ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಕೃಷ್ಣನಗರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯಕ್ಕೆ ಭೇಟಿ ನೀಡಿದ ವೇಳೆ ಡಾ.ಕೃಷ್ಣ ಮಾತನಾಡಿ, ವಸತಿ ನಿಲಯದ ವಾರ್ಡನ್ ಬೇಜವಾಬ್ದಾರಿತನದಿಂದ ಮಕ್ಕಳು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಜರಾತಿಗೆ ಮಯೋಮೆಟ್ರಿಕ್ ಅಳವಡಿಸಿಲ್ಲ. ವಿದ್ಯಾರ್ಥಿಗಳು ಹೊರ ಹೋಗಿ ಬರುವುದಕ್ಕೆ ಯಾವುದೇ ರಿಜಿಸ್ಟರ್ ನಿರ್ವಹಿಸಿಲ್ಲ ಎಂದರು.
ಮಕ್ಕಳು ಇಷ್ಟಬಂದತೆ ಹೋಗಿ ಬರುತ್ತಿದ್ದಾರೆ. ನಿಲಯದಲ್ಲಿ ಶುಚಿತ್ವ ಕಾಪಾಡದೇ ಗಬ್ಬು ನಾರುತ್ತಿದೆ. ನೂರು ಮಕ್ಕಳು ಇರುವ ನಿಲಯದಲ್ಲಿ ಕೇವಲ 50 ಮಕ್ಕಳಿಗಾಗುವಷ್ಟು ವ್ಯವಸ್ಥೆ ಇದೆ. ತರಕಾರಿ ಮತ್ತು ಇತರೆ ಆಹಾರ ಪದಾರ್ಥಗಳಲ್ಲಿ ವ್ಯತ್ಯಾಸ ಕಾಣುತ್ತಿದೆ. ವಾರ್ಡನ್ ಬೇಜವಾಬ್ದಾರಿತನದ ವಿರುದ್ಧ ಕ್ರಮಕ್ಕೆ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಪಟ್ಟಣದ ಕಸಬಾಸ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರ ಆಹಾರ ದಾಸ್ತಾನುನಿನಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ವ್ಯತ್ಯಾಸವಿಲ್ಲದ ಕಾರಣ ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಮುಂದೆ ಇದೇ ರೀತಿ ನಡೆದುಕೊಮಡರೆ ಕ್ರಮ ಕೈಗೊಳ್ಳಲಾಗುವುದು. ತಾಲೂಕಿನ ದೊಡ್ಡಬ್ಯಾಡರಹಳ್ಳಿಯ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ರಮ ಕಂಡು ಬಂದಿದ್ದು, ಅಂಗಡಿ ಮುಚ್ಚಿಸಲು ನಿರ್ದೇಶನ ಆಹಾರ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಪಟ್ಟಣದ ಪೊಲೀಸ್ ಠಾಣೆ ರಸ್ತೆಯ ಲಕ್ಷ್ಮೀ ಜ್ಯೂವೆಲರಿ, ಮಹಾಲಕ್ಷೀ ಹಾಗೂ ಮಹೇಶ್ ಜ್ಯೂವೆಲರಿಗಳಲ್ಲಿ ಚಿನ್ನಾಭರಣಗಳ ತೂಕದಲ್ಲಿ ವ್ಯತ್ಯಾಸ ಮಾಡುತ್ತಿರುವುದು ಕಂಡು ಬಂದಿದೆ. ಜ್ಯೂವೆಲರಿ ಮಾಲೀಕರು ಕಳೆದ ಐದು ವರ್ಷದಿಂದ ತೂಕದ ಯಂತ್ರಕ್ಕೆ ಮಾಪಕ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದರು.
ಈ ವೇಳೆ ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಮಾರುತಿ ದೊಡ್ಡಲಿಂಗಣ್ಣನವರ್, ಸುಮಂತ್ ರಾವ್, ರೋಹಿಣಿ, ತಹಸೀಲ್ದಾರ್ ಎಸ್.ಸಂತೋಷ್ ಇತರರು ಇದ್ದರು.