ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ: 5,388 ವಿದ್ಯಾರ್ಥಿಗಳು ಹಾಜರು

KannadaprabhaNewsNetwork | Published : Mar 21, 2025 12:30 AM

ಸಾರಾಂಶ

SSLC exam begins today: 5,388 students appear

-ಪರೀಕ್ಷಾ ನಕಲು ತಡೆಗೆ, ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಕಾಪಾಡಲು ಬಂದೋಬಸ್ತ್

------

ಕನ್ನಡಪ್ರಭ ವಾರ್ತೆ ಆಳಂದ: ತಾಲೂಕಿನ 16 ಕೇಂದ್ರಗಳಲ್ಲಿ ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಲಿದ್ದು, 5,388 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಪೈಕಿ 11 ಪರೀಕ್ಷಾ ಕೇಂದ್ರಗಳು ಗ್ರಾಮೀಣ ಪ್ರದೇಶ ಹಾಗೂ ಐದು ಆಳಂದ ಪಟ್ಟಣದಲ್ಲಿದ್ದು, ಕೆಲವು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಕೇಂದ್ರಗಳೆಂದು ಸಹ ಗುರುತಿಸಲಾಗಿದೆ.

ಪರೀಕ್ಷಾ ನಕಲು ತಡೆಗಟ್ಟಲು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಕಾಪಾಡಲು ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ. ವೆಬ್ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಲಾಗುತ್ತಿದ್ದು, ಪೊಲೀಸ್‌ ಸಿಬ್ಬಂದಿ ಮತ್ತು ಪರೀಕ್ಷಾ ಅಧಿಕಾರಿಗಳ ಕೈಯಲ್ಲಿ ಕಾರ್ಯಾಚರಣೆಯನ್ನು ನೀಡಲಾಗಿದೆ.

ಎಲ್ಲಾ ಕೇಂದ್ರಗಳಲ್ಲಿ ಸುಪರೀಕ್ಷಕರನ್ನು ನೇಮಿಸಿ, ಆಪ್ತ ವೃತ್ತದ ನಿಗಾ ವ್ಯವಸ್ಥೆ ಮಾಡಲಾಗಿದೆ. ಕಠಿಣ ಕ್ರಮಗಳೊಂದಿಗೆ ಪರೀಕ್ಷೆ ನೇರವಾಗುವಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿಕೊಂಡಿವೆ.

ಅಳಂದದಲ್ಲಿ ಬೋರ್ಡ್ ಪರೀಕ್ಷೆಯ ಯಶಸ್ವಿ ನಿರ್ವಹಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಶಿಸ್ತು, ಸುರಕ್ಷತೆ ಹಾಗೂ ನಿಷ್ಪಕ್ಷಪಾತ ಪರೀಕ್ಷಾ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ ಎಂದು ತಾಲೂಕು ತಹಸೀಲ್ದಾರ ಅಣ್ಣಾರಾವ್ ಪಾಟೀಲ ತಿಳಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಋಷಿಕೇಶ ದಂತಕಾಳ್ಯ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಪಾಲಕರು ಪ್ರವೇಶಿಸದಂತೆ, ಮಕ್ಕಳನ್ನು ಕೇಂದ್ರದ ಹೊರಗಡೆ ಬಿಟ್ಟು ಹೋಗುವಂತೆ ಮನವಿ ಮಾಡಿದ್ದಾರೆ. ಶಾಂತಿ ಸ್ಥಿತಿ ಕಾಪಾಡಲು ಸಹಕರಿಸುವಂತೆ ಪಾಲಕರಿಗೆ ಮನವಿ ಮಾಡಿದ್ದಾರೆ.

....ಕೋಟ್‌.....

ಅತಿ ಸೂಕ್ಷ್ಮ ಕೇಂದ್ರಗಳಾದ ಮಾದನಹಿಪ್ಪರಗಾ, ಕಮಲಾನಗರ, ನರೋಣಾ, ಖಜೂರಿ ತಡಕಲ್ ಶಾಲಾ ಕೇಂದ್ರಗಳನ್ನು ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದೆ. ಅಲ್ಲದೆ, 5ಸೂಕ್ಷ್ಮ ಕೇಂದ್ರಗಳಾಗಿ ಪಟ್ಟಣದಲ್ಲಿ ಬಸವೇಶ್ವರ ಶಾಲೆ, ನಿಂಬರಗಾ ಸರ್ಕಾರಿ ಶಾಲೆ, ಆಳಂದ ಆದರ್ಶ ವಿದ್ಯಾಲಯ, ಮಹಾತ್ಮಗಾಂಧಿ ಎಚ್‍ಎಸ್ ಶಾಲೆ ಹಾಗೂ ಯಳಸಂಗಿ ಸರ್ಕಾರಿ ಶಾಲೆ ಕೇಂದ್ರಗಳನ್ನು ಸೂಕ್ಷ್ಮವೆಂದು ಗುರುತಿಸಲಾಗಿದೆ. ಆರು ಮಾರ್ಗಗಳನ್ನಾಗಿ ಮಾಡಿಕೊಳ್ಳಲಾಗಿದೆ.

-ಮರೆಪ್ಪ ಬಡಿಗೇರ, ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕ, ಜೂನಿಯರ್ ಕಾಲೇಜು ಆಳಂದ.

----

ಫೋಟೋ...ಆಳಂದ 1 ಮತ್ತ ಆಳಂದ 2

ಆಳಂದ ಪಟ್ಟಣದ ಸರ್ಕಾರಿ ಬಾಲಕರ ಪಿಯು ಕಾಲೇಜಿನ 10ನೇ ಪರೀಕ್ಷಾ ಕೇಂದ್ರದ ಸಿದ್ಧತೆಯಲ್ಲಿ ಮುಖ್ಯ ಅಧೀಕ್ಷಕ ಮರೆಪ್ಪ ಬಡಿಗೇರ್ ಸಮ್ಮುಖದಲ್ಲಿ ಸಿಬ್ಬಂದಿ ಸಿಸಿ ಕ್ಯಾಮೆರಾ ಅಳವಡಿಸಿದರು.

----

ಫೋಟೋ:ಆಳಂದ ಪಟ್ಟಣದ ಜ್ಯೂನಿಯರ್ ಕಾಲೇಜು ಕೇಂದ್ರಕ್ಕೆ ಪರೀಕ್ಷಾರ್ಥಿಗಳಿಗೆ ಆಸನದ ವ್ಯವಸ್ಥೆ ಕೈಗೊಳ್ಳಲು ಡೆಸ್ಕ್‌ಗಳನ್ನು ತರಿಸಿಕೊಳ್ಳಲಾಯಿತು.

----

ಚಿತ್ರ ಶೀರ್ಷಿಕೆ 19ಎಎಲ್‍ಡಿ6

Share this article