ಹಗರಿಬೊಮ್ಮನಹಳ್ಳಿ: ರೆಡ್ಡಿ ಸಮಾಜ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ. ಸಮಾಜದ ಭವನ ನಿರ್ಮಾಣಕ್ಕೆ ಲೋಕಸಭೆ ಚುನಾವಣೆ ಬಳಿಕ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಶಾಸಕ ಕೆ. ನೇಮರಾಜನಾಯ್ಕ ತಿಳಿಸಿದರು.
ರೆಡ್ಡಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಆರ್. ಕೇಶವರೆಡ್ಡಿ ಮಾತನಾಡಿ, ಸಮಾಜದ ಕಲ್ಯಾಣ ಮಂಟಪದ ಬೇಡಿಕೆಯನ್ನು ಸರ್ಕಾರದ ಮುಂದಿರಿಸಿ ಅನುದಾನ ಪಡೆಯುವ ಪ್ರಯತ್ನ ಮಾಡೋಣ. ಸಮಾಜದ ನಾಯಕ ಎಚ್.ಕೆ. ಪಾಟೀಲ್ ಮತ್ತು ರಾಮಲಿಂಗರೆಡ್ಡಿ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದ ಫಲವಾಗಿ ಹೇಮರಡ್ಡಿ ಮಲ್ಲಮ್ಮ ಮತ್ತು ವೇಮನ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಲಾಗುತ್ತಿದೆ ಎಂದರು.
ನೂತನ ರೆಡ್ಡಿ ಸಮಾಜದ ಅಧ್ಯಕ್ಷ ಎಂ. ಬಸವರಾಜ ರೆಡ್ಡಿ ಮಾತನಾಡಿ, ಸಮಾಜದ ಪ್ರಗತಿಗೆ ಪೂರಕ ಕ್ರಮ ಮತ್ತು ಹೋರಾಟ ರೂಪಿಸಲಾಗುವುದು. ದಾನಿಗಳ ನೆರವಿನೊಂದಿಗೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಶ್ರಮಿಸಲಾಗುವುದು ಎಂದರು.ಡಾ. ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇದೇ ವೇಳೆ ಯುವ ಘಟಕದ ಅಧ್ಯಕ್ಷರಾಗಿ ಪ್ರವೀಣ್ ರೆಡ್ಡಿ ಅಧಿಕಾರ ಸ್ವೀಕರಿಸಿದರು. ರೈತಪರ ಹೋರಾಟಗಾರ ಜೆ.ಎಂ. ವೀರಸಂಗಯ್ಯ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಡಾ. ಬಸವರಾಜ ರೆಡ್ಡಿ, ಬನ್ನಿಗೋಳ ವೆಂಕಣ್ಣ, ಸಂಜೀವರೆಡ್ಡಿ, ಹನುಮರೆಡ್ಡಿ, ದೊಡ್ಡಬಸಪ್ಪ ರೆಡ್ಡಿ, ಪ್ರದೀಪ್ ಗುಡ್ಡದ್, ಯಲ್ಲಪ್ಪಗೌಡ ಪೂಜಾರ್, ರಾಜಶೇಖರರೆಡ್ಡಿ, ಇತರರಿದ್ದರು. ಕಸಾಪ ಮಾಜಿ ಅಧ್ಯಕ್ಷ ಯಂಕರೆಡ್ಡಿ, ಜಿ. ಹನುಮರೆಡ್ಡಿ, ಸುಗ್ಗನಹಳ್ಳಿ ವೆಂಕರೆಡ್ಡಿ, ಬಸವರೆಡ್ಡಿ, ಶಿವರೆಡ್ಡಿ ನಿರ್ವಹಿಸಿದರು.