- ಹಿರೇಕಲ್ಮಠದಲ್ಲಿ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀ । 650 ಕಿಮೀ ಪಾದಯಾತ್ರೆ ಮುಗಿಸಿದ ಶ್ರೀಗಳು
- - -ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಧರ್ಮ ಜಾಗೃತಿ, ಪರಿಸರ ಜಾಗೃತಿ ಹಾಗೂ ಲೋಕಕಲ್ಯಾಣಕ್ಕಾಗಿ 9 ವರ್ಷಗಳಿಂದಲೂ ಹಿರೇಕಲ್ಮಠದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಹಿರೇಕಲ್ಮಠದಿಂದ ಶ್ರೀಶೈಲಕ್ಕೆ ಮಾರ್ಚ್ 13ರ ಬೆಳಗಿನ ಜಾವ ಹೊರಟು 650 ಕಿ.ಮೀ. ಪಾದಯಾತ್ರೆ ಮುಗಿಸಿ, ಬುಧವಾರ ಹೊನ್ನಾಳಿಗೆ ಆಗಮಿಸಿದಾಗ ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನೂರಾರು ಭಕ್ತರು ಭಕ್ತಿಯಿಂದ ಬರಮಾಡಿಕೊಂಡ ವೇಳೆ ಎಲ್ಲರನ್ನೂ ಆಶೀರ್ವದಿಸಿ ಅವರು ಮಾತನಾಡಿದರು.
9 ವರ್ಷಗಳಿಂದ ಧರ್ಮಜಾಗೃತಿ ಮಾಡುವ ಉದ್ದೇಶ ಹಾಗೂ ಪರಿಸರ ರಕ್ಷಣೆ ಕಾಳಜಿಯಿಂದ ಪಾದಯಾತ್ರೆಯ ದಾರಿಯುದ್ದಕ್ಕೂ ಗಿಡಗಳನ್ನು ನೆಟ್ಟು, ಅಲ್ಲಿನ ಜನರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದು ಕೇವಲ ಪ್ರಚಾರಕ್ಕೆ ಅಲ್ಲ, ಇದರಲ್ಲಿ ಸಾಮಾಜಿಕ ಕಾಳಜಿ ಅಡಗಿದೆ. ಇತ್ತೀಚಿಗೆ ಯುವಕರು ಯಾವುದೇ ಸಾಮಾಜಿಕ ಕಳಕಳಿ ಹೊಂದದೇ ಕೇವಲ ಮೊಬೈಲ್, ಟಿವಿ ವೀಕ್ಷಣೆಯಲ್ಲಿ ತೊಡಗಿದ್ದಾರೆ. ಇದರಿಂದ ಯುವಕರು ಸತ್ಕಾರ್ಯಗಳಿಂದ ವಿಮುಖರಾಗುತ್ತಿರುವುದು ಬೇಸರದ ಸಂಗತಿ ಎಂದರು.ಧರ್ಮಕ್ಕೆ ಅಪಾಯ ಬಂದಾಗ ನಮ್ಮ ಯುವಕರು ತನಗೂ, ಇದಕ್ಕೂ ಏನು ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಮಠಗಳ ಬಗ್ಗೆ ಗೌರವಗಳು ಇಲ್ಲದಂತಾಗಿದೆ. ಕೇವಲ ಆಧುನಿಕ ಜೀವನಕ್ಕೆ ಮಾರುಹೋಗಿರುವ ಯುವಕರನ್ನು ಧರ್ಮ ಕಾರ್ಯದಲ್ಲಿ ತೊಡಗಿಸಬೇಕು ಎನ್ನುವ ದೃಷ್ಟಿಯಿಂದ ನಾವು ಪ್ರತಿವರ್ಷ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ಪುರಸಭೆ ಸದಸ್ಯ ಹೊಸಕೇರಿ ಸುರೇಶ್, ಪುರಸಭೆ ಮಾಜಿ ಉಪಾಧ್ಯಕ್ಷ ಸರಳಿನಮನೆ ಮಂಜಪ್ಪ, ಕುಮಾರ ಸ್ವಾಮಿ, ಕತ್ತಿಗೆ ನಾಗರಾಜ್, ಸಂತೋಷ್, ವಿದ್ಯಾ ಸಂತೋಷ್, ನೂರಾರು ಭಕ್ತರು ಇದ್ದರು.- - -
ಕೋಟ್ ಸಮಾಜದ ಸತ್ಕಾರ್ಯಗಳಲ್ಲಿ ಯುವಕರು ತೊಡಗಿಸಿಕೊಂಡರೆ ಮಾತ್ರ ದೇಶ ಸುಭೀಕ್ಷೆಯಿಂದ ಕೂಡಿರುತ್ತದೆ. ಯುವಕರಲ್ಲಿ ದೇಶಭಕ್ತಿ, ತಂದೆ-ತಾಯಂದರಲ್ಲಿ ಗೌರವ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಇವುಗಳನ್ನು ಕಲಿಸಬೇಕಾದರೆ ಅವರನ್ನು ಧರ್ಮದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಸೂಕ್ತ ರೀತಿಯಲ್ಲಿ ಅಭ್ಯಾಸ ಮಾಡಿಸಬೇಕು- ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀ, ಹಿರೇಕಲ್ಮಠ
- - --26ಎಚ್.ಎಲ್.ಐ1.ಜೆಪಿಜಿ:
ಶ್ರೀಶೈಲ ಕ್ಷೇತ್ರ ಪಾದಯಾತ್ರೆ ಮುಗಿಸಿ ಹೊನ್ನಾಳಿ ಹಿರೇಕಲ್ಮಠಕ್ಕೆ ಆಗಮಿಸಿದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರನ್ನು ಭಕ್ತರು ಸಂಭ್ರಮದಿಂದ ಸ್ವಾಗತಿಸಿದರು.