ರಾಮನಗರ: ಶಾಲಾ ಶಿಕ್ಷಣ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಫಲಿತಾಂಶದಲ್ಲಿ ರಾಮನಗರ ಜಿಲ್ಲೆ ಶೇ.71.16ರಷ್ಟು ಫಲಿತಾಂಶ ಲಭಿಸಿದ್ದು, ರಾಜ್ಯದಲ್ಲಿ 26ನೇ ಸ್ಥಾನ ಪಡೆದುಕೊಂಡಿದೆ.
2022ರಲ್ಲಿ ಶೇ.93.81ರಷ್ಟು ಫಲಿತಾಂಶವನ್ನು ದಾಖಲು ಮಾಡಿದ್ದ ಜಿಲ್ಲೆಯು, 2023ರಲ್ಲಿ ಶೇ.89.90ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇ.18.74ರಷ್ಟು ಕಡಿಮೆ ಫಲಿತಾಂಶ ಬಂದಿದೆ.
ರಾಮನಗರ ತಾಲೂಕಿನಲ್ಲಿ 3416 ಮಂದಿಯಲ್ಲಿ 2390 (ಶೇ.69.96), ಚನ್ನಪಟ್ಟಣ ತಾಲೂಕಿನಲ್ಲಿ 2902 ಮಂದಿಯಲ್ಲಿ 1939 (ಶೇ.66.81), ಕನಕಪುರ ತಾಲೂಕಿನಲ್ಲಿ 3857 ಮಂದಿ ಪೈಕಿ 2682 (ಶೇ.69.53) ಹಾಗೂ ಮಾಗಡಿ ತಾಲೂಕಿನಲ್ಲಿ 2506 ಮಂದಿಯಲ್ಲಿ 2014 (ಶೇ.80.36) ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.ಗ್ರೇಡ್ ಮಾದರಿ ಹಾಗೂ ಗುಣಾತ್ಮಕ ವಿಧಾನದ ಮೂಲಕ ಫಲಿತಾಂಶ ಪ್ರಕಟಿಸಲಾಗಿದ್ದು, ಇದರಲ್ಲಿ 254 ವಿದ್ಯಾರ್ಥಿಗಳು ಎ+ ಶ್ರೇಣಿ, 821 ವಿದ್ಯಾರ್ಥಿಗಳು ಎ ಶ್ರೇಣಿ , 1346 ಮಂದಿ ಬಿ + ಶ್ರೇಣಿ , 1939 ವಿದ್ಯಾರ್ಥಿಗಳು ಬಿ ಶ್ರೇಣಿ, 2619 ಮಂದಿ ಸಿ + ಶ್ರೇಣಿ ಹಾಗೂ 1974 ವಿದ್ಯಾರ್ಥಿಗಳು ಸಿ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೋಲಿಕೆ ಮಾಡಿದರೆ ನಗರ ಪ್ರದೇಶದ ವಿದ್ಯಾರ್ಥಿಗಳು ಮುಂದಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. ಗ್ರಾಮಾಂತರದಲ್ಲಿ ಬಾಲಕ ಹಾಗೂ ಬಾಲಕಿಯರು ಕ್ರಮವಾಗಿ ಶೇ.63.65 ಹಾಗೂ 78.52 ಫಲಿತಾಂಶ ದಾಖಲು ಮಾಡಿದ್ದಾರೆ. ನಗರ ಪ್ರದೇಶ ವಿದ್ಯಾರ್ಥಿಗಳಲ್ಲಿ 61.57ರಷ್ಟು ಬಾಲಕರು ಹಾಗೂ 81.06ರಷ್ಟು ಬಾಲಕಿಯರು ಫಲಿತಾಂಶ ದಾಖಲು ಮಾಡಿದ್ದಾರೆ.
ಖಾಸಗಿ ಶಾಲೆ ಮುಂದು:
ಇನ್ನು ಈ ಬಾರಿ ಎಸ್ಸೆಸ್ಸೆಲ್ಸಿಯ ಆರು ವಿಷಯಗಳಲ್ಲಿಯು ಶೇ.75ರಷ್ಟು ಮೇಲ್ಪಟ್ಟು ಫಲಿತಾಂಶವನ್ನು ದಾಖಲು ಮಾಡಿವೆ. ಪ್ರಥಮ ಭಾಷೆ ಶೇ.79.64, ದ್ವಿತೀಯ ಭಾಷೆ ಶೇ.76.18, ತೃತೀಯ ಭಾಷೆ ಶೇ.76.23, ಗಣಿತ ಶೇ.75.34, ವಿಜ್ಞಾನ ಶೇ.72.56 ಹಾಗೂ ಸಮಾಜ ವಿಜ್ಞಾನ ಶೇ.75.26 ರಷ್ಟು ಫಲಿತಾಂಶವನ್ನು ದಾಖಲು ಮಾಡಿದೆ.
ಜಿಲ್ಲೆಯ ಟಾಪರ್ಸ್
ಬಾಲಕಿಯರ ಮೇಲುಗೈ
ಶಾಲೆಗಳ ವಿ.
ಹಾಜರಾದವರ.ಉತ್ತೀರ್.
ಶೇಕಡಸರ್ಕಾರ.
552.390.
70.72ಅನುದಾನಿ.
316.193.
60.99ಅನುದಾನ ರಹಿ.
397.318.
80.21 ಒಟ್ಟ.12,68.
902.71.16
ಕೋಟ್ ..............ರಾಮನಗರ ಜಿಲ್ಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 21ರಿಂದ 26ನೇ ಸ್ಥಾನಕ್ಕೆ ಕುಸಿದಿರುವುದು ಬೇಸರ ತರಿಸಿದೆ. ಉತ್ತಮ ಫಲಿತಾಂಶ ತರಲು ಸಾಕಷ್ಟು ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ, ಶಿಕ್ಷಕರಿಗೆ ವಿಶೇಷ ತರಬೇತಿ ಕೊಡಿಸುವುದರ ಜೊತೆಗೆ ಯಶಸ್ಸು ಕೈಪಿಡಿಯನ್ನು ಕೊಡಲಾಗಿತ್ತು. ಆದರೂ ಈ ಫಲಿತಾಂಶ ಸಮಾಧಾನ ತಂದಿಲ್ಲ. ಜೂನ್ ತಿಂಗಳಲ್ಲಿ ನಡೆಯುವ ಪರೀಕ್ಷೆ -2ರಲ್ಲಿ ಫಲಿತಾಂಶ ಸುಧಾರಿಸಲು ಕ್ರಮ ವಹಿಸಲಾಗುವುದು. ಶಿಕ್ಷಕರಿಗೂ ಸೂಕ್ತ ಮಾರ್ಗದರ್ಶನ ಕೊಡಲಾಗುವುದು.
-ಪುರುಷೋತ್ತಮ, ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಮನಗರ(ಮಕ್ಕಳು ಫಲಿತಾಂಶ ನೋಡುತ್ತಿರುವ ಒಂದು ಸಾಂದರ್ಭಿಕ ಚಿತ್ರ ಬಳಸಿ)