ಮೂಲ್ಕಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಟೀಲು ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಒಟ್ಟು 81 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರು ಉತ್ತೀರ್ಣರಾಗಿದ್ದಾರೆ. ಧನ್ಯಾ ಎಸ್. 604, ಶಾರ್ವರಿ - 601, ಪ್ರತಿಕ್ಷಾ- 589 ಅಂಕ ಪಡೆದಿದ್ದಾರೆ.
ಕಡಂದಲೆಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಶೇ.100 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತ 42 ವಿದ್ಯಾರ್ಥಿಗಳಲ್ಲಿ 5 ವಿಶಿಷ್ಟ ದರ್ಜೆ,27 - ಪ್ರಥಮ ದರ್ಜೆ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.ಮೂಲ್ಕಿ ಸಮೀಪದ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆ ಶೇ.100 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ 104 ವಿದ್ಯಾರ್ಥಿಗಳು ಎಲ್ಲರೂ ತೇರ್ಗಡೆ ಹೊಂದಿದ್ದಾರೆ. ಭಾರ್ಗವಿ ಮಯ್ಯ 620 ಅಂಕ, ನಿವೇದಿತಾ ಕಾಮತ್ 616, ಅನನ್ಯ ಬಿ. ಪುತ್ರನ್ 609 ಅಂಕ ಪಡೆದಿದ್ದಾರೆ.
ಮೂಲ್ಕಿಯ ಸರ್ಕಾರಿ ಫ್ರೌಢಶಾಲೆ ಶೇ.ನೂರು ಫಲಿತಾಂಶ ಪಡೆದಿದ್ದು ಪರೀಕ್ಷೆಗೆ ಹಾಜರಾದ ಎಲ್ಲ 14 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 2 ಮಂದಿ ಉನ್ನತ ಶ್ರೇಣಿ, 6 ಮಂದಿ ಪ್ರಥಮ, 6 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.ಮೂಲ್ಕಿಯ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.98 ಫಲಿತಾಂಶ ಪಡೆದಿದ್ದು ಪರೀಕ್ಷೆಗೆ ಹಾಜರಾದ 91 ವಿದ್ಯಾರ್ಥಿಗಳಲ್ಲಿ 89 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಸ್ನೇಹ ಪುರ್ಟಾಡೋ 610, ಯಶ್ವಿತ್ ಡಿ. ಕಾಂಚನ್ 605, ಪೂರ್ವಿ ವೈ. ಸಾಲ್ಯಾನ್ 603, ಅರ್ಪಿತಾ ಆಚಾರ್ 603 ಅಂಕ ಪಡೆದಿದ್ದಾರೆ. ---
ಕಮ್ಮಜೆ ಮೊರಾರ್ಜಿ ಶಾಲೆ ಸತತ 13ನೇ ಬಾರಿಗೆ ಶೇ.100 ಫಲಿತಾಂಶಮೂಲ್ಕಿ: ಕಿನ್ನಿಗೋಳಿ ಸಮೀಪದ ಕಮ್ಮಜೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸತತ 13ನೇ ಬಾರಿಗೆ ಶೇ.100 ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 46 ಮಂದಿ ತೇರ್ಗಡೆ ಹೊಂದಿದ್ದು 26 ಮಂದಿ ವಿಶಿಷ್ಟ ಶ್ರೇಣಿ, 18 ಮಂದಿ ಪ್ರಥಮ ದರ್ಜೆ ಹಾಗೂ ಇಬ್ಬರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕುಮಾರ ಗೌಡ ಎಸ್.ಎಚ್. 619 ಅಂಕ, ಕಿರಣ್ ಕುಮಾರ್ ಎಂ.ಎಂ. ಹಾಗೂ ಕೀರ್ತನ್ ಟಿ.ಬಿ. ತಲಾ 617 ಅಂಕ ಪಡೆದಿದ್ದಾರೆ.