- ಶೀಘ್ರವೇ ಪತ್ರಿಕೆಗಳ ವಿತರಣೆಗೆ ಶೆಲ್ಟರ್, ವಸತಿ ಸೌಲಭ್ಯ: ಸಚಿವ ಭರವಸೆ - - -
ಮೈಸೂರಿನಲ್ಲಿ ಆ.27ರಂದು ನಡೆಯುವ ಪತ್ರಿಕಾ ವಿತರಕರ 5ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಡುಗಡೆ ಮಾಡುವ ಮೂಲಕ ಪತ್ರಿಕಾ ವಿತರಕರಿಗೆ, ಸಮ್ಮೇಳನದ ಯಶಸ್ಸಿಗೆ ಶುಭ ಕೋರಿದರು.
ಪತ್ರಿಕಾ ರಂಗಕ್ಕೆ ಪತ್ರಿಕಾ ವಿತರಕರ ಕೊಡುಗೆ ಅವಿಸ್ಮರಣೀಯವಾದುದು. ಮಳೆ, ಚಳಿಯನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸುವ ಪತ್ರಿಕಾ ವಿತರಕರ ಪರಿಶ್ರಮ ದೊಡ್ಡದು. ಸಮಾಜದ ಓರೆಕೋರೆಗಳನ್ನು ತಿದ್ದುವ ಪತ್ರಿಕೆಗಳ ಹೊತ್ತು ತಿರುಗುತ್ತಾ, ಓದುಗರಿಗೆ ತಲುಪಿಸುವ ನಿಸ್ವಾರ್ಥ ಮತ್ತು ಬೆಲೆ ಕಟ್ಟಲಾಗದ ಸೇವೆ ನಿಮ್ಮದು ಎಂದರು.ಪತ್ರಿಕೋದ್ಯಮ ನಮ್ಮ ಸಮಾಜಕ್ಕೆ ಒಂದು ಆಧಾರ ಸ್ತಂಭವಾದರೆ, ಪತ್ರಿಕಾ ವಿತರಕರು ಅದರ ಕೊಂಡಿಗಳು. ನಿಮ್ಮ ಕಾಯಕವನ್ನು ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಮಾಡುವ ಪತ್ರಿಕಾ ವಿತರಣೆಯ ಶ್ರಮಜೀವಿಗಳು ಎಂದು ಬಣ್ಣಿಸಿದರು.
ದಿನವೂ ಪೈಸೆ ಪೈಸೆಗಳಿಗೆ ಕೆಲಸ ಮಾಡುವ ಪತ್ರಿಕಾ ವಿತರಕರ ಸಂಘಟಿತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಈಗಷ್ಟೇ ಮೈಸೂರಿಗೆ ಹೋಗಿ ಬರುವುದಕ್ಕೆ ಆರ್ಥಿಕ ಹೊರೆ ಆಗುತ್ತಿರುವ ವಿಚಾರ ನಗರವಾಣಿ ಸಹ ಸಂಪಾದಕ ಬಿ.ಎನ್. ಮಲ್ಲೇಶ, ಕನ್ನಡಪ್ರಭದ ನಾಗರಾಜ ಬಡದಾಳ್ ಮೂಲಕ ಗೊತ್ತಾಗಿದೆ. ಮೈಸೂರಿಗೆ ನೀವು ಹೋಗಿ, ಬರಲು ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿದ ಸಚಿವರು, ಸ್ಥಳದಲ್ಲೇ ಬಸ್ ಮಾಲೀಕರೊಬ್ಬರಿಗೆ ಮಾತನಾಡಿ, ಒಂದು ಬಸ್ಸಿನ ವ್ಯವಸ್ಥೆ ಮಾಡಿಕೊಟ್ಟರು.
- - -
ಮೈಸೂರಿನಲ್ಲಿ ಆ.27ರಂದು ನಡೆಯುವ ಪತ್ರಿಕಾ ವಿತರಕರ 5ನೇ ರಾಜ್ಯ ಸಮ್ಮೇಳನದ ಲಾಂಛನವನ್ನು ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಿಡುಗಡೆ ಮಾಡಿದರು.