ಈ ಬಾರಿ ಶೇಕಡವಾರು 13.5 ಹೆಚ್ಚುವರಿ ಗಳಿಕೆ । ಆದರೂ 22ನೇ ಸ್ಥಾನದಿಂದ 33ನೇ ಸ್ಥಾನಕ್ಕಿಳಿದ ಚಿಕ್ಕಬಳ್ಳಾಪುರ ಜಿಲ್ಲೆ
2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆ ಶೇ. 90.88 ರಷ್ಟು ಫಲಿತಾಂಶವನ್ನು ಪಡೆದಿದೆ. ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಶೇಕಡವಾರು 13.5 ಹೆಚ್ಚುವರಿ ಗಳಿಕೆ ಮಾಡಿದರೂ 22ನೇ ಸ್ಥಾನದಿಂದ 33ನೇ ಸ್ಥಾನಕ್ಕಿಳಿದಿದೆಗುಡಿಬಂಡೆ ತಾಲೂಕು ಶೇ. 95.95, ಚಿಕ್ಕಬಳ್ಳಾಪುರ ತಾಲೂಕು ಶೇ.95.32, ಚಿಂತಾಮಣಿ ತಾಲೂಕು ಶೇ.93.05, ಶಿಡ್ಲಘಟ್ಟ ತಾಲೂಕು ಶೇ. 92.39, ಬಾಗೇಪಲ್ಲಿ ತಾಲೂಕು ಶೇ. 90.09 ಹಾಗೂ ಗೌರಿಬಿದನೂರು ತಾಲೂಕು ಶೇ.80.72 ರಷ್ಟು ಫಲಿತಾಂಶವನ್ನು ಗಳಿಸಿವೆ. ಈ ಬಾರಿ ಜಿಲ್ಲೆಯಲ್ಲಿ 14,375 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12,999 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಈ ಪೈಕಿ 6,910 ಬಾಲಕಿಯರು ಉತ್ತೀರ್ಣರಾಗಿ ಶೇ 92.93 ರಷ್ಟು, 6,089 ಬಾಲಕರು ಉತ್ತೀರ್ಣರಾಗಿರಾಗಿ ಶೇ 87.73 ರಷ್ಷು ಪಾಸಾಗಿ, ಎಂದಿನಂತೆ ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ವಿದ್ಯಾರ್ಥಿ:ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದ ಬಿಜಿಎಸ್ ವಿದ್ಯಾನಿಕೇತನ ಶಾಲೆಯ ಜಿ.ಪ್ರಣತಿ ರಾಜ್ ಎಂಬ ವಿದ್ಯಾರ್ಥಿನಿ ಶೇ 625ಕ್ಕೆ 624 ಅಂಕ ಗಳಿಸಿ ಶೇ. 99.84 ರಷ್ಟು ಪಡೆದು ರಾಜ್ಯಕ್ಕೆ 2ನೇ ಸ್ಥಾನ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ.ಜಿಲ್ಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು:ಅಗಲಗುರ್ಕಿಯ ಬಿಜಿಎಸ್ ಗ್ರಾಮಾಂತರ ಆಂಗ್ಲ ಶಾಲೆಯ ವಿದ್ಯಾರ್ಥಿ ಪಿ.ಎಸ್. ಸುಫೀಯಾ, ಬಾಗೇಪಲ್ಲಿಯ ಶ್ರೀ ಎಸ್ಎಸ್‌ವಿಎನ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲಿನ ವಿದ್ಯಾರ್ಥಿನಿ ಆರ್. ಯಾಮಿನಿ, ಬಾಗೇಪಲ್ಲಿ ಪಟ್ಟಣದ ಬಿ.ಜಿ.ಎಸ್ ಶಾಲೆಯ ವಿದ್ಯಾರ್ಥಿನಿ ಎನ್.ಯಶಸ್ವಿನಿ, ಗೌರಿಬಿದನೂರು ನಗರದ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಆರ್. ತೇಜಶ್ರೀ ತಲಾ 622 ಅಂಕಗಳನ್ನು ಗಳಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಗೆ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ. ಸಿಕೆಬಿ-1 ರಾಜ್ಯಕ್ಕೆ ಎರಡನೇ ಸ್ಥಾನ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ತಾಲೂಕಿನ ಮಂಚನಬಲೆ ಗ್ರಾಮದ ಬಿ.ಜಿ.ಎಸ್ ವಿದ್ಯಾನಿಕೇತನ ಶಾಲೆಯ ಜಿ.ಪ್ರಣತಿ ರಾಜ್