ಅಕ್ರಮವಾಗಿ ಪಿಂಚಣಿ ಮಂಜೂರು: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಯುಕ್ತರ ಸೂಚನೆ

KannadaprabhaNewsNetwork |  
Published : Jun 03, 2025, 12:15 AM IST
- ಡಾ. ಕಾಂತರಾಜ್‌, ತರೀಕೆರೆ ಉಪವಿಭಾಗಾಧಿಕಾರಿ | Kannada Prabha

ಸಾರಾಂಶ

ಕಡೂರು, ತಾಲೂಕಿನಲ್ಲಿ ಕಳೆದ ವರ್ಷ ಅನರ್ಹರಿಗೆ ಮಂಜೂರು ಮಾಡಲಾಗಿರುವ ಪಿಂಚಣಿ ರದ್ದುಗೊಳಿಸಿ ಅಕ್ರಮ ಮಂಜೂರಾತಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು ವರದಿ ನೀಡುವಂತೆ ಕಂದಾಯ ಇಲಾಖೆಯ ಆಯುಕ್ತರು ತರೀಕೆರೆ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

- ಕಡೂರು ತಾಲೂಕು ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿ ಗೋಲ್ ಮಾಲ್‌ । ದೋಷಾರೋಪಣಾ ಪಟ್ಟಿ ಸಲ್ಲಿಸಲು ಎಸಿ ಸೂಚನೆ

--

- ನಿಯಮಾನುಸಾರ ಕ್ರಮ ಕೈಗೊಂಡು ವರದಿ ನೀಸಲು ಸೂಚನೆ

- ನಾಡ ಕಚೇರಿ ತಂತ್ರಾಂಶವನ್ನು ದುರ್ಬಳಕೆ

- ಸರ್ಕಾರದ ಬೊಕ್ಕಸಕ್ಕೆ 2.26,09,160 ಕೋಟಿ ನಷ್ಟ

- ಅನ್ಯ ವ್ಯಕ್ತಿಗಳ ಖಾತೆಗೆ ಪಿಂಚೂಣಿ ಮೊತ್ತ ಜಮೆಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನಲ್ಲಿ ಕಳೆದ ವರ್ಷ ಅನರ್ಹರಿಗೆ ಮಂಜೂರು ಮಾಡಲಾಗಿರುವ ಪಿಂಚಣಿ ರದ್ದುಗೊಳಿಸಿ ಅಕ್ರಮ ಮಂಜೂರಾತಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು ವರದಿ ನೀಡುವಂತೆ ಕಂದಾಯ ಇಲಾಖೆಯ ಆಯುಕ್ತರು ತರೀಕೆರೆ ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಹಿನ್ನಲೆಯಲ್ಲಿ ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್‌ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸುವಂತೆ ಕಡೂರು ತಹಸೀಲ್ದಾರ್ ಅವರಿಗೆ ಸೂಚಿಸಿದ್ದಾರೆ.

ಕಡೂರು ತಾಲೂಕು ಕಚೇರಿಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಪಿಂಚಣಿಗಳ ಮಂಜೂರಾತಿಯಲ್ಲಿ ತಹಸೀಲ್ದಾರ್ (ಗ್ರೇಡ್-2), ಶಿರಸ್ತೇದಾರ್, ಉಪ ತಹಸೀಲ್ದಾರ್, ನಾಡ ಕಚೇರಿ ತಂತ್ರಾಂಶವನ್ನು ದುರ್ಬಳಕೆ ಮಾಡಿಕೊಂಡು ಎನ್.ಕೆ. 4 ತಂತ್ರಾಂಶದಲ್ಲಿ ಒಟ್ಟು 1451 ಪ್ರಕರಣಗಳು ಹಾಗೂ ಎನ್.ಕೆ. 5 ತಂತ್ರಾಂಶದಲ್ಲಿ ಒಟ್ಟು 64 ಪ್ರಕರಣಗಳಲ್ಲಿ ಅಕ್ರಮವಾಗಿ ಪಿಂಚಣಿ ಮಂಜೂರಾತಿ ನೀಡಿ ಸರ್ಕಾರದ ಬೊಕ್ಕಸಕ್ಕೆ 2.26,09,160 ಕೋಟಿಯಷ್ಟು ಆರ್ಥಿಕ ನಷ್ಟ ಉಂಟು ಮಾಡಿದ್ದ ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಭಾಗಿಯಾದ ಸಂಬಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ‌.

ಕಡೂರು ತಾಲೂಕು ಕಚೇರಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಿರಸ್ತೇದಾರ್ ಬಿ.ಸಿ. ಕಲ್ಮರುಡಪ್ಪ ಅಕ್ರಮವಾಗಿ ಅನ್ಯ ವ್ಯಕ್ತಿಗಳ ಖಾತೆಗೆ ಪಿಂಚೂಣಿ ಮೊತ್ತವನ್ನು ಜಮೆಯಾಗುವಂತೆ ಕ್ರಮವಹಿಸಿರುವುದಾಗಿ ದೂರಿನ ಹಿನ್ನೆಲೆಯಲ್ಲಿ ಶಿರಸ್ತೇದಾರ್ ಒಳಗೊಂಡು ಕಂದಾಯ ವಿಭಾಗದ 11 ಜನ ಅಧಿಕಾರಿಗಳ ವಿರುದ್ಧ ಕರ್ತವ್ಯ ನಿರ್ಲಕ್ಷ್ಯದಡಿ ದೋಷಾ ರೋಪಣಾ ಪಟ್ಟಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿಗಳು ತರೀಕೆರೆ ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಡೂರು ತಾಲೂಕಿನಲ್ಲಿ ಅನರ್ಹರಿಗೆ ಪಿಂಚಣಿ ಮಂಜೂರಾತಿ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಪರಿಶೀಲನಾ ಪ್ರಕ್ರಿಯೆ ಕೈಗೊಳ್ಳುವಂತೆ ಆಯುಕ್ತರು ಈಗಾಗಲೇ ನಿರ್ದೇಶಿಸಿದ್ದಾರೆ.--- ಬಾಕ್ಸ್‌ ----ಈಗಾಗಲೇ ಅಕ್ರಮ ಪಿಂಚೂಣಿ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ವಿಭಾಗದ ಅಧಿಕಾರಿ ಹಾಗೂ ನೌಕರರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವುದು ಅವಶ್ಯವಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸುವಂತೆ ಕಡೂರು ತಹಸೀಲ್ದಾರ್ ಅವರಿಗೆ ಸೂಚಿಸಲಾಗಿದೆ.- ಡಾ. ಕಾಂತರಾಜ್‌,

ತರೀಕೆರೆ ಉಪವಿಭಾಗಾಧಿಕಾರಿ 2 ಕೆಸಿಕೆಎಂ 4

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ