ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ಬದ್ಧ: ಕೆ.ಎಸ್.ಆನಂದ್

KannadaprabhaNewsNetwork |  
Published : Jun 03, 2025, 12:15 AM ISTUpdated : Jun 03, 2025, 12:16 AM IST
2ಕೆಕೆಡಿಯುು1 | Kannada Prabha

ಸಾರಾಂಶ

ಕಡೂರುಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದಲ್ಲಿ ಬೀರೂರು ಪುರಸಭೆ ಪೌರಸೇವಾ ನೌಕರರನ್ನು ಅಭಿನಂದನೆ

ಕನ್ನಡಪ್ರಭ ವಾರ್ತೆ, ಕಡೂರು

ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದಲ್ಲಿ ಬೀರೂರು ಪುರಸಭೆ ಪೌರಸೇವಾ ನೌಕರರನ್ನು ಅಭಿನಂದಿಸಿ ಮಾತನಾಡಿ, ಕಳೆದ ಒಂದು ವಾರಗಳಿಂದ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕೆಂದು ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯದಾದ್ಯಂತ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಭರವಸೆಯನ್ನು ನೀಡಿದ್ದರ ಹಿನ್ನೆಲೆಯಲ್ಲಿ ತಮ್ಮ ಮುಷ್ಕರವನ್ನು ಕೈಬಿಟ್ಟು ಕೆಲಸಗಳಿಗೆ ಹಾಜರಾಗಿದ್ದಾರೆ. ದಿನಗೂಲಿ ನೌಕರರಿಗೆ ಖಾಯಂಗೊಳಿಸುವ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ವ್ಯಕ್ತ ಪಡಿಸಿ ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದರು.ರಾಜ್ಯ ಸರಕಾರ ಬಡವರ ಪರವಾಗಿ ಅವರು ಬಡತನ ನಿವಾರಣೆಗe ದು ಗ್ಯಾರಂಟಿಗಳ ನೀಡುವ ಜೊತೆಗೆ ವೇತನವನ್ನು ನೇರ ಪಾವತಿಗೆ ಘೋಷಣೆ ಮಾಡಿದೆ. ಸರ್ಕಾರಿ ನೌಕರರೆಂದು ಗುರುತಿಸಲು ಸರ್ಕಾರ ಒಪ್ಪಿಗೆ ಸೂಚಿಸಿದ್ದು ಇದರಿಂದ ಹಗಲು ಇರುಳು ಶ್ರಮಿಸುತ್ತಿರುವ ದಿನಗೂಲಿ ನೌಕರರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಹಿಂದೆ ಪುರಸಭೆ ಸೇವಾ ನೌಕರರಿಗೆ, ಪೌರಕಾರ್ಮಿಕರಿಗೆ ವೇತನವನ್ನು ಪುರಸಭೆಯಿಂದಲೇ ಭರಿಸುವ ಪ್ರಕ್ರಿಯೆ ನಡೆಸಲಾಗಿತ್ತು. 8 ತಿಂಗಳು ಕಳೆದರೂ ವೇತನ ನೀಡಲು ಪುರಸಭೆಗಳಿಗ ಶಕ್ತಿ ಇರಲಿಲ್ಲ ಆದರೂ ಸಹ 2013ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಪುರಸಭೆ ಸೇವಾ ನೌಕರರಿಗೆ ವೇತನವನ್ನು ಸರ್ಕಾರದಿಂದಲೇ ಭರಿಸಲು ತೀರ್ಮಾನಿಸಿದ್ದರು. ರಾಜ್ಯದ ದೊಡ್ಡ ದೊಡ್ಡ ನಗರಗಳು, ಜಿಲ್ಲಾ ಕೇಂದ್ರಗಳು, ಪಟ್ಟಣಗಳು ಸ್ವಚ್ಛತೆಯಿಂದ ಇರಲು ಪೌರ ಕಾರ್ಮಿಕರ ಶ್ರಮ ಹೆಚ್ಚಿನದಾಗಿದೆ ಎಂದರು. ಈ ಸಂದರ್ಭದಲ್ಲಿ ಬೀರೂರು ಪುರಸಭೆ ಮುಖ್ಯಾಧಿಕಾರಿ ಜಿ. ಪ್ರಕಾಶ್, ಆರೋಗ್ಯ ಅಧಿಕಾರಿ ಲಕ್ಷ್ಮಣ್, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷ ಮಲ್ಲೇಶ್, ಕಾರ್ಯ ದರ್ಶಿ ದಿನೇಶ್ ಗಿರಿರಾಜು ಹಾಗೂ ಪೌರ ಸೇವಾ ನೌಕರರು ಉಪಸ್ಥಿತರಿದ್ದರು.2ಕೆಕೆಡಿಯು1ಕಡೂರು ಪಟ್ಟಣದಲ್ಲಿ ಬೀರೂರು ಪುರಸಭೆ ಪೌರಸೇವಾನೌಕರರು ಮುಷ್ಕರ ಕೈಬಿಟ್ಟು ತಮ್ಮ ಕರ್ತವ್ಯಕ್ಕೆ ಹಾಜರಾದ ಹಿನ್ನಲೆಯಲ್ಲಿ ಶಾಸಕ ಕೆ.ಎಸ್.ಆನಂದ್ ಅಭಿನಂದಿಸಿದರು. ಜಿ.ಪ್ರಕಾಶ್, ಲಕ್ಷ್ಮಣ್, ಜಯಮ್ಮ ಮತ್ತಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...