ಕನ್ನಡಪ್ರಭ- ಏಷ್ಯಾನೆಟ್ ಸಹಯೋಗದಲ್ಲಿ ಪ್ರತಿವರ್ಷ ವಿತರಣೆ: ಶಾರದಾ ಪಾನಘಂಟಿ
ಕನ್ನಡಪ್ರಭ ವಾರ್ತೆ ಕೊಪ್ಪಳ
ಪತ್ರಿಕೆ ಹಂಚುತ್ತಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ ವಿದ್ಯಾರ್ಥಿಗೆ ಪಾನಘಂಟಿ ಫೌಂಡೇಶನ್ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಶಾರದಾ ಪಾನಘಂಟಿ ಘೋಷಿಸಿದರು.ಭಾಗ್ಯನಗರದ ವಿದ್ಯಾವಿಕಾಸ ಶಾಲೆಯಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಪಾನಘಂಟಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕೆ ವಿತರಿಸುವ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ವಿತರಿಸಿರುವುದು ಸಂತಸ ತಂದಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಶಿವಾನಿ ಗವಿಸಿದ್ದಯ್ಯ ಬೆಣಕಲಮಠ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಅರುಣಾ ಬೆಣಕಲಮಠ, ಗವಿಸಿದ್ದಯ್ಯ, ಇನ್ನರ್‌ವೀಲ್ ಕ್ಲಬ್ ಸದಸ್ಯೆ ಜಯಮಾಲಾ ಶೆಡ್ಮಿ, ವೀರಾಜ್, ವೇದಾಂತ, ಮಹಾಲಕ್ಷ್ಮಿ ಪಾನಘಂಟಿ, ಸಂಪದ ಪಾನಘಂಟಿ, ಗವಿರಾಜ ಕಂದಾರಿ, ಮಂಜುನಾಥ ಟಪಾಲ, ನಾಗರಾಜ ಕಲಾಲ, ಮೆಹಬೂಬ್ ಸಾ, ಪರಶುರಾಮ, ರಮೇಶ ಚಕ್ರಸಾಲಿ, ನಾಗರಾಜ ಉಂಕಿ, ವಸಂತಿ ಶ್ಯಾವಿ, ಮಹಿಬೂಬ ಮನಿಯಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಸವರಾಜ ಬೆಲ್ಲದ ನಿರೂಪಿಸಿದರು. ಮೋಹನ ಕೋರ ಸ್ವಾಗತಿಸಿದರು.
ಭಾಗ್ಯನಗರದ ವಿದ್ಯಾವಿಕಾಸ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾನಘಂಟಿ ಫೌಂಡೇಶನ್ ವತಿಯಿಂದ ಪತ್ರಿಕೆ ವಿತರಿಸುವ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಲಾಯಿತು.