ಕನ್ನಡಪ್ರಭ ವಾರ್ತೆ ಮೈಸೂರು
ಬೆಂಗಳೂರಿನಲ್ಲಿ ಆಹಾರ ಅಧಿಕಾರಿಗಳು ಇತ್ತೀಚೆಗೆ ಹೋಟೆಲುಗಳ ಮೇಲೆ ದಾಳಿ ನಡೆಸಿ ಕೊಳೆತ ಆಹಾರ ಪಧಾರ್ಥಗಳು, ಎಕ್ಸ್ ಪರಿ ಆದ ಹಾಲು ಹಾಗೂ ಇತರೆ ವಸ್ತುಗಳು ದಾಳಿಯಲ್ಲಿ ಸಿಕ್ಕಿದೆ ಎಂಬ ಮಾಧ್ಯಮಗಳಲ್ಲಿ ಬಿಂಬಿತವಾಗುತ್ತಿರುವುದು ನಿಜಕ್ಕೂ ಸತ್ಯವೇ? ಮನೆಗಳಲ್ಲೇ ಹಾಲಿನ ಪಾಕೇಟ್ ಪ್ರಿಜ್ನಲ್ಲಿಟ್ಟು 2-3ದಿನ ಉಪಯೋಗಿಸುದಿಲ್ಲವೇ? ಪ್ರಿಜ್ ಇರುವುದೇ ಪದಾರ್ಥಗಳು ಕೆಡದಂತೆ ಇಟ್ಟುಕೊಳ್ಳುವುದಕ್ಕಲ್ಲವೇ?. ಕೋಲ್ಡ್ ಸ್ಟೋರೇಜ್ ಅಂತ ಮಾಡಿ ವರ್ಷಗಟ್ಟಲೆ ಪದಾರ್ಥಗಳನ್ನು ಸಂರಕ್ಷಿಸಿ ಇಟ್ಟು ಅನ್ ಸೀಸನ್‌ನಲ್ಲಿ ಮಾರಾಟ ಮಾಡುತ್ತಿಲ್ಲವೇ? ಯಾವುದೇ ತರಕಾರಿಗಳನ್ನು ಕೊಂಡುತಂದಾಗ ಅದರಲ್ಲಿ ಉಪಯೋಗಿಸಲು ಬಾರದಂತಹ ಕೊಳೆತ, ಅರೆ ಕೊಳೆತ ಒಂದೆರಡು ಪದಾರ್ಥಗಳು ಇದ್ದೇ ಇರುತ್ತದೆ, ಅದರಲ್ಲೂ ಈ ಮಳೆಗಾಲದ ಸೀಸನ್ನಲ್ಲಿ ಸ್ವಲ್ಪ ಜಾಸ್ತಿಯೇ ಇರುತ್ತದೆ. ಅಂತಿಮ ಪದಾರ್ಥ ತಯಾರಿಸುವಾಗ, ಕ್ಲೀನ್ ಮಾಡುವಾಗ ಇದನ್ನು ಬೇರ್ಪಡಿಸಿ ಸಾದಾರಣವಾಗಿ ಉಪಯೋಗಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಅದು ಹೋಟೆಲ್ ಆಗಿರಲಿ ಅಧವಾ ಮನೆಯಲ್ಲಾಗಿರಲಿ. ಮಾರ್ಕೇಟ್ ನಿಂದ ತಂದ ಪದಾರ್ಥಗಳನ್ನು ಕೂಡಲೇ ಕ್ಲೀನ್ ಮಾಡಿ ಶೇಖರಿಸಿಟ್ಟರೂ ಹಲವು ವೇಳೆ ಮತ್ತೆ ಕೆಲವು ಪದಾರ್ಧಗಳು ಹಾಳಾಗುತ್ತದೆ.ಆದರೆ ಅಂತಿಮ ಪದಾರ್ಥದ ತಯಾರಿಕೆಯಲ್ಲಿ ಸಾಮಾನ್ಯವಾಗಿ ಯಾರೂಕೂಡ ಉಪಯೋಗಿಸುವುದಿಲ್ಲ,ಕಣ್ತಪ್ಪಿ ಆಗಬೇಕಷ್ಟೆ.ಕಣ್ತಪ್ಪಿ ಆದರೂ ಇಡೀ ಅಂತಿಮ ಪದಾರ್ಧ ಹಾಳಾಗುತ್ತದೆ .ಆದರಿಂದ ಉಧ್ಯಮಿಗೆ ಇನ್ನೂ ಹೆಚ್ಚಿನ ನಷ್ಟವಾಗುತ್ತದೆ.ಸಂಪೂರ್ಣ ಪದಾರ್ಥ ಎಸೆಯಬೇಕಾಗುತ್ತದೆ.ಎಫ್‌ಎಸ್‌ಎಸ್‌ಎಐ ಆಕ್ಟ್ ಯಾವ ಆಹಾರೋಧ್ಯಮಿಗೂ ನೂರಕ್ಕೆ ನೂರರಷ್ಟು ಪಾಲನೆ ಮಾಡಲು ಕಷ್ಟ ಸಾಧ್ಯವೇ ಸರಿ ಇದರ ಬಗ್ಗೆ ಆಹಾರೋದ್ಯಮಿಗಳು ಪರಿಹಾರ ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ನಮ್ಮ ರೆಸ್ಟೋರೆಂಟ್, ದರ್ಶಿನಿ, ಬೇಕರಿ, ಸ್ವೀಟ್ಸ್, ಕಾಂಡಿಮೆಂಟ್ಸ್ ಉದ್ಯಮಗಳು ಸಂಪೂರ್ಣ ಸ್ಥಗಿತಗೊಳ್ಳುವ ಕಾಲ ದೂರ ಇಲ್ಲ ಎಂದು ಅವರು ಹೇಳಿದ್ದಾರೆ..
ಎಫ್‌ಎಸ್‌ಎಸ್‌ಎಐ ಇಲಾಖೆಯಾಗಲೀ ಅಥವ ಇನ್ಯಾವುದೇ ಇಲಾಖೆಯಾಗಲೀ ಉದ್ಯಮಗಳನ್ನು ಪರಿಶೀಲನೆ ಮಾಡುವಾಗ ಪತ್ರಿಕಾ ಮಾಧ್ಯಮ ಮತ್ತು ದೃಷ್ಯಮಾದ್ಯಮ ಪ್ರತಿನಿಧಿಗಳಿಗೆ ಜತೆಯಲ್ಲೇ ಕರೆದುಕೊಂಡು ಹೋಗುವುದು ಎಷ್ಟು ಸಮಂಜಸವೆಂದು ಅದಿಕಾರಿಗಳೇ ಸ್ಪಸ್ಟಪಡಿಸಬೇಕು.