ಕನಕಪುರ: ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಹತ್ತನೇ ತರಗತಿ ಪರೀಕ್ಷೆ ಪ್ರಮುಖ ಘಟ್ಟವಾಗಿದ್ದು ಸತತ ಅಭ್ಯಾಸ, ನಿರಂತರ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಮಾಜಿ ಅಧ್ಯಕ್ಷ ಕಾ.ಪ್ರಕಾಶ್ ತಿಳಿಸಿದರು.
ರಾಜ್ಯದ ಹೆಸರಾಂತ ಕನ್ನಡ ದಿನಪತ್ರಿಕೆ ಕನ್ನಡಪ್ರಭ ಪತ್ರಿಕಾ ಬಳಗ ಈ ನಿಟ್ಟಿನಲ್ಲಿ ಯುವ ಆವೃತ್ತಿಯನ್ನು ತಂದಿರುವುದು ಬಹಳ ಸಂತೋಷದ ವಿಷಯವಾಗಿದೆ. ಈ ಸಂಚಿಕೆಯಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅದರಲ್ಲೂ ಮುಖ್ಯವಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಹಾಗೂ ಅದಕ್ಕೆ ಉತ್ತರಗಳನ್ನು ನೀಡುವ ಜೊತೆಗೆ ಗಣಿತ, ವಿಜ್ಞಾನ, ಸಮಾಜ ಶಾಸ್ತ್ರದ ಜೊತೆಗೆ ಆಂಗ್ಲ ಮತ್ತು ಹಿಂದಿ ವಿಷಯಗಳ ಬಗ್ಗೆ ಅತ್ಯಂತ ಸರಳವಾಗಿ ಉತ್ತರಗಳನ್ನು ನೀಡಿರುವುದು
ಹೆಚ್ಚು ಅನಕೂಲಕರ. ವಿದ್ಯಾರ್ಥಿಗಳು ಪ್ರತಿನಿತ್ಯ ತಮ್ಮ ಶಾಲಾ ಪಠ್ಯದ ಜೊತೆಗೆ ಈ ಆವೃತ್ತಿಯನ್ನು ಅಭ್ಯಾಸ ಮಾಡಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಶಾಲೆಗೆ ಹಾಗೂ ತಾಲೂಕಿಗೆ ಉತ್ತಮ ಹೆಸರು ತರುವಂತೆ ಶುಭ ಹಾರೈಸಿದರು.ಬ್ಲಾಸಂ ಶಾಲೆಯ ಪ್ರಾಂಶುಪಾಲೆ ಗಂಗಾಭಿಕೆ ಮಾತನಾಡಿ, ಇಂದು ವಿದ್ಯೆ ಇಲ್ಲದಿದ್ದರೆ ಏನನ್ನು ಸಾಧನೆ ಮಾಡಲು ಸಾಧ್ಯವಿಲ್ಲ. ಇಂದು ಎಲ್ಲಾ ರಂಗಗಳಲ್ಲಿ ಗ್ರಾಮೀಣ ಭಾಗದ ಮಕ್ಕಳು ನಗರದ ಮಕ್ಕಳ ಜೊತೆ ಪೈಪೋಟಿ ನಡೆಸಬೇಕಾದ ವಾತಾವರಣವಿದೆ. ಈ ನಿಟ್ಟಿನಲ್ಲಿ ಉತ್ತಮ ಅಂಕಗಳನ್ನು ಪಡೆಯಲು ವಿದ್ಯಾರ್ಥಿಗಳು ಹೆಚ್ಚು ಅಭ್ಯಾಸದ ಕಡೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ರಾಜೇಶ್, ಹರಿಪ್ರಸಾದ್, ಜಯರಾಮು, ನಾಗೆಂದ್ರ ಪ್ರಸಾದ್, ದೈಹಿಕ ಶಿಕ್ಷಕ ಧನಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕೆ ಕೆ ಪಿ ಸುದ್ದಿ 01:
ಕನಕಪುರದ ಬ್ಲಾಸಂ ಶಾಲೆ ಆವರಣದಲ್ಲಿ ಕನ್ನಡಪ್ರಭ ದಿನಪತ್ರಿಕೆಯ ಯುವ ಆವೃತ್ತಿಯನ್ನು ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕು ಮಾಜಿ ಅಧ್ಯಕ್ಷ ಕಾ.ಪ್ರಕಾಶ್ ವಿದ್ಯಾರ್ಥಿಗಳಿಗೆ ವಿತರಿಸಿದರು.