ಉಡುಪಿ: ಮೆಸ್ಕಾಂ ಕಿರಿಯ ಪವರ್ ಮ್ಯಾನ್‌ಗಳ ನೇಮಕಾತಿ ಪೂರ್ಣ

KannadaprabhaNewsNetwork |  
Published : Jun 03, 2025, 12:14 AM IST
30ಮೆಸ್ಕಾಂ | Kannada Prabha

ಸಾರಾಂಶ

ಕರ್ನಾಟಕ ಸರ್ಕಾರದ ಮಂಗಳೂರು ವಿದ್ಯುತ್ ಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಇದರ ಉಡುಪಿ ವಲಯದ ಆಶ್ರಯದಲ್ಲಿ ಮೇ 26 ರಿಂದ 29ರವರೆಗೆ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಿರಿಯ ಪವರ್ ಮ್ಯಾನ್‌ಗಳ ನೇಮಕಾತಿ ಅಂಗವಾಗಿ ಸಹನಶಕ್ತಿ ಪರೀಕ್ಷೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಕರ್ನಾಟಕ ಸರ್ಕಾರದ ಮಂಗಳೂರು ವಿದ್ಯುತ್ ಚ್ಛಕ್ತಿ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ಇದರ ಉಡುಪಿ ವಲಯದ ಆಶ್ರಯದಲ್ಲಿ ಮೇ 26 ರಿಂದ 29ರವರೆಗೆ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಿರಿಯ ಪವರ್ ಮ್ಯಾನ್‌ಗಳ ನೇಮಕಾತಿ ಅಂಗವಾಗಿ ಸಹನಶಕ್ತಿ ಪರೀಕ್ಷೆ ನಡೆಸಲಾಯಿತು.ಈ ಪರೀಕ್ಷಾ ಕೇಂದ್ರಕ್ಕೆ ಮೆಸ್ಕಾಂ ನಿರ್ವಾಹಕ ನಿರ್ದೇಶಕ ಜಯಕುಮಾರ್ ಭೇಟಿ ನೀಡಿ, ನೇಮಕಾತಿಯ ವಿವಿಧ ಚಟುವಟಿಕೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮೆಸ್ಕಾಂಗೆ ರಾಜ್ಯದಲ್ಲಿಯೇ ಹೆಚ್ಚಿನ ಪವರ್ ಮ್ಯಾನ್‌ಗಳ ಅವಶ್ಯಕತೆ ಇದ್ದು, ಉಡುಪಿ, ಮಂಗಳೂರು, ಶಿವಮೊಗ್ಗ ಕೇಂದ್ರಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತಿದೆ. ಈ ಪರೀಕ್ಷಾ ಪ್ರಕ್ರಿಯೆಗಳನ್ನು ಸಂಪೂರ್ಣ ವೀಡಿಯೊ ಚಿತ್ರೀಕರಣ ನಡೆಸಿ ಪಾರದರ್ಶಕತೆ ನಿರ್ವಹಿಸಲಾಗಿದೆ. ಈಬಾರಿ ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ಸು ಕಂಡಿದ್ದಾರೆ. ಉಡುಪಿಯಲ್ಲಿ 31 ಮಹಿಳೆಯರು ಸಹಿತ ಸುಮಾರು 201 ಪವರ್ ಮ್ಯಾನ್ ಈ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ಮೆಸ್ಕಾಂನ ಆರ್ಥಿಕ ಸಲಹೆಗಾರ ಮುರುಳಿಧರ್ ನಾಯಕ್, ಮೆಸ್ಕಾಂ ವಲಯ ನಿಯಂತ್ರಣ ಅಧಿಕಾರಿ ಉಮೇಶ್ ಗಟ್ಟಿ, ಸಹಾಯಕ ಮಹಾಪ್ರಬಂಧಕ ವಸಂತ ಶೆಟ್ಟಿ, ಉಡುಪಿ ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯಾಯ, ಅಧಿಕಾರಿಗಳಾದ ಪ್ರಸನ್ನ ಕುಮಾರ್, ಗಣರಾಜ್ ಭಟ್, ಮೆಸ್ಕಾಂ ವಿವಿಧ ವಿಭಾಗದ ಕಾರ್ಕಳ, ಹೆಬ್ರಿ, ಬೈಂದೂರು, ಕುಂದಾಪುರ, ಬ್ರಹ್ಮಾವರ, ಕಾಪು ಅಧಿಕಾರಿಗಳು, ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ