ಕೊಳ್ಳೇಗಾಲ: ಎಸ್ಸೆಸ್ಸೆಲ್ಸಿ ಮರು ಪರೀಕ್ಷೆಯಲ್ಲಿ ಸರ್ಕಾರಿ ಆದರ್ಶ ಶಾಲೆಯ ಗಾನವಿ 621 ಅಂಕಗಳಿಸುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಾನವಿಗೆ 617 ಅಂಕ ಲಭಿಸಿತ್ತು, ಇದಕ್ಕೆ ತೃಪ್ತರಾಗದ ಗಾನವಿ ಪರೀಕ್ಷೆಯಲ್ಲಿ ನನಗೆ ಇನ್ನು ಹೆಚ್ಚಿನ ಅಂಕ ಬರಬೇಕಿತ್ತು ಎಂದು ಪುನಃ ಕಳೆದ ತಿಂಗಳು ಜರುಗಿದ ಮರು ಪರೀಕ್ಷೆಯಲ್ಲಿ ಕನ್ನಡ ಇಂಗ್ಲಿಷ್ ಮತ್ತು ವಿಜ್ಞಾನ ಮೂರು ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಶುಕ್ರವಾರ ಫಲಿತಾಂಶ ಪ್ರಕಟಗೊಂಡಿದ್ದು ಗಾನವಿಗೆ ನಾಲ್ಕು ಅಧಿಕ ಅಂಕ ಲಭಿಸಿದೆ ಕನ್ನಡದಲ್ಲಿ ಒಂದು, ವಿಜ್ಞಾನದಲ್ಲಿ ಮೂರು, ಅಂಕಗಳು ಲಭಿಸಿದ್ದು ಒಟ್ಟಾರೆ 620 ಅಂತ ಗಳಿಸಿದಂತಾಗಿದೆಹಿಂದಿನ ಪರೀಕ್ಷೆ ಪಲಿತಾಂಶದಲ್ಲಿ ಕನ್ನಡದಲ್ಲಿ 99 ವಿಜ್ಞಾನ ವಿಭಾಗದಲ್ಲಿ 97 ಇಂಗ್ಲೀಷ್‌ನಲ್ಲಿ 121 ಅಂತ ಲಭಿಸಿತ್ತು. ಮರು ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ವಿಜ್ಞಾನ ವಿಭಾಗದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಈ ಸಾಧಕ ವಿದ್ಯಾರ್ಥಿನಿ ಆದರ್ಶ ಶಾಲೆಯಲ್ಲಿ ಇತ್ತೀಚಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ನನ್ನ ಶ್ರಮಕ್ಕೆ ಕಡಿಮೆ ಅಂಕ ದೊರೆತಿದೆ. ಹಾಗಾಗಿ ನಾನು ಶಿಕ್ಷಕರಲ್ಲಿ ಕ್ಷಮೆ ಕೇಳುವೆ ಎಂದು ಬಹಿರಂಗವಾಗಿ ಬೇಸರದಿಂದಲೇ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಂಬಂಧ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ, ನನ್ನ ಶ್ರಮಕ್ಕೆ ಪ್ರತಿಫಲ ದೊರೆತಿದೆ ಎಂದರು.