ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಅಧ್ಯಕ್ಷ ಎಸ್.ಎಂ.ನಾಗರಾಜು ಮಾತನಾಡಿ, ಹಿಂದಿನ ಆಡಳಿತ ಮಂಡಳಿಯಲ್ಲಿ ನಮ್ಮ ಸಂಘ ಅಪಾರ ನಷ್ಟದಲ್ಲಿಯೇ ನಡೆದುಕೊಂಡು ಬಂದಿತ್ತು. ಹಿಂದಿನ ಅಧ್ಯಕ್ಷ ನಂದೀಶ್ ಅವಧಿಯಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆಯಾಗಿದೆ.ಸಂಘದ ಜಾಗದಲ್ಲಿರುವ ಮಳಿಗೆ, ಕಲ್ಯಾಣ ಮಂಟಪಬಾಡಿಗೆ, ಸಗಟು ಪಡಿತರ ವ್ಯಾಪಾರ ಲಾಭ,ವಾಹನಗಳಿಂದ ಬಾಡಿಗೆ, ಕಾಲೇಜುಗಳಿಂದ, ತೋಟಗಾರಿಕೆ ಲಾಭ, ಬ್ಯಾಂಕ್ ಹೂಡಿಕೆಗಳ ಬಡ್ಡಿ ಇತರ ಆದಾಯಗಳಿಂದ ಬಂದ ಹಣದಲ್ಲಿ ಜಮಾ ಮತ್ತು ಖರ್ಚುಗಳ, ಕಳೆದು ಸಂಘಕ್ಕೆ ಈ ಬಾರಿ 33,39,377 ರು. ಲಾಭ ಬಂದಿದ್ದು, ಈ ಹಿಂದೆ ಇದ್ದ ನಷ್ಟಕ್ಕೆ ಜಮಾ ಮಾಡಲಾಗಿದೆ ಎಂದರು.
ನಂತರ ಸಂಘದ ಷೇರುದಾರರು ಮೃತರಾದರೆ ಮರಣೋತ್ತರವಾಗಿ ಅವರು ಸಂಘಕ್ಕೆ ಕಟ್ಟಿದ ಷೇರು ಹಣದ ಜೊತೆ ಭವಿಷ್ಯ ನಿಧಿಯಿಂದ 5 ಸಾವಿರ ರೂಗಳನ್ನು ಸಂಘದಿಂದ ಮೃತರ ಕುಟುಂಬಗಳಿಗೆ ನೀಡಲಾಗುತ್ತಿತ್ತು. ಈ ಬಾರಿ ಷೇರುದಾರರಿಗೆ ಇನ್ನಷ್ಟು ಭವಿಷ್ಯ ನಿಧಿ ಹಣವನ್ನು ನೀಡಲು ಮತ್ತೇ 1100 ರು.ಗಳನ್ನು ಭವಿಷ್ಯ ಕಟ್ಟಿಸಿಕೊಂಡು ಮೃತರ ಕುಟುಂಬಕ್ಕೆ 10 ಸಾವಿರ ನೀಡಲಾಗುತ್ತದೆ ಎಂದರು.ಸಂಘದಲ್ಲಿ ಈ ಹಿಂದೆ ಇದ್ದ ಕಾರ್ಯದರ್ಶಿಗಳು ಹಣ ದುರುಪಯೋಗದ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯಗಳು ಇದ್ದು, ಅವುಗಳು ಎಂದಿನಂತೆ ನಡೆಯುತ್ತಿದೆ ಎಂದು ಹೇಳಿದರು. ಸಂಘದ ಪ್ರಭಾರ ಕಾರ್ಯದರ್ಶಿ ಶಂಕರ್ ಸಂಘದ ಜಮಾ ಖರ್ಚಿನ ಬಗ್ಗೆ ಷೇರುದಾರರಿಗೆ ಸಭೆಯಲ್ಲಿ ಓದಿ ತಿಳಿಸಿದರು.