ಸಚಿವರಾಗಿ ಅಧಿಕಾರ ಸ್ವೀಕರಿಸಿ ಜಿಲ್ಲೆಗೆ ಆಗಮಿಸಿದ್ ಅವರು ತಮ್ಮ ಮನೆದೇವರಾದ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಸಚಿವರನ್ನು ದೇವಾಲಯದ ಆಡಳಿತಾಧಿಕಾರಿ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ದೇಗುಲದ ಇಒ ಶೀಲ ಮತ್ತು ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಸ್ವಾಗತಿಸಿದರು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಧನಲಕ್ಷ್ಮಿ ದಂಪತಿ ಮಂಗಳವಾರ ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ನಾಡಿನ ಸುಭೀಕ್ಷತೆಗಾಗಿ ಪ್ರಾರ್ಥಿಸಿದರು.ನಂತರ ಸಚಿವರು ಮಾತನಾಡಿ, ತಿರುಪತಿಗೆ ಸಮಾನ ಮಹತ್ವವಿರುವ ಶ್ರೀಕ್ಷೇತ್ರ ಮೇಲುಕೋಟೆಯನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾರ್ಗದರ್ಶನದಲ್ಲಿ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಜಿಲ್ಲಾಡಳಿತದಿಂದ ನೀಲನಕ್ಷೆ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗುತ್ತದೆ ಎಂದರು.
ಸಚಿವರಾಗಿ ಅಧಿಕಾರ ಸ್ವೀಕರಿಸಿ ಜಿಲ್ಲೆಗೆ ಆಗಮಿಸಿದ್ ಅವರು ತಮ್ಮ ಮನೆದೇವರಾದ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು. ಸಚಿವರನ್ನು ದೇವಾಲಯದ ಆಡಳಿತಾಧಿಕಾರಿ ಹಾಗೂ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ದೇಗುಲದ ಇಒ ಶೀಲ ಮತ್ತು ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಸ್ವಾಗತಿಸಿದರು.ನಂತರ ಶಾತ್ತುಮೊರೈನಲ್ಲಿ ಪಾಲ್ಗೊಂಡು ಮಹಾರಾಜರಿಗೆ ಸಲ್ಲುವ ಗೌರವವನ್ನು ಸ್ವೀಕರಿಸಿದರು. ಯದುಗಿರಿ ನಾಯಕಿ ಅಮ್ಮನವರು, ರಾಮಾನುಜರ ದರ್ಶನ ಪಡೆದ ನಂತರ ಪ್ರತಿ ಭಾರಿಯಂತೆ ಯತಿರಾಜದಾಸರ್ ಗುರುಪೀಠಕ್ಕೆ ತೆರಳಿ ವಿಜಯಲಕ್ಷ್ಮಿ ಅಮ್ಮನವರ ದರ್ಶನ ಪಡೆದು ಶ್ರೀನಿವಾಸನರಸಿಂಹನ್ ಗುರೂಜಿ ಆಶೀರ್ವಾದ ಪಡೆದರು.
ಈ ವೇಳೆ ಚಲುವರಾಯಸ್ವಾಮಿ ದಂಪತಿಯನ್ನು ವೇದಮಂತ್ರಗಳೊಂದಿಗೆ ಆಶೀರ್ವದಿಸಲಾಯಿತು. ಈ ವೇಳೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ, ಸದಸ್ಯರಾದ ವೆಂಕಟರಾಮೇಗೌಡ, ಬಚ್ಚಿಕೊಪ್ಪಲು ರಾಜು, ಶೋಭ ಸೇರಿದಂತೆ ಹಲವು ಗಣ್ಯರು ಮತ್ತು ನೂರಾರು ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಸ್ವಾಗತ, ಅಭಿನಂದನೆಮೇಲುಕೋಟೆ: ಮನೆದೇವರ ದರ್ಶನಕ್ಕೆ ಮೇಲುಕೋಟೆಗೆ ಆಗಮಿಸಿದ್ದ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭವ್ಯವವಾಗಿ ಸ್ವಾಗತಿಸಿದರು.
ಮೇಲುಕೋಟೆ ಡೈರಿ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು ದಂಪತಿ ದೇವಾಲಯದ ಅಮ್ಮನವರ ಸನ್ನಿಧಿ ಬಳಿ ಸಚಿವರನ್ನು ಅಭಿನಂದಿಸಿ ಕಾಲುಮುಟ್ಟಿ ನಮಸ್ಕರಿಸಿದರು. ಜಿಪಂ ಮಾಜಿ ಸದಸ್ಯ ಎಚ್.ತ್ಯಾಗರಾಜು ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಬೃಹತ್ ಹೂವಿನ ಹಾರಗಳನ್ನು ಸಚಿವರಿಗೆ ಹಾಕಿ ಅಭಿನಂದಿಸಿದರು.ಮೇಲುಕೋಟೆ ಕೃಷಿಪತ್ತಿನ ಸಂಘದ ಅಧ್ಯಕ್ಷ ಎಂಬಿ ಯೋಗನರಸಿಂಹೇಗೌಡ, ಯುವಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಗಂಗಾಧರ್, ರಾಂಪುರ ರಮೇಶ್ ಸೇರಿದಂತೆ ಹಲವರು ಮುಖಂಡರು ಇದ್ದರು.