ರಾಜ್ಯ ಸರ್ಕಾರಿದಂದ ನೀರಾವರಿ ಯೋಜನೆ ನಿರ್ಲಕ್ಷ :ಮುನವಳ್ಳಿ

KannadaprabhaNewsNetwork |  
Published : Jul 30, 2026, 02:30 AM IST
30ುಲು3 | Kannada Prabha

ಸಾರಾಂಶ

ರೈತರ ಜ್ವಲಂತ ಸಮಸ್ಯೆಯಾಗಿರುವ ತುಂಗಭದ್ರಾ ಯೋಜನೆಯಲ್ಲಿ ಬರುವ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ

ಗಂಗಾವತಿ: ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ ಶಾಸಕರು ಸಚಿವ ಸಂಪುಟ ಕಸರತ್ತಿನಲ್ಲಿ ನೀರಾವರಿ ಯೋಜನೆ ನಿರ್ಲಕ್ಷಿಸಿದ್ದಾರೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಆರೋಪಿಸಿದ್ದಾರೆ.

ಬುಧವಾರ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ರೈತರ ಜ್ವಲಂತ ಸಮಸ್ಯೆಯಾಗಿರುವ ತುಂಗಭದ್ರಾ ಯೋಜನೆಯಲ್ಲಿ ಬರುವ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಈಗಾಗಲೇ ಹಲವಾರು ಬಾರಿ ಈ ಕುರಿತು ಜಿಲ್ಲಾಧಿಕಾರಿ ಹಾಗೂ ನೀರಾವರಿ ಅಧಿಕಾರಿಗಳನ್ನು ಭೇಟಿಯಾದರೂ ಗಮನಹರಿಸುತ್ತಿಲ್ಲ ಎಂದು ದೂರಿದರು.

ನವಲಿ ಬಳಿ ಸಮಾನಂತರ ಜಲಾಶಯ ನಿರ್ಮಾಣದ ಬಗ್ಗೆ ಮೂರು ರಾಜ್ಯದ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಚರ್ಚಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಕಾವೇರಿ ಯೋಜನೆ ಬಗ್ಗೆ ಮಾತನಾಡುವ ಸಿಎಂ ಕಲ್ಯಾಣ ಕರ್ನಾಟಕ ಪ್ರದೇಶದ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

ವಿಜಯನಗರ ಕಾಲುವೆ 11ಎಗೆ ನೀರು ಬಿಡುವಂತೆ ಒತ್ತಾಯಿಸಿ ಜು.31ರಂದು ಅಂಜನಾದ್ರಿಯಿಂದ ತುಂಗಭದ್ರಾ ಜಲಾಶಯದವರೆಗೂ ಪಾದಯಾತ್ರೆ ಮತ್ತು ಹೋರಾಟ ನಡೆಸಲಾಗುವುದು ಎಂದರು.

ಬಿಜೆಪಿ ಮುಖಂಡ ಬಸವರಾಜ್ ಕ್ಯಾಟರ್ ಮಾತನಾಡಿ, ಕೊಪ್ಪಳ ಗಂಗಾವತಿ ಸೇರಿದಂತೆ 25ಕ್ಕು ಹೆಚ್ಚು ಗ್ರಾಮಗಳ ರೈತರು ವಿಜಯನಗರ ಕಾಲುವೆಗಳಿಗೆ ನೀರು ಬಿಡುವಂತೆ ಪ್ರತಿಭಟನೆ ನಡೆಸಿ ಒತ್ತಾಯಿಸಲಾಗುತ್ತದೆ. ಸುಮಾರು 6 ರಿರಂದ 7 ಸಾವಿರ ರೈತರು ಭಾಗವಹಿಸುತ್ತಾರೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಬಿಜೆಪಿ ನಾಯಕರಗಳ ತಂಡ ಬರ ಜಿಲ್ಲೆಗಳಿಗೆ ಭೇಟಿ ನೀಡಿ ರೈತರಿಗೆ ಕೂಡಲೇ ಬರ ಪರಿಹಾರ ನೀಡುವಂತೆ ಒತ್ತಾಯಿಸಿದೆ ಎಂದರು.

ಈ ಸಂದರ್ಭದಲ್ಲಿ ವಿರೂಪಾಕ್ಷಪ್ಪ ಸಿಂಗನಾಳ,ಮನೋಹರಗೌಡ ಹೇರೂರು, ಚನ್ನಪ್ಪ ಮಳಗಿ, ಡಿ.ಕೆ.ಆಗೋಲಿ, ಚಂದ್ರಶೇಖರ ಹಿರಿಯೂರು, ವಿರೇಶ ಬಲಕುಂದಿ, ನಾರಾಯಣಪ್ಪ, ಶಿವಪ್ಪ ಗಾಂದಿನಗರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಿ ವಿಚಾರ ತಿಳಿಸುವವರಿಗೆ ಶತೃಗಳು ಸಹಜ: ರಾಘವೇಶ್ವರ ಶ್ರೀ
ಅಘನಾಶಿನಿ ಅಪ್ಪೇಮಿಡಿ ಪ್ರದೇಶಕ್ಕೆ ಜೀವವೈವಿಧ್ಯ ತಾಣದ ಮಾನ್ಯತೆ