ರಾಜ್ಯ ಸರ್ಕಾರ ಬಡಮಕ್ಕಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಲಾಭದಿಂದ ವಂಚಿಸುತ್ತಿದೆ: ಸಿ.ಟಿ.ರವಿ

KannadaprabhaNewsNetwork |  
Published : Nov 19, 2023, 01:30 AM IST

ಸಾರಾಂಶ

ಈಗಾಗಲೇ ಕಾಂಗ್ರೆಸ್ ನಾಯಕರಾದ ಡಿಕೆಶಿ, ಎಂ.ಬಿ. ಪಾಟೀಲ್, ಡಾ.ಪರಮೇಶ್ವರ್ ನಡೆಸುವ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ‌ ಇದೆ, ಆದರೆ ಅವರದ್ದೇ ಸರ್ಕಾರ ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿ ಬೇಡ ಎನ್ನುತ್ತಿದೆ. ಇಂತಹ ರಾಜಕೀಯದಿಂದ ಬಡಮಕ್ಕಳಿಗೆ ಉತ್ತಮ ಶಿಕ್ಷಣದಿಂದ ವಂಚಿಸಬೇಡಿ ಎಂದವರು ಸಲಹೆ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸದೆ, ಬಡ ಮಕ್ಕಳಿಗೆ ಈ ನೀತಿಯಿಂದಾಗುವ ಲಾಭಗಳಿಂದ ವಂಚಿಸುತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಆರೋಪಿಸಿದ್ದಾರೆ.

ಅವರು ಶನಿವಾರ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಅನಾಹುತ ಆಗುತ್ತದೆ. ಆದರೆ ರಾಜ್ಯ ಸರ್ಕಾರ ಇದನ್ನು ಪರಿಗಣಿಸದೆ ರಾಜಕೀಯ ಮಾಡುತ್ತಿದೆ. ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕ ಅಭಿಪ್ರಾಯಕೊಟ್ಟಿತ್ತು. ಆದರೆ ಈಗ ಅದನ್ನು ಜಾರಿಗೆ ತರುವುದಿಲ್ಲ ಎಂದು ಹಠಮಾರಿ ಧೋರಣೆ ತೋರಿಸುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೋಷಗಳಿದ್ದರೆ ಹೇಳಿ, ಸರಿಪಡಿಸಬಹುದು, ಆದರೆ ಯಾವುದಕ್ಕೆ ನಿಮ್ಮ ವಿರೋಧ, ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ನಿಮ್ಮ ವಿರೋಧವೇ, ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣಕ್ಕೆ ನಿಮ್ಮ ವಿರೋಧವೇ ಎಂದು ಪ್ರಸ್ನಿಸಿದ ಸಿ.ಟಿ.ರವಿ, ಪ್ರಾದೇಶಿಕ ಭಾಷೆ ಶಿಕ್ಷಣದಿಂದ ಕಲಿಕೆ ಸುಲಭವಾಗುತ್ತದೆ, ಮಾತೃಭಾಷೆ ಜೊತೆಗೆ ಇನ್ನೆರಡು ಭಾಷೆ ಕಲಿಯುವುದಕ್ಕೆ ಅವಕಾಶ ಇದೆ. ಆದರೆ ಭಾಷಾ ಬಾಂಧವ್ಯ ನಿರ್ಮಾಣ ನಿಮಗೆ ಸಹ್ಯ ಆಗ್ತಾ ಇಲ್ಲವೇ, ನಾವು ಅನ್ಯಭಾಷೀಯರ ಜೊತೆ ಜಗಳವಾಡುತ್ತಲೇ ಇರಬೇಕೇ, ಕೌಶಲದ ತರಬೇತಿ ನೀಡುವುದು ಅಪರಾಧವೇ ಎಂದು ಸಾಲುಸಾಲು ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟರು.

ಈಗಾಗಲೇ ಕಾಂಗ್ರೆಸ್ ನಾಯಕರಾದ ಡಿಕೆಶಿ, ಎಂ.ಬಿ. ಪಾಟೀಲ್, ಡಾ.ಪರಮೇಶ್ವರ್ ನಡೆಸುವ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ‌ ಇದೆ, ಆದರೆ ಅವರದ್ದೇ ಸರ್ಕಾರ ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿ ಬೇಡ ಎನ್ನುತ್ತಿದೆ. ಇಂತಹ ರಾಜಕೀಯದಿಂದ ಬಡಮಕ್ಕಳಿಗೆ ಉತ್ತಮ ಶಿಕ್ಷಣದಿಂದ ವಂಚಿಸಬೇಡಿ ಎಂದವರು ಸಲಹೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ