ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈಜನಾಥ ಸಾರಂಗಮಠ
ಜೀವಜಲ ಸಂರಕ್ಷಿಸಲು ಪಣ ತೊಡೋಣ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈಜನಾಥ ಸಾರಂಗಮಠ ಹೇಳಿದರು.
ತಾಲೂಕಿನ ನಿಟ್ಟಾಲಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ನಡೆದ ರೋಜಗಾರ ದಿನಾಚರಣೆ, ವಲಸೆ ಯಾಕ್ರಿ, ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಉದ್ಯೋಗ ಖಾತ್ರಿ ದುಡಿಮೆಯ ಖಾತ್ರಿ ಅಭಿಯಾನ, ಮತದಾನ ಜಾಗೃತಿ ಕಾರ್ಯಕ್ರಮ (ಸ್ವೀಪ್) ಉದ್ದೇಶಿಸಿ ಮಾತನಾಡಿದ ಅವರು, ಮತದಾನ ನಮ್ಮೇಲ್ಲರ ಹಕ್ಕು, ಮತ ಚಲಾಯಿಸಿ ಪ್ರಜಾಪ್ರಭುತ್ವ ಮೆರೆಸೋಣ. ನಾವೆಲ್ಲರೂ ನನ್ನ ಭೂಮಿ, ನನ್ನ ಗ್ರಾಮ, ನನ್ನ ದೇಶ ಎಂಬ ಅಭಿಮಾನದಿಂದ ಕೆಲಸ ಮಾಡೋಣ, ಅಂತರ್ಜಲ ಕಾಪಾಡೋಣ ಎಂದರು.ಆಸೆ, ಆಮಿಷಗಳು ಮತ್ತು ಜಾತಿ, ಮತ ಮರೆತು ಮತದಾರರ ಪಟ್ಟಿಯಲ್ಲಿರುವ ಎಲ್ಲರೂ ಮತ ಹಾಕಿ ಸುಭದ್ರ ರಾಷ್ಟ್ರ ಕಟ್ಟಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಐಇಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಗ್ರಾಮ ಕಾಯಕ ಮಿತ್ರರಾದ ಗೀತಾ ಈಳಿಗೇರಿ, ಕಾಯಕ ಬಂಧುಗಳಾದ ಕೋಟೇಶ್, ಮಾರುತಿ, ಮಲ್ಲಿಕಾರ್ಜುನ, ದೇವೇಂದ್ರಪ್ಪ ಹಾಗೂ ಕೂಲಿಕಾರರು ಇದ್ದರು.