- ಶ್ರೀರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ಫೋಟೋ, ವೀಡಿಯೋ ಪ್ರದರ್ಶಿಸಿದ ಯಶವಂತ ರಾವ್ ಜಾಧವ್ - - -
ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನೀಡಿದ ಬೆಳ್ಳಿ ಇಟ್ಟಿಗೆ ವಿಚಾರ ಹಾಗೂ ದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಅಕ್ರಮ, ಚಿನ್ನಾಭರಣ ಕಳವು ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ, ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಟ್ರಸ್ಟಿಗಳಿಗೆ ದುಗ್ಗಮ್ಮನ ಭಕ್ತ, ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಬಹಿರಂಗ ಸವಾಲು ಹಾಕಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನಾವು ಸ್ನೇಹಿತರು, ಕೆಲಭಕ್ತರು ಮಾಡಿಸಿದ್ದ ಬೆಳ್ಳಿ ಇಟ್ಟಿಗೆ ರಾಮ ಮಂದಿರ ತಲುಪಿದೆಯೋ ಅಥವಾ ಮಾರ್ಗ ಮಧ್ಯೆಯೇ ಮುಳುಗಡೆ ಆಯಿತೋ ಎಂಬುದಾಗಿ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ವ್ಯಂಗ್ಯವಾಡಿದ್ದು, ಬೆಳ್ಳಿ ಇಟ್ಟಿಗೆ ಮಂದಿರಕ್ಕೆ ಸಮರ್ಪಿಸಿದ ಬಗ್ಗೆ ಅಧಿಕೃತ ರಸೀದಿ, ಫೋಟೋ, ವೀಡಿಯೋ ಸಮೇತ ಚರ್ಚೆಗೆ ಸಿದ್ಧ ಇರುವುದಾಗಿ ಜು.2ರಂದೇ 20 ದಿನ ಗಡುವು ನೀಡಿದ್ದೆ. 25 ದಿನ ಕಳೆದರೂ ಪ್ರತಿಕ್ರಿಯೆ ಇಲ್ಲ ಎಂದರು.ಠಾಣೆಗೇಕೆ ದೂರು ನೀಡಿಲ್ಲ?:
ದೇವಸ್ಥಾನದಲ್ಲಾದ ಭ್ರಷ್ಟಾಚಾರ, ಚಿನ್ನಾಭರಣದ ಕಳುವಿನ ಬಗ್ಗೆ ಅಧ್ಯಕ್ಷರು, ಟ್ರಸ್ಟಿಗಳು ಮೌನವಾಗಿದ್ದು, ಆ ಎಲ್ಲರೂ ತಪ್ಪಿತಸ್ಥರಾಗಿದ್ದಾರೆ. ಟ್ರಸ್ಟ್‌ನ ಸದಸ್ಯರೆಲ್ಲರೂ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು. ಮತ್ತೆ ದುಗ್ಗಮ್ಮನ ಭಕ್ತರು, ಸಾರ್ವಜನಿಕರಿಂದ ಟ್ರಸ್ಟ್‌ಗೆ ಆಯ್ಕೆಯಾಗಿ ಬರಲಿ. ಇಲ್ಲವಾದರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಪಾದ ಮುಟ್ಟಿ, ತಮ್ಮಿಂದ ಯಾವುದೇ ಲೋಪ, ಅನ್ಯಾಯವಾಗಿಲ್ಲ ಎಂದು ಆಣೆ, ಪ್ರಮಾಣ ಮಾಡಲಿ ನೋಡೋಣ ಎಂದು ಪಂಥಾಹ್ವಾನ ನೀಡಿದರು.
ಟ್ರಸ್ಟಿಗಳೆಲ್ಲರೂ ಕಳ್ಳರಲ್ಲ. ನೂರಕ್ಕೆ ನೂರರಷ್ಟು ಕಳ್ಳತನಕ್ಕೆ ಅಧ್ಯಕ್ಷರೇ ಕಾರಣ. ಈ ಬಗ್ಗೆ ತನಿಖೆ ಆಗಬೇಕು. ಟ್ರಸ್ಟಿನಲ್ಲಿ ಕೆಲ ಪ್ರತಿಷ್ಟಿತ ಮನೆತನಗಳೂ ಇದ್ದು, ಅಂತಹವರಾರೂ ಸಭೆಗೆ ಬರುವುದಿಲ್ಲ. ಸಮಿತಿ, ಟ್ರಸ್ಟಿಗಳನ್ನು ಅಪ್ಪ-ಮಕ್ಕಳೇ ಅತಿಕ್ರಮಿಸಿಕೊಂಡಿದ್ದಾರೆ. ಈ ಬಗ್ಗೆ ನಾಲ್ಕೈದು ವರ್ಷದಿಂದ ಲೆಕ್ಕ ಕೇಳುತ್ತಿದ್ದರೂ ಈವರೆಗೆ ಟ್ರಸ್ಟ್ ಲೆಕ್ಕ ನೀಡಿಲ್ಲ. ಎಲ್ಲ ಅಕ್ರಮಗಳ ಸಮಗ್ರ ದಾಖಲೆ ತಮ್ಮ ಬಳಿ ಇದ್ದು, ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಲು ಹಾಗೂ ಬಹಿರಂಗ ಚರ್ಚೆಗೆ ತಾವು ಸಿದ್ಧ. 4 ದಿನದಲ್ಲೇ ಸಭೆ ಕರೆಯುವುದಾಗಿ ಹೇಳಿದ್ದು, ಟ್ರಸ್ಟ್‌ನ ಮುಂದಿನ ನಡೆ ನೋಡಿ, ಮುಂದಿನ ಹೋರಾಟ ರೂಪಿಸಲಿದ್ದೇವೆ ಎಂದು ತಿಳಿಸಿದರು.
ಅಯೋಧ್ಯೆಗೆ ತೆರಳಿ ಪರಿಶೀಲಿಸಿ:
ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ, ಬಿ.ರಮೇಶ ನಾಯ್ಕ, ಟಿಂಕರ್ ಮಂಜಣ್ಣ, ಬಾಲಚಂದ್ರ, ಶಿವನಗೌಡ ಟಿ.ಪಾಟೀಲ, ಸೋಗಿ ಗುರುಶಾಂತ, ಬಿ.ಪುಲಯ್ಯ, ಶಿವಾನಂದ, ಹರೀಶ ಹೊನ್ನೂರು, ಕುಮಾರ್ ಘಾಟ್ಗೆ ಇತರರು ಇದ್ದರು.
(ಬಾಕ್ಸ್) * ಪ್ರಮುಖ ಅಂಶಗಳು - ಬೆಳ್ಳಿ ಇಟ್ಟಿಗೆ- ದುಗ್ಗಮ್ಮ ಟ್ರಸ್ಟ್ ವಿಚಾರಕ್ಕೆ ಜಟಾಪಟಿ
- ಮಂದಿರವನ್ನು ಬೆಳ್ಳಿ ಇಟ್ಟಿಗೆ ತಲುಪಿದೆಯೋ ಇಲ್ಲವೋ ಅಂದಿದ್ದ ಎಸ್ಸೆಸ್ಸೆಂ
- ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ನೀಡಿದ ಸಾಕ್ಷ್ಯ ಪ್ರದರ್ಶಿಸಿದ ಯಶವಂತ ರಾವ್- ದಾವಣಗೆರೇಲಿ ಪೇಜಾವರರು ಬೆಳ್ಳಿ ಇಟ್ಟಿಗೆಗೆ ಪೂಜೆ ಸಲ್ಲಿಸಿದ ಸಾಕ್ಷ್ಯಗಳು
- 11 ಕೆಜಿ 655 ಗ್ರಾಂ ಬೆಳ್ಳಿ ಇಟ್ಟಿಗೆ ಕೊಟ್ಟ ದೇಣಿಗೆ ರಸೀದಿ ಪ್ರತಿ ಬಿಡುಗಡೆ- ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಕಚೇರಿ ನೀಡಿದ ದೇಣಿಗೆ ರಸೀದಿ
- ಲೆಡ್ಜರ್ ಬುಕ್‌ನಲ್ಲಿ ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ಬಗ್ಗೆ ಉಲ್ಲೇಖವಿರುಪ ಪ್ರತಿ- ಕಚೇರಿಯಲ್ಲಿ ಬೆಳ್ಳಿ ಇಟ್ಟಿಗೆ ತೂಕ ಹಾಕಿದ ಫೋಟೋ ಜಾಧವ್ ಬಿಡುಗಡೆ
- ಜ.12ರಂದು ನೀಡಿದ್ದ ದೇಣಿಗೆ ರಸೀದಿ, ಫೋಟೋ, ವೀಡಿಯೋ ರಿಲೀಸ್- ಒಟ್ಟು 26 ಜನ ಸೇರಿ ₹9.50 ಲಕ್ಷ ಸಂಗ್ರಹಿಸಿ ಮಾಡಿಸಿದ್ದ ಬೆಳ್ಳಿಯ ಇಟ್ಟಿಗೆ
- - --27ಕೆಡಿವಿಜಿ1: ಪೇಜಾವರ ಶ್ರೀಗಳು ಬೆಳ್ಳಿ ಇಟ್ಟಿಗೆಗೆ ಪೂಜಿಸುವ ಹಾಗೂ ಅಯೋಧ್ಯೆ ರಾಮ ಮಂದಿರಕ್ಕೆ ಬಸವಪ್ರಭು ಶ್ರೀ ಸಮಕ್ಷಮ ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ಫೋಟೋ, ವೀಡಿಯೋವನ್ನು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
-27ಕೆಡಿವಿಜಿ2: ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.