಪ ಮತ್ತು ನೀರು ಸ್ಥಾವರಗಳ ವಿದ್ಯುತ್ ಬಿಲ್ ಪಾವತಿಗಾಗಿ 1.88 ಕೋಟಿ ರು., ಹೊರಗುತ್ತಿಗೆ ಬೀದಿ ದೀಪ ನಿರ್ವಹಣೆ ಮತ್ತು ಬೀದಿ ದೀಪ ದುರಸ್ಥಿ ಸಂಬಂಧಿಸಿದ ವೆಚ್ಚ 53 ಲಕ್ಷರು., ಬಿಡಾಡಿ ನಾಯಿ ನಿಯಂತ್ರಣ ವೆಚ್ಚ, ಪಲ್ಸ್ ಪೋಲಿಯೊ ಇತರೆ ವೆಚ್ಚ 64.80 ಲಕ್ಷ ರು., ಘನತ್ಯಾಜ್ಯ ವಿಭಾಗದ ನಿರ್ವಹಣಾ ವೆಚ್ಚ 1,18,75,000, ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣಾ ವೆಚ್ಚ 1,35,10,000, ವಾಣಿಜ್ಯ ಕಟ್ಟಡಗಳು, ಲಘು ವಾಹನಗಳು, ಸ್ವಾಗತ ಫಲಕ, ಕಚೇರಿ ಉಪಕರಣ, ಪೀಠೋಪಕರಣಗಳು ಇತರೆ 72 ಲಕ್ಷರು., ರಸ್ತೆ, ಚರಂಡಿ, ಮೇಲ್ಸೇತುವೆಗಳು ಮತ್ತು ತೆರೆದ ಚರಂಡಿ 1.10 ಕೋಟಿರು., ಬೀದಿ ದೀಪ ಮತ್ತು ಸಂಚಾರಿ ದೀಪಗಳು 45 ಲಕ್ಷ ರು., ಘನತ್ಯಾಜ್ಯ ನಿರ್ವಹಣೆ - ವಾಹನ ಖರೀದಿ ಇತರೆ 1.60 ಕೋಟಿರು., ನೀರು ಸರಬರಾಜು ಮತ್ತು ಒಳಚರಂಡಿ ಸಂಬಂಧಿ ಆಸ್ತಿಗಳ ಸೃಜನೆ 1,62,50,000, ಪ.ಜಾ/ಪ.ಪಂ/ಹಿಂದುಳಿದ ವರ್ಗಗಳ ರಸ್ತೆ, ಚರಂಡಿ, ಬೀದಿ ದೀಪ ಮತ್ತು ತೆರೆದ ಚರಂಡಿ ವೆಚ್ಚ 22.50 ಲಕ್ಷ ರು. ಸೇರಿದಂತೆ ಇತರ ಖರ್ಚುಗಳು ಸೇರಿದಂತೆ ಒಟ್ಟು 17,50,21,000 ರುಗಳ ವೆಚ್ಚಗಳನ್ನು ಪಟ್ಟಿ ಮಾಡಿಕೊಂಡಿದ್ದು ಈ ಬಾರಿಯ ಬಜೆಟ್ ನಲ್ಲಿ ಒಟ್ಟು 58,19,463 ರುಗಳ ಆದಾಯವನ್ನು ನಿರೀಕ್ಷಿಸಲಾಗಿದೆ.

ಬಜೆಟ್ ಗೆ ಸಂಬಂಧಿಸಿದಂತೆ ಕೆಲವು ಸಲಹೆ ಸೂಚನೆ ನೀಡಿದ ಸದಸ್ಯರು, ಪಟ್ಟಣದ ಪುರಸಭಾ ಜಾಗಗಳನ್ನು ಗುರ್ತಿಸಿ, ಉಳಿಸಿಕೊಳ್ಳುವುದು, ಮಾಂಸದ ಅಂಗಡಿಗ ಹಾಗೂ ಸಣ್ಣಪುಟ್ಟ ವ್ಯಾಪರ ಮಾಡುವ ಅಂಗಡಿಗಳನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಿಕೊಡುವುದರಿಂದ ಪುರಸಭೆಗೆ ಆದಾಯದ ಜೊತೆತೆ ಪಟ್ಟಣ ಅಂಧವಾಗಿ ಕಾಣಲಿದೆ ಎಂದರು.

ಜೊತೆಗೆ ಮುಖ್ಯರಸ್ತೆಗೆ ರಣಧೀರ ಕಂಠೀರವ, ಐತಿಹಾಸಿಕ ಬತ್ತೇರಿ ಮುಂಭಾಗದ ಜಾಗಕ್ಕೆ ಚುಂಚೇಗೌಡ ವೃತ್ತ, ಖಾಸಗಿ ಬಸ್‌ನಿಲ್ದಾಣಕ್ಕೆ ಕೆ. ಬಲರಾಂ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಬಡಾವಣೆಗೆ ವಿವೇಕಾನಂದ ಬಡಾವಣೆ ಎಂದು ಈಗಾಗಲೇ ಹೆಸರು ಸೂಚಿಸಿ ಅನುಮೋದನೆ ತರಲಾಗಿದೆ. ಶೀಘ್ರ ಅನುಷ್ಠಾನಗೊಳಿಸುವುದು. ಬೀದಿ ದೀಪ, ಸ್ವಚ್ಛತೆ, ಕುಡಿಯುವ ನೀರು, ಬೀದಿ ನಾಯಿಗಳ ಹಾವಳಿ ಸೇರಿದಂತೆ ತುರ್ತಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸುವಂತೆ ಹಾಗೂ ಪುರಸಭೆಗೆ ಮತ್ತಷ್ಟು ಆದಾಯ ಬರುವಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲ ತಮ್ಮತಮ್ಮ ಸಲಹೆ ನೀಡಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಎಂ.ಎಲ್.ದಿನೇಶ್, ಮುಖ್ಯಾಧಿಕಾರಿ ಎಂ.ರಾಜಣ್ಣ ಉಪಸ್ಥಿತರಿದ್ದರು. ಸದಸ್ಯರ ಸೂಚನೆಗಳನ್ನು ಆಲಿಸಿ ತ್ವರಿತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪುರಸಭೆ ಸದಸ್ಯರು ಸೇರಿದಂತೆ ನಾಮನಿರ್ದೇಶಿತ ಸದಸ್ಯರು ಹಾಜರಿದ್ದರು.

Share this article