ಕನ್ನಡಪ್ರಭ ವಾರ್ತೆ ಅರಸೀಕೆರೆ ಮಹಿಳೆ ದುರ್ಬಲಳು ಎನ್ನುತ್ತಿದ್ದ ಕಾಲಘಟ್ಟದಲ್ಲಿ ಮಹಿಳೆ ದುರ್ಬಲ ಅಲ್ಲ ಪ್ರಬಲಳು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಅಹಲ್ಯಾಬಾಯಿ ಹೋಳ್ಕರ್ ಸ್ತ್ರೀ ಶಕ್ತಿಯ ಧ್ಯೋತಕ ಎಂದು ಅಹಲ್ಯಾಬಾಯಿ ಹೋಳ್ಕರ್ ಸಂಘದ ಅಧ್ಯಕ್ಷೆ ಶಿಲ್ಪಾ ಚಂದ್ರು ಬಾಣಾವರ ಹೇಳಿದರು.
ಸಂಘದ ಉಪಾಧ್ಯಕ್ಷೆ ಕಾವ್ಯ ಮಾತನಾಡಿ, ಅಹಲ್ಯಾಬಾಯಿ ಹೋಳ್ಕರ್ ಅವರ ಹೆಸರಿನಲ್ಲಿ ನಾವು ಸ್ಥಾಪಿಸಿಕೊಂಡಿರುವ ಸಹಕಾರ ಸಂಘದಲ್ಲಿ ಕೇವಲ ಹಣದ ವ್ಯವಹಾರ ಮಾತ್ರ ಮಾಡುತ್ತಿಲ್ಲ, ಅಹಲ್ಯಾಬಾಯಿ ಹೋಳ್ಕರ್ ಅವರ ಸಂದೇಶವನ್ನು ಸಹಕಾರ ಸಂಘವು ಪಾಲಿಸುತ್ತಾ ಜೊತೆಗೆ ಸಮಾಜದ ಮಹಿಳೆಯರನ್ನು ಸಂಘಟಿಸುವ ಕೆಲಸ ಮಾಡುತ್ತಾ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಗೌರವ ಸಮರ್ಪಿಸುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಸಹಕಾರ ಸಂಘದ ಗೌರವ ಅಧ್ಯಕ್ಷೆ ಯಶೋದಮ್ಮ,ನಿರ್ದೇಶಕರಾದ ಯಮುನಾ, ಮೀನಾಕ್ಷಮ್ಮ,ವನಜಾಕ್ಷಿ, ಲಲಿತಮ್ಮ, ನೇತ್ರಾವತಿ, ಚೇತನಾ ,ಗೀತಾಮಣಿ, ವಿಶಾಲಾಕ್ಷಿ, ಕಾರ್ಯದರ್ಶಿ ಭಾಗ್ಯಲಕ್ಷ್ಮೀ, ಕುರುಬ ಸಮಾಜದ ಮುಖಂಡರಾದ ಚಂದ್ರು ಬಾಣಾವರ, ವಿಜಯ್ ಕುಮಾರ್, ತಿಮ್ಮೇಗೌಡ ಹಾಗೂ ಹೋಳ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.