ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಒಟ್ಟು 52 ಪ್ರೌಢಶಾಲೆಗಳ ಪೈಕಿ ತಾಲೂಕಿನ ಸೋಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ದೇವಲಾಪುರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ ಲಭಿಸಿದೆ. ಒಟ್ಟಾರೆ ತಾಲೂಕಿಗೆ ಈ ಬಾರಿ ಶೇ.74.5 ಸರಾಸರಿ ಫಲಿತಾಂಶ ಸಿಕ್ಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ತಿಳಿಸಿದ್ದಾರೆ.
ತಾಲೂಕಿನ 25 ಸರ್ಕಾರಿ ಪ್ರೌಢಶಾಲೆ, 13 ಅನುದಾನಿತ ಪ್ರೌಢಶಾಲೆ, 6 ವಸತಿ ಶಾಲೆಗಳು ಹಾಗೂ 8 ಅನುದಾನ ರಹಿತ ಪ್ರೌಢಶಾಲೆಗಳಿಂದ 1223 ಬಾಲಕರು ಮತ್ತು 1064 ಬಾಲಕಿಯರು ಸೇರಿ ಒಟ್ಟು 2287 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1704 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.ತಾಲೂಕಿನ ಬಿ.ಜಿ.ನಗರದ ಭಕ್ತನಾಥಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿ ಬಿ.ಜಿ.ಸಾಧನ(612) ಪಟ್ಟಣದ ಶ್ರೀ ಕುವೆಂಪು ಸ್ಮಾರಕ ಪ್ರೌಢಶಾಲೆ ವಿದ್ಯಾರ್ಥಿ ಎಂ.ಜೆ. ಚೌತಿಕ್(611), ಬಿ.ಜಿ.ನಗರದ ಭಕ್ತನಾಥಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ರಕ್ಷಾ(602) ಮತ್ತು ವೈಭವ ಎಲ್.ಎಚ್.ಗೌಡ(602) ಪಟ್ಟಣದ ಎಲ್ಲೆನ್ ಪ್ರೌಢಶಾಲೆಯ ಡಿ.ಎಲ್.ರೂಪಶ್ರೀ(601) ಬಿ.ಜಿ.ನಗರದ ಭಕ್ತನಾಥಸ್ವಾಮಿ ಪ್ರೌಢಶಾಲೆ ಎಚ್.ಮೇಘನ(599) ಎಲ್ಲೆನ್ ಪ್ರೌಢಶಾಲೆ ಆರ್.ಇಶಾನಿ(599) ಹಾಗೂ ರೋಡರಿ ಪ್ರೌಢಶಾಲೆ ಧನುಷ್ ಎಸ್.ದೇವಾಡಿಗ(599) ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಯು.ಜಿ.ನಮ್ರತಾ(598) ಬಿ.ಜಿ.ನಗರದ ಭಕ್ತನಾಥಸ್ವಾಮಿ ಪ್ರೌಢಶಾಲೆಯ ಪಿ.ಸಿ.ಕುಶಾಲ್(597) ಶಿರಾಪಟ್ಟಣದ ವಿಸ್ಡಂ ಪಬ್ಲಿಕ್‌ಶಾಲೆಯ ಬಿ.ಕೆ.ತಾರುಣ್ಯ(590) ಹಾಗೂ ತಾಲೂಕಿನ ಕಾಂತಾಪುರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಜಿ.ಜೆಸೃಜನ್‌ಗೌಡ(590) ಅಂಕ ಪಡೆದುಕೊಂಡಿದ್ದಾರೆ.
-ಎನ್.ಚಲುವರಾಯಸ್ವಾಮಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ.