ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಅಲ್ಲದೆ ಅರಕಲಗೂಡು ತಾಲೂಕಿನಲ್ಲಿ ಪ್ರತಿಭಾ ಅನ್ವೇಷಣೆ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೂ ಕೀರ್ತಿ ತಂದಿರುತ್ತಾರೆ. ಅರಕಲಗೂಡು ತಾಲೂಕಿನಲ್ಲಿ ಪ್ರತಿಭಾ ಅನ್ವೇಷಣೆ ವಿದ್ಯಾರ್ಥಿ ವೇತನ ಪರಿಕ್ಷೆಯಲ್ಲಿ 13 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಬಸವಾಪಟ್ಟಣ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಗ್ರಾಮದ ಕೆಪಿಎಸ್‌ಗೆ ಮತ್ತೊಂದು ಹಿರಿಮೆ ಎನಿಸಿದೆ.ಈ ಶಾಲೆಯ ಸೃಜನಕುಮಾರ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಆರ್. ಡಿ ಸೌಪರ್ಣಿಕ, ರುಷ್ಯಂತ್, ಸುಚೇಂದ್ರ, ತಾರಿಕ, ಮಾನಸ, ಮೇಘ ಆಯ್ಕೆಯಾಗಿರುವ ವಿದ್ಯಾರ್ಥಿಗಳಾಗಿದ್ದು, ಮೆಲ್ಕಂಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಲಭಿಸಲಿದೆ. ಇದೇ ಶಾಲೆಯ 2025-26ನೇ ಸಾಲಿನ ನಡೆದ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಶೇ. 100 ಸಾಧನೆ ಮಾಡಿದ ಸರ್ಕಾರಿ ಶಾಲೆಯಾಗಿದೆ.ಎಸ್.ಡಿ.ಎಂ.ಸಿ ಸದಸ್ಯರು ಗ್ರಾಮದ ಮುಖಂಡರಾದ ನಿರ್ವಣೇಗೌಡ, ಹರೀಶ್, ಚೇತನ್ ಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಪ್ರಾಂಶುಪಾಲರಾದ ಹರೀಶ, ವೈದ್ಯಾಧಿಕಾರಿಗಳಾದ ಡಾ. ರಾಜೇಶ್ ಮೊದಲಾದವರು ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.