ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಅಪರಾಧಿಗೆ ಆರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿ, ದೂರುದಾರರಿಗೆ ₹೯.೦೫ ಲಕ್ಷ ಪರಿಹಾರ ನೀಡುವಂತೆ ಜಮಖಂಡಿಯ ೧ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ
ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಅಪರಾಧಿಗೆ ಆರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಿ, ದೂರುದಾರರಿಗೆ ₹೯.೦೫ ಲಕ್ಷ ಪರಿಹಾರ ನೀಡುವಂತೆ ಜಮಖಂಡಿಯ ೧ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.ತೇರದಾಳದ ಈರಣ್ಣ ಮಂಗಸೂಳಿ ಅವರು ಘಟಪ್ರಭಾದ ರೇವಪ್ಪ ಪುಕಾಟೆ ಅವರಿಗೆ ೨೦೨೧ರ ಜೂನ್ ೮ರಂದು ₹೯ ಲಕ್ಷ ಕೈಗಡ ಸಾಲ ನೀಡಿದ್ದರು. ಸಾಲ ಮರುಪಾವತಿಗಾಗಿ ಆರೋಪಿ ನೀಡಿದ್ದ ಚೆಕ್ ಹಣದ ಕೊರತೆಯಿಂದ ಬೌನ್ಸ್ ಆಗಿತ್ತು. ಈ ಹಿನ್ನೆಲೆ ೨೦೨೨ರಲ್ಲಿ ಬನಹಟ್ಟಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ವಿಚಾರಣೆ ನಡೆಸಿದ ಬನಹಟ್ಟಿ ನ್ಯಾಯಾಲಯ ದೂರುದಾರರು ಆರ್ಥಿಕವಾಗಿ ಸಬಲರಲ್ಲ ಎಂಬ ಕಾರಣ ನೀಡಿ ಪ್ರಕರಣ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಈರಣ್ಣ ಮಂಗಸೂಳಿ ಅವರು ೨೦೨೬ರ ಜನವರಿ ೨೭ರಂದು ಜಮಖಂಡಿಯ ೧ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.ಪ್ರಕರಣವನ್ನು ಸುದೀರ್ಘವಾಗಿ ಪರಿಶೀಲಿಸಿದ ನ್ಯಾಯಾಧೀಶರಾದ ಮಹಮ್ಮದ್ ಇಮ್ತಿಯಾಜ್ ಅಹ್ಮದ್ ಅವರು ಕೆಳಹಂತದ ನ್ಯಾಯಾಲಯದ ಆದೇಶ ರದ್ದುಪಡಿಸಿ, ಆರೋಪಿಗೆ ಆರು ತಿಂಗಳ ಸರಳ ಜೈಲು ಶಿಕ್ಷೆ ಹಾಗೂ ದೂರುದಾರರಿಗೆ ₹೯.೦೫ ಲಕ್ಷ ಪರಿಹಾರ ನೀಡುವಂತೆ ನ.೧೩ರಂದು ಆದೇಶಿಸಿದ್ದಾರೆ. ದೂರುದಾರರ ಪರ ವಕೀಲ ಬಸವರಾಜ ಪುಟಾಣಿ ವಾದ ಮಂಡಿಸಿದ್ದರು.
