ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಸಮ್ಮೇಳನ: ಶಾಸಕತ್ರಯರಿಗೆ ಮಾಹಿತಿ

KannadaprabhaNewsNetwork |  
Published : Jun 29, 2025, 01:33 AM IST
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಸಮ್ಮೇಳನವನ್ನು ಯಾದಗಿರಿಯಲ್ಲಿ ವರ್ಷದ ಕೊನೆಗೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ, ಪರಿಷತ್ತಿನ ನಿಯೋಗವು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರ ಅವರ ಭೇಟಿಯಾಗಿ, ಸಮ್ಮೇಳನದ ಬಗ್ಗೆ ವಿವರಿಸಿ ಸಹಯೋಗ, ಮಾರ್ಗದರ್ಶನ ನೀಡಲು ಮನವಿ ಮಾಡಿದರು. | Kannada Prabha

ಸಾರಾಂಶ

State Conference of the Council of Scientific Research: Information for the MLAs

-ಜಿಲ್ಲೆಯಲ್ಲಿ ಡಿಸೆಂಬರ್ 29 ಮತ್ತು 30 ರಂದು ಎರಡು ದಿನಗಳ ಕಾಲ ನಡೆಸುತ್ತಿರುವುದಕ್ಕೆ ಶಾಸಕತ್ರಯರು ಹರ್ಷ

------

ಕನ್ನಡಪ್ರಭ ವಾರ್ತೆ ಯಾದಗಿರಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಸಮ್ಮೇಳನವನ್ನು ಯಾದಗಿರಿಯಲ್ಲಿ ವರ್ಷದ ಕೊನೆಗೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ, ಪರಿಷತ್ತಿನ ನಿಯೋಗ ಜಿಲ್ಲೆಯ ಮೂವರು ಶಾಸಕರುಗಳನ್ನು ಭೇಟಿ ಮಾಡಿ ವಿವರಿಸಿ, ಸನ್ಮಾನಿಸಲಾಯಿತು.

ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಪರಿಷತ್ತಿನ ನಿಯೋಗ, ಸಮ್ಮೇಳನದ ಬಗ್ಗೆ ವಿವರಿಸಿ ಸಹಯೋಗ, ಮಾರ್ಗದರ್ಶನ ನೀಡಲು ಮನವಿ ಮಾಡಿದರು.

ಜಿಲ್ಲೆಯಲ್ಲಿ ಸಮ್ಮೇಳನ ಡಿಸೆಂಬರ್ 29 ಮತ್ತು 30 ರಂದು ಎರಡು ದಿನಗಳ ಕಾಲ ನಡೆಸುತ್ತಿರುವುದಕ್ಕೆ ಶಾಸಕತ್ರಯರು ಹರ್ಷ ವ್ಯಕ್ತಪಡಿಸಿ, ಸಮ್ಮೇಳನಕ್ಕೆ ಎಲ್ಲರೂ ಕೈಜೋಡಿಸುವುದು ಅಗತ್ಯ ತಮ್ಮ ಸಹಾಕಾರ ಇರಲಿದೆ ಎಂದು ನಿಯೋಗಕ್ಕೆ ಭರವಸೆ ನೀಡಿದರು. ವೈಜ್ಞಾನಿಕ ಸಂಶೋಧನಾ ಪರಿಷತ್ ಗೌರವಾಧ್ಯಕ್ಷರಾದ ಗುರುಮಠಕಲ್ ಖಾಸಾಮಠದ ಶ್ರೀ ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಜಿಲ್ಲಾಧ್ಯಕ್ಷ ಗುಂಡಪ್ಪ ಕಲ್ಬುರ್ಗಿ, ಎಸ್.ಎಸ್. ನಾಯಕ, ಇಂದುಧರ ಸಿನ್ನೂರ, ಡಾ. ಭೀಮರಾಯ ಲಿಂಗೇರಿ, ಜಗದೀಶ ನೂಲಿನವರ, ವೆಂಕಪ್ಪ ದು. ಅಲೆಮನೆ, ಮಲ್ಲಿಕಾರ್ಜುನ ಹಿರೇಮಠ ನಿಯೋಗದಲ್ಲಿ ತೆರಳಿದ್ದರು.

-----

28ವೈಡಿಆರ್‌7 : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಸಮ್ಮೇಳನವನ್ನು ಯಾದಗಿರಿಯಲ್ಲಿ ವರ್ಷದ ಕೊನೆಗೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ, ಪರಿಷತ್ತಿನ ನಿಯೋಗವು ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರ ಅವರ ಭೇಟಿಯಾಗಿ, ಸಮ್ಮೇಳನದ ಬಗ್ಗೆ ವಿವರಿಸಿ ಸಹಯೋಗ, ಮಾರ್ಗದರ್ಶನ ನೀಡಲು ಮನವಿ ಮಾಡಿದರು.

-

28ವೈಡಿಆರ್‌8 : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಸಮ್ಮೇಳನವನ್ನು ಯಾದಗಿರಿಯಲ್ಲಿ ವರ್ಷದ ಕೊನೆಗೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ, ಪರಿಷತ್ತಿನ ನಿಯೋಗವು ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರ ಭೇಟಿಯಾಗಿ, ಸಮ್ಮೇಳನದ ಬಗ್ಗೆ ವಿವರಿಸಿ ಸಹಯೋಗ, ಮಾರ್ಗದರ್ಶನ ನೀಡಲು ಮನವಿ ಮಾಡಿದರು.

-

28ವೈಡಿಆರ್‌9 : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಸಮ್ಮೇಳನವನ್ನು ಯಾದಗಿರಿಯಲ್ಲಿ ವರ್ಷದ ಕೊನೆಗೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ, ಪರಿಷತ್ತಿನ ನಿಯೋಗವು ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಭೇಟಿಯಾಗಿ, ಸಮ್ಮೇಳನದ ಬಗ್ಗೆ ವಿವರಿಸಿ ಸಹಯೋಗ, ಮಾರ್ಗದರ್ಶನ ನೀಡಲು ಮನವಿ ಮಾಡಿದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ